ರಾಜ್ಯದಲ್ಲಿ ಒಂದು ವರ್ಷ ಗುಟ್ಕಾ ಹಾಗೂ ಪಾನ್ ಮಸಾಲಾ ಬ್ಯಾನ್!

ಬೆಂಗಳೂರು: ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾಗಳ ಉತ್ಪಾದನೆ, ಶೇಖರಣೆ, ವಿತರಣೆ, ಸಾಗಣೆ ಮತ್ತು ಮಾರಾಟಕ್ಕೆ ಕರ್ನಾಟಕ ಸರ್ಕಾರ ಒಂದು ವರ್ಷದ ಅವಧಿಗೆ ರಾಜ್ಯಾದ್ಯಂತ ಸಂಪೂರ್ಣ ನಿಷೇಧ ಹೇರಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಸೆಕ್ಷನ್ 30(2)(a) ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಮಾರಾಟ ನಿಷೇಧ ಮತ್ತು ನಿರ್ಬಂಧಗಳು) ನಿಯಮಾವಳಿ-2011ರ ನಿಯಮ 2.3.4ರ ಅಡಿಯಲ್ಲಿ ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. ಅಧಿಸೂಚನೆ ಹೊರಡಿಸಿದ ದಿನದಿಂದಲೇ […]

ಜಪಾನೀಸ್ ಕಲಿತರೆ ಜಾಗತಿಕ ಮಟ್ಟದಲ್ಲೂ ಉದ್ಯೋಗಾವಕಾಶ : MSDCಯಲ್ಲಿದೆ ಜಪಾನೀಸ್ ಭಾಷೆಯ ಕೋರ್ಸ್‌, ಪಡೆಯಿರಿ ಸ್ವಾತಂತ್ರ್ಯೋತ್ಸವದ ಆಫರ್

ಮಣಿಪಾಲ: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ ಜಪಾನೀಸ್ ಭಾಷೆಯ N5 ಹಂತದ ಕೋರ್ಸ್‌ಗೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ಜಪಾನ್‌ನಲ್ಲಿ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳನ್ನು ಪಡೆಯಲು ಆಸಕ್ತಿ ಹೊಂದಿರುವವರಿಗೆ ಅನುಕೂಲವಾಗುವಂತೆ ಈ ವಿಶೇಷ ಆಫರ್ ನೀಡಲಾಗಿದ್ದು, ಆಗಸ್ಟ್ 15, 2026ರವರೆಗೆ ನೋಂದಣಿಗೆ ಅವಕಾಶವಿದೆ. ಸಾಮಾನ್ಯವಾಗಿ ₹20,000 ಶುಲ್ಕವಿರುವ ಕೋರ್ಸ್‌ಗೆ MSDC ಸಿಬ್ಬಂದಿ, ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಸಿಬ್ಬಂದಿ, MAHE ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿದಂತೆ ಅರ್ಹರಿಗೆ 50ರಷ್ಟು ರಿಯಾಯಿತಿಯೊಂದಿಗೆ ₹10,000ಕ್ಕೆ […]

ಮಲ್ಪೆ ಕಡಲ ತೀರದಲ್ಲಿ ಕರ್ಕಿಡಕವಾವು ಬಲಿತರ್ಪಣ

ಉಡುಪಿ: ಕೇರಳ ಸಮಾಜಮ್ ಉಡುಪಿ ವತಿಯಿಂದ ಉಡುಪಿಯಲ್ಲಿ ನೆಲೆಸಿರುವ ಕೇರಳ ಸಮಾಜ ಬಾಂಧವರಿಗಾಗಿ ಮಲ್ಪೆ ಕಡಲ ತೀರದಲ್ಲಿ ಬುಧವಾರ ಕರ್ಕಿಡಕವಾವು ಬಲಿತರ್ಪಣ ಕಾರ್ಯಕ್ರಮ ನಡೆಯಿತು. ಮಲಯಾಳಂ ತಿಂಗಳಾದ ಕರ್ಕಿಡಕಂನ ಅಮಾವಾಸ್ಯೆಯ ದಿನವನ್ನು ಕರ್ಕಿಡಕವಾವು ಎಂದು ಆಚರಿಸಲಾಗುತ್ತದೆ. ಈ ದಿನ ಅಗಲಿದ ಪಿತೃಗಳಿಗೆ ಪಿಂಡ ಪ್ರದಾನ ಮಾಡುವ ಸಂಪ್ರದಾಯ ಕೇರಳದಲ್ಲಿ ರೂಢಿಯಲ್ಲಿದೆ. ಕೇರಳದ ವಿವಿಧೆಡೆ ಸಾವಿರಾರು ಮಂದಿ ಈ ದಿನದಂದು ಪಿತೃಗಳಿಗೆ ಬಲಿತರ್ಪಣ ನೆರವೇರಿಸುತ್ತಾರೆ. ಉದ್ಯೋಗ, ಶಿಕ್ಷಣ ಸೇರಿದಂತೆ ವಿವಿಧ ಕಾರಣಗಳಿಂದ ಉಡುಪಿಯಲ್ಲಿ ನೆಲೆಸಿರುವ ಕೇರಳದವರಿಗೆ ಕೇರಳಕ್ಕೆ ತೆರಳಿ […]

ಉಡುಪಿ: ತುಳುಕೂಟದಿಂದ ಆಟಿಯ ಕಷಾಯ ವಿತರಣೆ

ಉಡುಪಿ: ತುಳುಕೂಟ ಉಡುಪಿ, ಲಯನ್ಸ್ ಹಾಗೂ ಲಿಯೋ ಕ್ಲಬ್ ಉಡುಪಿ–ಇಂದ್ರಾಳಿ ಇದರ ಸಹಯೋಗದಲ್ಲಿ ಆಟಿಯ ಕಷಾಯ ವಿತರಣೆ ಕಾರ್ಯಕ್ರಮ ಬುಧವಾರ ಇಂದ್ರಾಳಿ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಲಯನ್ಸ್ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಮಂದಿಗೆ ಆಟಿ ಕಷಾಯ ವಿತರಿಸಲಾಯಿತು. ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಪ್ರಕೃತಿ ಔಷಧೀಯ ಗುಣಗಳನ್ನು ಹೊಂದಿರುವ ಹಲವು ಗಿಡಮರಗಳನ್ನು ನಮಗೆ ನೀಡಿದೆ. ಹಾಲೆ ಮರದಲ್ಲಿಯೂ ಔಷಧೀಯ ಗುಣಗಳಿವೆ ಎಂಬ ನಂಬಿಕೆ ಪೂರ್ವಜರಲ್ಲಿತ್ತು. ಹೀಗಾಗಿ ಆಟಿ ಅಮಾವಾಸ್ಯೆಯಂದು ಹಾಲೆ ಮರದ ತೊಗಟೆಯಿಂದ […]

ಅಣ್ಣಾಮಲೈ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ

ಉಡುಪಿ: ಮಾಜಿ ಐಪಿಎಸ್ ಅಧಿಕಾರಿ ಹಾಗೂ ವಿ ದ ಲೀಡರ್ಸ್‌ ಸಂಸ್ಥೆಯ ಸ್ಥಾಪಕ ಕೆ. ಅಣ್ಣಾಮಲೈ ಅವರು ಬುಧವಾರ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ ದೇವರ ದರ್ಶನ ಪಡೆದರು. ಮಠದ ಆಡಳಿತ ಮಂಡಳಿ ವತಿಯಿಂದ ಅಣ್ಣಾಮಲೈ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಶ್ರೀಕೃಷ್ಣ ದೇವರ ಪೋಟೊವನ್ನು ನೀಡಿ ಗೌರವಿಸಲಾಯಿತು. ಬಳಿಕ ದೇವರ ಪ್ರಸಾದವನ್ನು ನೀಡಲಾಯಿತು.