ಕ್ರೈಸ್ಟ್ ಕಿಂಗ್: ಹಸಿರು ಸಂವಾದ-ಸ್ವಚ್ಚತಾ ಸಂವಾದ ಮಾಹಿತಿ ಕಾರ್ಯಕ್ರಮ

ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಸ್ವಚ್ಚ ಬ್ರಿಗೇಡ್ ಕಾರ್ಕಳ ಇದರ ವತಿಯಿಂದ ವಿದ್ಯಾರ್ಥಿಗಳಿಗೆ ಹಸಿರು ಸಂವಾದ- ಸ್ವಚ್ಚತಾ ಸಂವಾದ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಅಂತಾರಾಷ್ಟ್ರೀಯ ತ್ಯಾಜ್ಯ ನಿರ್ವಹಣಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಹಾಗೂ ಪರಿಸರ ವಿಜ್ಞಾನಿ ಪ್ರೊಫೆಸರ್ ಬಿನಿಷಾ ಪಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಸಂವಾದ ನಡೆಸಿಕೊಟ್ಟರು.ಪರಿಸರ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ ಹಾಗೂ ಸ್ವಚ್ಚತಾ ಕಾರ್ಯಗಳ ಬಗ್ಗೆ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸ್ವಚ್ಚ ಕಾರ್ಕಳ ಬ್ರಿಗೇಡ್‍ನ ಡಾ.ಶ್ರೀರಾಮ ಮುಗೆರಾಯ ಅವರು ಪರಿಸರ ಸಂರಕ್ಷಣೆಯ […]
ಈ ಎಚ್ಚರಿಕೆಗಳನ್ನು ಫಾಲೋ ಮಾಡಿದರೆ ನೀವೆಂದಿಗೂ ಸೈಬರ್ ಕಳ್ಳರ ಮೋಸದ ಜಾಲಕ್ಕೆ ಬೀಳಲ್ಲ!

ದಿನೇ ದಿನೇ ಸೈಬರ್ ಪ್ರಕರಣಗಳು ಜಾಸ್ತಿಯಾಗುತ್ತಲೇ ಇದೆ. ಯಾರೋ ಕಳಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿ ಹಣ ಕಳೆದುಕೊಳ್ಳುವವರ, ಅಥಾ ಪಾಸ್ ವರ್ಡ್ ಗಳನ್ನು ಹಂಚಿಕೊಂಡು ಮೋಸ ಹೋದವರ ಸಂಖ್ಯೆ ಹೆಚ್ಚುತ್ತಲೇ ಇದೆ.ಎಷ್ಟೇ ಜನರಲ್ಲಿ ಜಾಗೃತಿ ಮೂಡಿಸಿದರೂ ಜನ ಮತ್ತೆ ಮತ್ತೆ ಮೋಸ ಹೋಗುತ್ತಲೇ ಇದ್ದಾರೆ. ಹಾಗೆ ನೋಡಿದರೆ ಸೈಬರ್ ವಂಚನೆ ಪ್ರಕರಣಗಳಿಂದ ದೂರವಿರುವುದು ತುಂಬಾ ಸುಲಭ, ಈ ಸರಳ ಕ್ರಮವನ್ನು ಪಾಲಿಸಿ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ : ವಾಟ್ಸಾಪ್, ಫೇಸ್ಬುಕ್, ಮೊಬೈಲ್ ಮೆಸೆಜ್ ಬಾಕ್ಸ್ […]
“ತ್ರಿಶಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ”

