ಮಣಿಪಾಲ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಚಲನಚಿತ್ರ ನಿರ್ಮಾಣದ ವಿವಿಧ ಹಂತಗಳನ್ನು ಕಲಿಯಲು ‘AI Film Making Course’ ಆಯೋಜಿಸಲಾಗಿದೆ. ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ಹಾಗೂ ಕೌಶಲ್ ಮಣಿಪಾಲ್ ವತಿಯಿಂದ ಈ ಕೋರ್ಸ್ ನಡೆಯಲಿದೆ.
ಆಗಸ್ಟ್ 13ರಿಂದ 21ರವರೆಗೆ ನಡೆಯಲಿರುವ ಕೋರ್ಸ್ನಲ್ಲಿ ಎರಡು ಬ್ಯಾಚ್ಗಳಲ್ಲಿ ತರಬೇತಿ ನೀಡಲಾಗುತ್ತದೆ. ಮೊದಲ ಬ್ಯಾಚ್ಗೆ ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಎರಡನೇ ಬ್ಯಾಚ್ಗೆ ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ತರಗತಿಗಳು ನಡೆಯಲಿವೆ.
ಏನೇನು ಕಲಿಯಬಹುದು?
ಕೋರ್ಸ್ನಲ್ಲಿ ಸ್ಟೋರಿಬೋರ್ಡಿಂಗ್, ಸ್ಕ್ರಿಪ್ಟ್ ಬರವಣಿಗೆ, ಶೂಟಿಂಗ್ ಮತ್ತು ಕ್ಯಾಮೆರಾ ನಿರ್ವಹಣೆ, AI ರೀಲ್ಸ್, AI ಶಾರ್ಟ್ ಫಿಲ್ಮ್ ಹಾಗೂ AI ಡಾಕ್ಯುಮೆಂಟರಿ ಸೇರಿದಂತೆ ಚಲನಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.
AI ತಂತ್ರಜ್ಞಾನವನ್ನು ಬಳಸಿಕೊಂಡು ಕಂಟೆಂಟ್ ಮತ್ತು ಚಲನಚಿತ್ರಗಳನ್ನು ರಚಿಸಲು ಬಯಸುವ ವಿದ್ಯಾರ್ಥಿಗಳು, ಕಂಟೆಂಟ್ ಕ್ರಿಯೇಟರ್ಗಳು ಹಾಗೂ ಆಸಕ್ತರಿಗೆ ಕೋರ್ಸ್ ಉಪಯುಕ್ತವಾಗಲಿದೆ.
ಕೋರ್ಸ್ ಶುಲ್ಕ ₹6,000 ನಿಗದಿಪಡಿಸಲಾಗಿದ್ದು, ಭಾಗವಹಿಸುವವರಿಗೆ ಸರ್ಟಿಫಿಕೇಟ್ ಹಾಗೂ ರಿಫ್ರೆಶ್ಮೆಂಟ್ ವ್ಯವಸ್ಥೆ ಕಲ್ಪಿಸಲಾಗಿದೆ.
ಆಸಕ್ತರು ತಮ್ಮ ಸೀಟುಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ 8296615560 / 7975078498 ಸಂಪರ್ಕಿಸಬಹುದು. www.kaushalmanipal.com ವೆಬ್ಸೈಟ್ ಮೂಲಕವೂ ಮಾಹಿತಿ ಪಡೆಯಬಹುದು.















