ನಿಟ್ಟೆ ಬ್ರಹ್ಮಾ ಕುಮಾರೀಸ್ ವೃಂದಾವನ ಧ್ಯಾನ ಕೇಂದ್ರದಲ್ಲಿ ಯೋಗ ತಪಸ್ಯ ಹಾಗೂ ಆಷಾಡದ ಸ್ನೇಹ ಮಿಲನ ಕಾರ್ಯಕ್ರಮ

ಕಾರ್ಕಳ: ನಿಟ್ಟೆ ಬ್ರಹ್ಮಾ ಕುಮಾರೀಸ್ ವೃಂದಾವನ ಧ್ಯಾನ ಕೇಂದ್ರದಲ್ಲಿ ಯೋಗ ತಪಸ್ಯ ಹಾಗು ಆಷಾಡದ ಸ್ನೇಹ ಮಿಲನ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿದ್ದ ಗುಜರಾತಿನ ಗಾಂಧಿನಗರ ಬ್ರಹ್ಮಾ ಕುಮಾರಿ ಕೇಂದ್ರದ ಸಂಚಾಲಕಿ ವರಿಷ್ಠ ರಾಜಯೋಗಿನಿ ಬಿ ಕೆ ಕೈಲಾಶ್ ದೀದಿ ಜಿ ಇವರು ಈಶ್ವರೀಯ ಸೇವೆಯ ಜೀವನದ ತನ್ನ ಆಘಾತ ಅನುಭವದ ವಿಷಯಗಳನ್ನು ಹಂಚಿಕೊಂಡರು. ಅವರ ಅನುಭವಯುಕ್ತ ವಚನಗಳು ಜೀವನವನ್ನು ಸುಂದರವಾಗಿಸುವಂತಹ, ಹಾಗು ಮಾನವನ ಸರ್ವತೋಮುಖ ಬೆಳೆವಣಿಗೆಗೆ ಮಾರ್ಗದರ್ಶನವಾಗಿವೆ. ಮಂಗಳೂರಿನ ಬ್ರಹ್ಮಾಕುಮಾರಿ ಕೇಂದ್ರದ […]

ಉಡುಪಿ: ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿ ನ್ಯೂರೋಸರ್ಜರಿ ತಜ್ಞರ ಸೇವೆ ಶುರು: ಪರಿಣಿತ ವೈದ್ಯರಿಂದ ಅತ್ಯುತ್ತಮ ಸೇವೆ ಇಲ್ಲಿದೆ

ಉಡುಪಿ ನಗರದ ಅಂಬಲಪಾಡಿಯಲ್ಲಿರುವ ಹೈಟೆಕ್ ಮೆಡಿಕೇರ್ ಆಸ್ಪತ್ರೆ ತನ್ನ ನ್ಯೂರೋಸರ್ಜರಿ ವಿಭಾಗವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಖ್ಯಾತ ನ್ಯೂರೋಸರ್ಜನ್ ಡಾ. ಪವನ್‌ಕುಮಾರ್ ಎಸ್. ಶೆಟ್ಟಿ ಅವರನ್ನು ಪೂರ್ಣಾವಧಿ ಸಲಹೆಗಾರ ನ್ಯೂರೋಸರ್ಜನ್ ಆಗಿ ನೇಮಕ ಮಾಡಿದೆ. ಎಂಬಿಬಿಎಸ್, ಎಂಎಸ್ ಹಾಗೂ ಎಂ.ಚಿ. (ನ್ಯೂರೋಸರ್ಜರಿ) ಪದವೀಧರರಾಗಿರುವ ಡಾ. ಪವನ್‌ಕುಮಾರ್ ಎಸ್. ಶೆಟ್ಟಿ ಗೋಲ್ಡ್ ಮೆಡಲಿಸ್ಟ್ ಆಗಿದ್ದು, ಮೆದುಳು ಹಾಗೂ ಬೆನ್ನುಹುರಿಗೆ ಸಂಬಂಧಿಸಿದ ವಿವಿಧ ಕಾಯಿಲೆಗಳ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ್ದಾರೆ. ಇವರು ತಲೆಗಾಯ ಮತ್ತು ನ್ಯೂರೋ ಟ್ರಾಮಾ, ಪಾರ್ಶ್ವವಾಯು (ಸ್ಟ್ರೋಕ್) ಮತ್ತು […]

ದೇಶದಲ್ಲಿ ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ರಚನೆ; ಪ್ರಧಾನಿ ಮೋದಿ ಘೋಷಣೆ.

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ ಹೋರಾಟದಿಂದ ಕೊನೆಗೂ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ದೇಶದಲ್ಲಿನ ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಮುಂದಾಗಿದೆ. ಈ ಸಂಬಂಧ ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ರಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಘೋಷಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಧಾನಿ ಮೋದಿ ವಿಡಿಯೋ ಸಂದೇಶ ಹಂಚಿಕೊಂಡಿದ್ದು, ದೇಶದಲ್ಲಿನ ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಆಧುನೀಕರಿಸುವತ್ತ ಈ ಕಾರ್ಯಪಡೆ ಗಮನಹರಿಸಲಿದೆ ಎಂದು ಹೇಳಿದ್ದಾರೆ. ಪರೀಕ್ಷೆಗಳ ಪಾವಿತ್ರ್ಯತೆ ಹಾಗೂ ವ್ಯವಸ್ಥಿತ […]

ಪೆರಂಪಳ್ಳಿಯಲ್ಲಿ ಕೆಸರ್ ಡೊಂಜಿ ಸಂಭ್ರಮ: ಕೆಸರಿನಲ್ಲಿ ಮಿಂದೆದ್ದ ಯುವಜನತೆ

ಉಡುಪಿ: ಪೆರಂಪಳ್ಳಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಆಯೋಜಿಸಲಾದ ‘ಕೆಸರ್ ಡೊಂಜಿ ದಿನ’ ಕಾರ್ಯಕ್ರಮ ಪೆರಂಪಳ್ಳಿಯ ನೋಳೆ ಲಚ್ಚಿಲ್ ಶ್ರೀ ಪುತ್ತು ನಾಯ್ಕರ ಗದ್ದೆಯಲ್ಲಿ ಸಂಭ್ರಮದಿಂದ ನಡೆಯಿತು. ಗ್ರಾಮದ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಮಕ್ಕಳು ಹಾಗೂ ಯುವಕ-ಯುವತಿಯರು ಕೆಸರಿನಲ್ಲಿ ಆಟವಾಡಿ, ಪರಸ್ಪರ ಕೆಸರನ್ನು ಎರಚಿಕೊಂಡು ಸಂಭ್ರಮಿಸಿದರು. ಡಿಜೆ ಸಂಗೀತದ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದರು.ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ […]