ಎಂಸಿಸಿ ಬ್ಯಾಂಕ್‌ನ ಮಾರ್ಗನ್ಸ್‌ಗೇಟ್ ಶಾಖೆ ನೂತನ ಕಟ್ಟಡಕ್ಕೆ ಸ್ಥಳಾಂತರ

ಮಂಗಳೂರು: ಗ್ರಾಹಕರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು, ಎಂಸಿಸಿ ಬ್ಯಾಂಕ್‌ನ ಮಾರ್ಗನ್ಸ್‌ಗೇಟ್ ಶಾಖೆಯನ್ನು 2026ರಜುಲೈ 25ರಂದು ಮಂಗಳೂರಿನ ಮಾರ್ನಮಿಕಟ್ಟೆ ರಸ್ತೆಯಲ್ಲಿರುವ ಎಚ್.ಎಚ್. ಡೈಮಂಡ್ ಸಿಟಿ ಕಟ್ಟಡದ ನೆಲ ಮಹಡಿಯಲ್ಲಿ ಇರುವ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಖೆಯು 31 ವರ್ಷಗಳಯಶಸ್ವಿ ಸೇವೆಯನ್ನು ಪೂರ್ಣಗೊಳಿಸಿದ ಸಂಭ್ರಮವನ್ನು ಸಹ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು.ನೂತನ ಶಾಖಾ ಕಛೇರಿಯನ್ನು ಕಾಸ್ಸಿಯಾದ ಸಂತ ರೀಟಾ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಫಾ| ರಿತೇಶ್ ರೋಡ್ರಿಗಸ್ ಆಶೀರ್ವದಿಸಿದರು. […]

ನಿಟ್ಟೆ ಗ್ರಾಮ ಪಂಚಾಯತ್ ಗೆ ಪ್ರಜಾಪಿತ ಬ್ರಹ್ಮಕುಮಾರಿಸ್ ನ ವರಂದಾವನ ಧ್ಯಾನ ಕೇಂದ್ರದಿಂದ ಕಸ ಸಂಗ್ರಹಣೆ ವಾಹನ ಕೊಡುಗೆ

ಕಾರ್ಕಳ: ನಿಟ್ಟೆ ಪ್ರಜಾಪಿತ ಬ್ರಹ್ಮ ಕುಮಾರಿಸ್ ನ ವೃoಧವನ ಧ್ಯಾನ ಕೇಂದ್ರದಿಂದ ಪಂಚಾಯತ್ ಆಡಳಿತ ಅಧಿಕಾರಿ ಶ್ರೀನಿವಾಸ್ ರಾವ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ್ ಭಾರ್ತಿಹಾಗೂ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ನಿತಿನ್ ರವರ ಕೋರಿಕೆಯಂತೆ ಪಂಚಾಯತ್ ಕಾರ್ಯದರ್ಶಿ ರಮೇಶ್ ರವರಿಗೆ ಕಸ ಸಂಗ್ರಹಣೆ ವಾಹನವನ್ನು ಪ್ರಜಾಪಿತ ಬ್ರಹ್ಮಕುಮಾರಿ ಗುಜರಾತ್ ಗಾಂಧಿನಗರ ಸೇವಾ ಕೇಂದ್ರದ ಹಿರಿಯ ಸಹೋದರಿ ರಾಜಯೋಗಿಣಿ ಕೈಲಾಶ್ ದೀದಿ ಹಾಗೂ, ಮಂಗಳೂರು ಸೇವಾ ಕೇಂದ್ರದ ಸಂಚಾಲಕಿ ರಾಜಯೋಗಿನಿ ಬ್ರಹ್ಮ ಕುಮಾರಿ ವಿಶ್ವೇಶ್ವರಿ ಮತ್ತು ಬ್ರಹ್ಮಕುಮಾರಿ […]

ನಿಮ್ಮ ತಿಂಗಳ ಸಂಬಳ ಎಷ್ಟೇ ಇರಲಿ, ಈ ಸರಳ ಸೂತ್ರ ಪಾಲಿಸಿದರೆ ಭವಿಷ್ಯಕ್ಕೆ ಉಳಿತಾಯ ಮಾಡಬಹುದು!

ತಿಂಗಳಿಗೆ 15-20 ಸಾವಿರದ ಒಳಗೆ ಸಂಬಳ ಪಡೆಯುವವರು ತಿಂಗಳ ಕೊನೆಯಲ್ಲಿ ಕೈಯಲ್ಲಿ ಹಣ ಉಳಿಯುವುದಿಲ್ಲ ಎಂದು ಚಿಂತೆಪಡುತ್ತಿರುತ್ತಾರೆ. ಆದರೆ ಆದಾಯ ಕಡಿಮೆ ಇದ್ದರೂ ಸರಿಯಾದ ರೀತಿಯಲ್ಲಿ ಹಣವನ್ನು ನಿರ್ವಹಿಸಿದರೆ ದಿನನಿತ್ಯದ ಖರ್ಚು, ಉಳಿತಾಯ ಮತ್ತು ಭವಿಷ್ಯದ ಅಗತ್ಯಗಳನ್ನು ಸಮತೋಲನಗೊಳಿಸಬಹುದು. ಸಂಬಳ ಬಂದ ತಕ್ಷಣವೇ ಎಲ್ಲ ಹಣವನ್ನು ಖರ್ಚು ಮಾಡುವ ಬದಲು ಮೊದಲೇ ಒಂದು ಬಜೆಟ್ ರೂಪಿಸಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ನಿಮ್ಮ ಸಂಬಳ ಎಷ್ಟೇ ಇರಲಿ ಅದರಲ್ಲಿ ಸಣ್ಣ ಮೊತ್ತವನ್ನು ಉಳಿತಾಯಕ್ಕೆ ನೀವು ಮೀಸಲಿಡಲೇಬೇಕು. ಸಂಬಳ ಕೈಗೆ […]

ಅಮೆರಿಕದ ಫಿಲಡೆಲ್ಪಿಯಾದಲ್ಲಿ ಐಸಿಎಂ ಉದ್ಘಾಟನೆ ಎಂಐಟಿಯ ಐವರು ಪ್ರಾಧ್ಯಾಪಕರು ಭಾಗಿ

ಉಡುಪಿ: ಮಣಿಪಾಲ ಅಕಾಡೆಮಿ ಆಫ್ (ಮಾಹೆ) ಹೈಯರ್ ಎಜುಕೇಶನ್ ಅಂಗಸಂಸ್ಥೆ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಗಣಿತ ವಿಭಾಗದ ಐವರು ಪ್ರಾಧ್ಯಾಪಕರು ಅಮೆರಿಕದ ಫಿಲಡೆಲ್ಲಿಯಾದಲ್ಲಿ ಆರಂಭಗೊಂಡಿರುವ ಅಂತಾರಾಷ್ಟ್ರೀಯ ಗಣಿತಜ್ಞರ ಮಹಾ ಸಮ್ಮೇಳನ (ಐಸಿಎಂ)ದಲ್ಲಿ ಸಂಸ್ಥೆಯನ್ನು ಪ್ರತಿನಿಧಿಸಿದ್ದಾರೆ. ಅಂತಾರಾಷ್ಟ್ರೀಯ ಗಣಿತ ಒಕ್ಕೂಟವು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸುವ ಈ ಸಮ್ಮೇಳನ ವಿಶ್ವದ ಪ್ರತಿಷ್ಠಿತ ಗಣಿತ ಸಮ್ಮೇಳನವಾಗಿದ್ದು, ಜಾಗತಿಕ ಮಟ್ಟದ ಗಣಿತಜ್ಞರು, ಸಂಶೋಧಕರು ಹಾಗೂ ಶಿಕ್ಷಣ ತಜ್ಞರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುತ್ತದೆ. ಗುರುವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಗಣಿತ […]

ಪುತ್ತೂರು: ನಾಪತ್ತೆಯಾಗಿದ್ದ ನಿವೃತ್ತ ಗ್ರಂಥಪಾಲಕಿಯ ಮೃತದೇಹ ಶಂಭೂರು ಅಣೆಕಟ್ಟಿನಲ್ಲಿ ಪತ್ತೆ

ಪುತ್ತೂರು: ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ನಿವೃತ್ತ ಗ್ರಂಥಪಾಲಕಿಯೊಬ್ಬರ ಮೃತದೇಹ ಬಂಟ್ವಾಳ ತಾಲೂಕಿನ ಶಂಭೂರು ಸಮೀಪ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟಿನಲ್ಲಿ ಶನಿವಾರ ಪತ್ತೆಯಾಗಿದೆ. ಮೃತರನ್ನು ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಅಜೇಯನಗರದ ‘ಕಲಾತ್ಮಿಕ ಮನೆ’ ನಿವಾಸಿ, ರಾಮ ಭಟ್ ಅವರ ಪತ್ನಿ ವಿಜಯಾ ಟಿ. (60) ಎಂದು ಗುರುತಿಸಲಾಗಿದೆ. ಅವರು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ಗ್ರಂಥಪಾಲಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವಿಜಯಾ ಅವರು ಗುರುವಾರ ಬೆಳಗ್ಗೆ ಪುತ್ತೂರು ಪಟ್ಟಣಕ್ಕೆ ತೆರಳುವುದಾಗಿ ತಿಳಿಸಿ ಮನೆಯಿಂದ […]