ಶಿವಗಂಗೆ ಟೆಕ್ಕಿ ಮಿಸ್ಸಿಂಗ್ ಕೇಸ್‌: ಪ್ಲ್ಯಾನ್ ಮಾಡಿಯೇ ಅದ್ವೈತ್ ನಾಪತ್ತೆ

ಬೆಂಗಳೂರು: ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾಗಿರುವ ಟೆಕ್ಕಿ (Trekking) ಅದ್ವೈತ್ ಉಪಾಧ್ಯಾಯ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಗುವ ಸಾಧ್ಯತೆ ಇದೆ. ಅದ್ವೈತ್ ಆತ್ಮಹತ್ಯೆ (Advaith Missing Case) ಮಾಡಿಕೊಂಡಿರುವಂತೆ ಬಿಂಬಿಸಿ ಉದ್ದೇಶಪೂರ್ವಕವಾಗಿ ನಾಪತ್ತೆಯಾಗಿದ್ದಾನಾ ಎಂಬ ಅನುಮಾನ ಪೊಲೀಸರಿಗೆ ಮೂಡಿದೆ. ಕಳೆದ ಮೂರು ದಿನಗಳಿಂದ ಪೊಲೀಸರ ಐದು ತಂಡಗಳು ಶಿವಗಂಗೆ ಬೆಟ್ಟವನ್ನು ಇಂಚಿಂಚಾಗಿ ಪರಿಶೀಲನೆ ನಡೆಸಿವೆ. ಬೆಟ್ಟದ ಹಲವು ಭಾಗಗಳಲ್ಲಿ ಶೋಧ ನಡೆಸಿದರೂ, ಇದುವರೆಗೂ ಅದ್ವೈತ್ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಅಥವಾ ಆತನಿಗೆ ಏನಾದರೂ ಆಗಿರುವುದಕ್ಕೆ ಒಂದೇ ಒಂದು ಪ್ರಮುಖ ಸುಳಿವು […]

ಹೊಸ ಸಚಿವ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ, ಯಾರಿಗೆ ಯಾವ ಖಾತೆ?

ಬೆಂಗಳೂರು: ಹಲವು ಸುತ್ತಿನ ಸಭೆಗಳ ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಸಚಿವ ಚಲುವರಾಯಸ್ವಾಮಿ ಅವರಿಗೆ ಕೃಷಿ ಖಾತೆ ನೀಡಲಾಗಿದ್ದು, ಜಮೀರ್ ಅಹ್ಮದ್ ಖಾನ್ ಅವರಿಗೆ ವಸತಿ ಹಾಗೂ ವಕ್ಫ್ ಖಾತೆ ಹಂಚಿಕೆ ಮಾಡಲಾಗಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಆಹಾರ ಖಾತೆ ಹೊಂದಿದ್ದ ಮುನಿಯಪ್ಪ ಅವರಿಗೆ ಈ ಬಾರಿ ಸಮಾಜ ಕಲ್ಯಾಣ ಖಾತೆ ನೀಡಲಾಗಿದೆ. ಮುನಿಯಪ್ಪ ಅವರು ಸಮಾಜ ಕಲ್ಯಾಣ ಖಾತೆ ನೀಡುವಂತೆ ಒತ್ತಾಯಿಸಿದ್ದರು. ಇದೀಗ ಅವರ ಬೇಡಿಕೆಯಂತೆ ಅದೇ ಖಾತೆಯನ್ನು […]

ದರ್ಶನ್‌, ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಸಿಸಿಬಿ ತಪಾಸಣೆ: ಏನೆಲ್ಲಾ ಸಿಕ್ಕಿದೆ ನೋಡಿ