ಉಡುಪಿ – 2026–27ನೇ ಸಾಲಿನಲ್ಲಿ ನಡೆದ ಪದವಿಪೂರ್ವ ವಿಭಾಗದ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಲಾಸ್ಯಾ ಯಾದವ್ ಕುಂದರ್ ಅವರು ವಿದ್ಯಾರ್ಥಿನಿಯರ ಕರಾಟೆ – 40 ಕೆ.ಜಿ. ವಿಭಾಗದಲ್ಲಿ ಭಾಗವಹಿಸಿ ಉತ್ತಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಈ ಸ್ಪರ್ಧೆಯು 11-08-2026ರಂದು ಮಿಲಾಗ್ರಿಸ್ ಪದವಿಪೂರ್ವ ಕಾಲೇಜು, ಕಲ್ಯಾಣಪುರದಲ್ಲಿ ನಡೆದಿದ್ದು, ವಿವಿಧ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಲಾಸ್ಯಾ ಯಾದವ್ ಕುಂದರ್ ಅವರು ಸ್ಪರ್ಧೆಯಲ್ಲಿ ಆತ್ಮವಿಶ್ವಾಸ, ಶಿಸ್ತು, ಧೈರ್ಯ ಮತ್ತು ಕ್ರೀಡಾ […]
ಡಿಕೆಶಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ

ಬೆಂಗಳೂರು: ಹಲವು ಸುತ್ತಿನ ಸಭೆಯ ಬಳಿಕ ಡಿಕೆ ಶಿವಕುಮಾರ್ (DK Shivakumar) ಸಂಪುಟದ ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಚಲುವರಾಯಸ್ವಾಮಿ ಅವರಿಗೆ ಕೃಷಿ, ಜಮೀರ್ ಅಹ್ಮದ್ ಅವರಿಗೆ ಗೃಹ ಮತ್ತು ವಕ್ಫ್ ಖಾತೆಯನ್ನು ನೀಡಲಾಗಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಮುನಿಯಪ್ಪ (Muniyappa) ಅವರಿಗೆ ಆಹಾರ ಖಾತೆಯನ್ನು ನೀಡಲಾಗಿತ್ತು. ಆದರೆ ಈ ಬಾರಿ ಸಮಾಜ ಕಲ್ಯಾಣ ಸಚಿವಾಲಯವನ್ನು ನೀಡಲಾಗಿದೆ. ಮುನಿಯಪ್ಪ ಅವರು ಸಮಾಜಕಲ್ಯಾಣ ಖಾತೆ ಬೇಕೇಂದು ಪಟ್ಟು ಹಿಡಿದಿದ್ದರು. ಅದರಂತೆ ಈಗ ಆ ಖಾತೆಯನ್ನೇ ಹಂಚಿಕೆ ಮಾಡಲಾಗಿದೆ. ಪ್ರಮಾಣವಚನ ಸ್ವೀಕರಿಸಿದ 19 […]
ಚಲನಚಿತ್ರ ನಿರ್ಮಾಣದ ಹೊಸ ತಂತ್ರಜ್ಞಾನ ಕಲಿಯುವ ಆಸೆ ಇದೆಯಾ? ಹಾಗಾದ್ರೆ ಮಣಿಪಾಲದಲ್ಲಿ ಆ.13ರಿಂದ 21ರವರೆಗೆ ನಿಮಗಾಗಿ ಇದೆ ಒಂದು ಅವಕಾಶ.

ಮಣಿಪಾಲ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಚಲನಚಿತ್ರ ನಿರ್ಮಾಣದ ವಿವಿಧ ಹಂತಗಳನ್ನು ಕಲಿಯಲು ‘AI Film Making Course’ ಆಯೋಜಿಸಲಾಗಿದೆ. ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ಹಾಗೂ ಕೌಶಲ್ ಮಣಿಪಾಲ್ ವತಿಯಿಂದ ಈ ಕೋರ್ಸ್ ನಡೆಯಲಿದೆ. ಆಗಸ್ಟ್ 13ರಿಂದ 21ರವರೆಗೆ ನಡೆಯಲಿರುವ ಕೋರ್ಸ್‌ನಲ್ಲಿ ಎರಡು ಬ್ಯಾಚ್‌ಗಳಲ್ಲಿ ತರಬೇತಿ ನೀಡಲಾಗುತ್ತದೆ. ಮೊದಲ ಬ್ಯಾಚ್‌ಗೆ ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಎರಡನೇ ಬ್ಯಾಚ್‌ಗೆ ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ತರಗತಿಗಳು ನಡೆಯಲಿವೆ. ಏನೇನು ಕಲಿಯಬಹುದು? ಕೋರ್ಸ್‌ನಲ್ಲಿ […]