ಈ ಎಚ್ಚರಿಕೆಗಳನ್ನು ಫಾಲೋ ಮಾಡಿದರೆ ನೀವೆಂದಿಗೂ ಸೈಬರ್ ಕಳ್ಳರ ಮೋಸದ ಜಾಲಕ್ಕೆ ಬೀಳಲ್ಲ!

ಈ ಸರಳ ಕ್ರಮವನ್ನು ಪಾಲಿಸಿ

ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ : ವಾಟ್ಸಾಪ್, ಫೇಸ್ಬುಕ್, ಮೊಬೈಲ್ ಮೆಸೆಜ್ ಬಾಕ್ಸ್ ಎಲ್ಲಾದರೂ ಅಪರಿಚಿತರು ಲಿಂಕ್ ಗಳನ್ನು ಕಳುಹಿಸುತ್ತಾರೆ. ದಯಿಟ್ಟು ಅದನ್ನು ಕ್ಲಿಕ್ ಮಾಡಲು ಹೋಗಬೇಡಿ.

OTP / PIN / ಪಾಸ್‌ವರ್ಡ್ ಯಾರೊಂದಿಗೂ ಹಂಚಿಕೊಳ್ಳಬೇಡಿ

ಅಪರಿಚಿತರು ಓಟಿಪಿ, ಪಾಸ್ ವರ್ಡ್ ಗಳಿಗಾಗಿ ಕರೆ ಮಾಡಿದರೆ ದಯವಿಟ್ಟೂ ಯಾವುದೇ ಮಾಹಿತಿ ನೀಡಬೇಡಿ.

ತಕ್ಷಣ ಲಾಭದ ಆಫರ್‌ಗಳನ್ನು ನಂಬಬೇಡಿ

ಹೂಡಿಕೆಗಾಗಿ ಕರೆ ಮಾಡುವುದು ಯಾರಾದರೂ ಮೆಸೆಜ್ ಕಳಹಿಸುವುದು ಮಾಡುತ್ತಿರುತ್ತಾರೆ. ಅಂತಹ ಲಾಭದ ಆಸೆಗೆ ಬಲಿಯಾಗಬೇಡಿ. ಅಂತಹ ಕರೆ ಸಂದೇಶಗಳನ್ನು ನಿರ್ಲಕ್ಷ ಮಾಡಿ.

ಆನ್‌ಲೈನ್‌ ಖರೀದಿಯಲ್ಲಿ ಜಾಗರೂಕರಾಗಿರಿ

ವಿಶ್ವಾಸಾರ್ಹ ಸೈಟ್ ಗಳಿಂದ ಮಾತ್ರ ಆನ್ ಲೈನ್ ಖರೀದಿ ಮಾಡಿ, ಮೊದಲು ಕಂಪೆನಿಗಳ ಕುರಿತು ಮಾಹಿತಿ ಕಲೆ ಹಾಕಿ. ತಿಳಿದವರ ಕುರಿತು ಮಾಹಿತಿ ಪಡೆಯಿರಿ.

ಉಚಿತ Wi-Fi ಬಳಸುವಾಗ ಎಚ್ಚರಿಕೆ ವಹಿಸಿ

ಉಚಿತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗುವ ವೈ ಫೈ ಬಳಸದಿರುವುದೇ ಉತ್ತಮ, ಅಲ್ಲದೇ ನಿಮ್ಮ ಮೊಬೈಲ್ ಯಾವತ್ತೂ ಕಳೆದುಹೋಗದಂತೆ ಸುರಕ್ಷಿತವಾಗಿರಿಸಿ,

ಸೈಬರ್ ವಂಚನೆಗೆ ಬಲಿಯಾಗಿದ್ದೀರಾ? ತಕ್ಷಣ ದೂರು ನೀಡಿ

ನೀವು ಸೈಬರ್ ವಂಚನೆಗೊಳಗಾಗಿದ್ದರೆ www.cybercrime.govt.in ಆನ್ಸೆನ್ ನಲ್ಲಿ ದೂರು ನೀಡಿ

1930 ಈ ಸಹಾಯವಾಣಿಗೆ ಕರೆ ಮಾಡಿ. ತುರ್ತು ಸಹಾಯಕ್ಕಾಗಿ ಕರೆ ಮಾಡಿ 112