Darshan: ನಟ ದರ್ಶನ್‌ಗೆ ಮತ್ತೊಂದು ಶಾಕ್ ಎದುರಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಆಗಸ್ಟ್ 11ರಂದು ಸಿಸಿಬಿ ಪೊಲೀಸರು ದಿಢೀರ್ ತಪಾಸಣೆ ನಡೆಸಿದ್ದು, ದರ್ಶನ್ ಇದ್ದ ಬ್ಯಾರಕ್‌ನ್ನೂ ಪರಿಶೀಲಿಸಿದ್ದಾರೆ. ಸಜಾ ಬಂಧಿಗಳ ಬ್ಯಾರಕ್‌ಗಳಲ್ಲಿ ನಡೆದ ಈ ತಪಾಸಣೆಯಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಇದ್ದ ಬ್ಯಾರಕ್‌ಗಳನ್ನೂ ಸುಮಾರು ಒಂದು ಗಂಟೆಗಳ ಕಾಲ ಪರಿಶೀಲಿಸಲಾಗಿದೆ. ಬ್ಯಾರಕ್‌ನ ಮೂಲೆಮೂಲೆ, ಬಟ್ಟೆ ಬ್ಯಾಗ್, ಸೂಟ್‌ಕೇಸ್ ಸೇರಿದಂತೆ ಹಲವು ಸ್ಥಳಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ತಪಾಸಣೆ ವೇಳೆ ಪೊಲೀಸರು ಬ್ಯಾರಕ್ ಪರಿಶೀಲಿಸುತ್ತೇವೆ […]

ಹರ್ಷ”ದಲ್ಲಿ ಸುರಿಯಲಿದೆ ಭರ್ಜರಿ ಆಫರ್ ಗಳ ವರ್ಷಧಾರೆ! ಮೈ ಫ್ರೀಡಂ ಸೇಲ್ ನಲ್ಲಿ ಬಂಪರ್ ಬಹುಮಾನಗಳು, Ather EV ಸ್ಕೂಟರ್ ನ ಸವಾರಿ ಭಾಗ್ಯ ನಿಮಗೂ ಸಿಗಬಹುದು

ಉಡುಪಿ: ಈ ಸೀಸನ್‌ನ ಬಹುನಿರೀಕ್ಷಿತ ‘My Freedom Sale’ ಹರ್ಷ ಮಳಿಗೆಗಳಲ್ಲಿ ಆರಂಭಗೊಂಡಿದ್ದು, ಗ್ರಾಹಕರಿಗೆ ವಿವಿಧ ವಿಭಾಗಗಳ ಉತ್ಪನ್ನಗಳ ಮೇಲೆ ಭರ್ಜರಿ ಆಫರ್‌ಗಳು ಲಭ್ಯವಿವೆ.ಸ್ವಾತಂತ್ರ್ಯ ದಿನದಂದು ಹರ್ಷದಲ್ಲಿ ಭರ್ಜರಿ ಬಹುಮಾನಗಳ ವರ್ಷಧಾರೆಯಾಗಲಿದೆ. ಬಹುಮಾನಗಳ ಸುರಿಮಳೆ! ಮಾರಾಟ ಮೇಳದ ಪ್ರಮುಖ ಆಕರ್ಷಣೆಯಾಗಿ 10 ಅದೃಷ್ಟಶಾಲಿ ವಿಜೇತರಿಗೆ Ather EV ಸ್ಕೂಟರ್ ಗೆಲ್ಲುವ ಅವಕಾಶ ನೀಡಲಾಗಿದೆ. ಇದರೊಂದಿಗೆ ಫೈನಾನ್ಸ್ ಖರೀದಿಗೆ ₹40,000ವರೆಗೆ ತಕ್ಷಣದ ರಿಯಾಯಿತಿ, ₹26,000ವರೆಗೆ ಇನ್‌ಸ್ಟಂಟ್ ಕ್ಯಾಶ್‌ಬ್ಯಾಕ್ ಹಾಗೂ ₹10,000ವರೆಗೆ ಅಪ್‌ಗ್ರೇಡ್ ಬೋನಸ್ ಸಿಗಲಿದೆ. ಖರೀದಿಯೊಂದಿಗೆ ಖಚಿತ ಉಡುಗೊರೆಗಳನ್ನು […]