ಉಡುಪಿ: ಉದ್ಯಮಿ ಡೇವಿಡ್ ಡಿ’ಸೋಜಾ ಅವರನ್ನು ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ಮತ್ತೆರಡು ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಜಿಲ್ಲಾ ಪೊಲೀಸರು,ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಎರ್ಮಾಳ್ ಕಿಶೋರ್ ಪೂಜಾರಿ (47) ಹಾಗೂ ಕುತ್ಯಾರ್ ನಿವಾಸಿ ಸದಾನಂದ ದೇವಾಡಿಗ ( 45) ಬಂಧಿತರು.
ಆರೋಪಿ ಕಿಶೋರ್ ಹಣವನ್ನು ಆರೋಪಿ ಸದಾನಂದನಿಗೆ ವರ್ಗಾವಣೆ ಮಾಡಿದ್ದು, ಸದಾನಂದ ಅದನ್ನು ಮೂವರು ಸುಪಾರಿ ಕೊಲೆಗಾರರಿಗೆ ವರ್ಗಾಯಿಸಿದ್ದಾನೆ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈವರೆಗೆ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.















