ಹೊಸ ಸಚಿವ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ, ಯಾರಿಗೆ ಯಾವ ಖಾತೆ?

ಬೆಂಗಳೂರು: ಹಲವು ಸುತ್ತಿನ ಸಭೆಗಳ ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಸಚಿವ ಚಲುವರಾಯಸ್ವಾಮಿ ಅವರಿಗೆ ಕೃಷಿ ಖಾತೆ ನೀಡಲಾಗಿದ್ದು, ಜಮೀರ್ ಅಹ್ಮದ್ ಖಾನ್ ಅವರಿಗೆ ವಸತಿ ಹಾಗೂ ವಕ್ಫ್ ಖಾತೆ ಹಂಚಿಕೆ ಮಾಡಲಾಗಿದೆ.

ಸಿದ್ದರಾಮಯ್ಯ ಸಂಪುಟದಲ್ಲಿ ಆಹಾರ ಖಾತೆ ಹೊಂದಿದ್ದ ಮುನಿಯಪ್ಪ ಅವರಿಗೆ ಈ ಬಾರಿ ಸಮಾಜ ಕಲ್ಯಾಣ ಖಾತೆ ನೀಡಲಾಗಿದೆ. ಮುನಿಯಪ್ಪ ಅವರು ಸಮಾಜ ಕಲ್ಯಾಣ ಖಾತೆ ನೀಡುವಂತೆ ಒತ್ತಾಯಿಸಿದ್ದರು. ಇದೀಗ ಅವರ ಬೇಡಿಕೆಯಂತೆ ಅದೇ ಖಾತೆಯನ್ನು ನೀಡಲಾಗಿದೆ.

ಯಾರಿಗೆ ಯಾವ ಖಾತೆ?

  • ಚಲುವರಾಯಸ್ವಾಮಿ – ಕೃಷಿ
  • ರಿಜ್ವಾನ್ ಅರ್ಷದ್ – ಆಹಾರ
  • ಮುನಿಯಪ್ಪ – ಸಮಾಜ ಕಲ್ಯಾಣ
  • ಸಂತೋಷ್ ಲಾಡ್ – ಕಾರ್ಮಿಕ
  • ಬಸಂತಪ್ಪ – ಮೀನುಗಾರಿಕೆ
  • ಮಧು ಬಂಗಾರಪ್ಪ – ಪ್ರಾಥಮಿಕ ಶಿಕ್ಷಣ
  • ರಾಯರೆಡ್ಡಿ – ಉನ್ನತ ಶಿಕ್ಷಣ
  • ಜಮೀರ್ ಅಹ್ಮದ್ – ವಸತಿ ಮತ್ತು ವಕ್ಫ್
  • ಲಕ್ಷ್ಮಣ ಸವದಿ – ಸಹಕಾರ
  • ಅಜಯ್ ಸಿಂಗ್ – ಅರಣ್ಯ
  • ಎಸ್.ಎಸ್. ಮಲ್ಲಿಕಾರ್ಜುನ – ಗಣಿ
  • ಬಾಲಕೃಷ್ಣ – ಸಣ್ಣ ನೀರಾವರಿ
  • ಪುಟ್ಟರಂಗ ಶೆಟ್ಟಿ – ಪಶುಸಂಗೋಪನೆ