ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಲ್ಲಿದೆ ಭರ್ಜರಿ ಹುದ್ದೆಗಳು: ನಿಮಗೆ ಆಸಕ್ತಿ ಇದ್ರೆ ಮಿಸ್ ಮಾಡದೇ ಅರ್ಜಿ ಸಲ್ಲಿಸಿ

ಬೆಂಗಳೂರು: ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಸಿಹಿಸುದ್ದಿಯೊಂದು ಬಂದಿದೆ. ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (AAI) 2026ನೇ ಸಾಲಿನ ನೇಮಕಾತಿ ಅಧಿಸೂಚನೆ ಪ್ರಕಟಿಸಿದ್ದು, ದೇಶದ ವಿವಿಧ ವಿಮಾನ ನಿಲ್ದಾಣಗಳು ಹಾಗೂ AAI ಕಚೇರಿಗಳಲ್ಲಿ ಖಾಲಿ ಇರುವ 389 ಮ್ಯಾನೇಜರ್ ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಿಂದ ಪದವಿ, ಸ್ನಾತಕೋತ್ತರ ಪದವಿ, ಪಿಜಿಡಿಎಂ, ಡಿಪ್ಲೊಮಾ, […]

ಉಡುಪಿ ಕರಾವಳಿಯ ಆಟೋಮೊಬೈಲ್ಸ್ ನಲ್ಲಿ 100ನೇ ಕಾರ್ ಡೆಲಿವರಿಕಾರ್ಯಕ್ರಮ

ಉಡುಪಿಯ ಪ್ರಸಿದ್ಧ ಕರಾವಳಿ ಆಟೋಮೊಬೈಲ್ಸ್ ನಲ್ಲಿ ೧೦೦ನೇ ಕಾರ್ ಡೆಲಿವರಿ ಕಾರ್ಯಕ್ರಮವು 24 ಜುಲೈ ಶುಕ್ರವಾರದಂದು ನಡೆದಿದ್ದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೈಲಾಸ್ ನಾಥ್ ರೈ ಅಡ್ಮಿಶನ್ ಮ್ಯಾನೇಜರ್ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಮೂಡಬಿದ್ರೆ , ಹಾಗೂ ಅನುಪಿಲ್ಲಯ್ ಗಣಪತಿ ಕ್ಲಸ್ಟರ್ ಹೆಡ್ ರೆಸ್ಟ್ ಆಫ್ ಕರ್ನಾಟಕ, ಕರಾವಳಿ ಆಟೋಮೊಬೈಲ್ಸ್ ಮಾಲೀಕರಾದ ಮಿಥುನ್ ಇವರು ಉಪಸ್ಥಿತರಿದ್ದರು .ಈ ಸಂದರ್ಭದಲ್ಲಿ 100 ನೇ ಗ್ರಾಹಕರಾದ ಪ್ರವೀಣ್ ಭಟ್ಅವರಿಗೆ ಕಾರನ್ನು ಹಸ್ತಾಂತರಿಸಲಾಯಿತು .

ಪುರುಷರೇ ಮಳೆಗಾಲದಲ್ಲಿ ಈ ಒಂದು ತಪ್ಪು ಮಾಡ್ಬೇಡಿ, ಕೂದಲು ಹೀಗಾಯ್ತು ಅಂತ ಆ ಮೇಲೆ ಗೋಳಾಗಬೇಡಿ!

ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತಿದ್ದು, ವಿಶೇಷವಾಗಿ ಮಳೆಗಾಲದಲ್ಲಿ ಈ ಸಮಸ್ಯೆ ಮತ್ತಷ್ಟು ತೀವ್ರವಾಗುತ್ತದೆ. ಜೀವನಶೈಲಿಯ ಕೆಲವು ತಪ್ಪು ಅಭ್ಯಾಸಗಳು ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಎಂಬಿಬಿಎಸ್ ವೈದ್ಯೆ ಡಾ. ಅಪರಾಜಿತಾ ಲಂಬಾ ಅವರ ಪ್ರಕಾರ, ಮಳೆಗಾಲದಲ್ಲಿ ಕೂದಲಿಗೆ ಹೆಚ್ಚು ಸಮಯ ಎಣ್ಣೆ ಹಚ್ಚಿಕೊಂಡಿರುವುದು ಹಾಗೂ ಅತಿಯಾಗಿ ಎಣ್ಣೆ ಬಳಸುವುದು ಕೂದಲಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ನೆತ್ತಿಯಲ್ಲಿ ತೇವಾಂಶ ಹೆಚ್ಚಾಗಿ ಕೂದಲಿನ ಕಿರುಚೀಲಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. […]

ಕರಾವಳಿ ಚಿತ್ರದ ಮೇಕಿಂಗ್ ಔಟ್; ವಿಡಿಯೋ ಹಂಚಿಕೊಂಡ ರಾಗಿಣಿ ಪ್ರಜ್ವಲ್! ಲಿಂಕ್ ಇಲ್ಲಿದೆ

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕರಾವಳಿ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಚಿತ್ರದ ಮೇಕಿಂಗ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದ್ದು, ಇದನ್ನು ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಜ್ವಲ್ ಹಂಚಿಕೊಂಡಿದ್ದಾರೆ. ‘ಕರಾವಳಿ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರದ ಖದರ್‌ ಅನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ ಅವರ ಕಮ್‌ಬ್ಯಾಕ್ ಚಿತ್ರ ಎಂಬ ಮಾತುಗಳೂ ಕೇಳಿಬಂದಿವೆ. ಚಿತ್ರದ ಪಾತ್ರಕ್ಕಾಗಿ ಪ್ರಜ್ವಲ್ ಅವರು ಸಾಕಷ್ಟು ಶ್ರಮವಹಿಸಿರುವುದು […]

ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಐವಿ ಪರೀಕ್ಷೆ ನಡೆಸಲು ಮುಂದಾದ ಆರೋಗ್ಯ ಇಲಾಖೆ, ಏಕೆ ಈ ಮಹತ್ವದ ನಿರ್ಧಾರ?

ಬೆಂಗಳೂರು: ರಾಜ್ಯದಲ್ಲಿ ಯುವಜನರಲ್ಲಿ ಹೆಚ್ಐವಿ (HIV) ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ನಿಯಂತ್ರಿಸಲು ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಐವಿ ಪರೀಕ್ಷೆ ನಡೆಸುವ ವಿಶೇಷ ಅಭಿಯಾನವನ್ನು ಆರಂಭಿಸಲು ಇಲಾಖೆ ನಿರ್ಧರಿಸಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ಹಾಗೂ ಇತರ ವರದಿಗಳ ಪ್ರಕಾರ, ಹೆಚ್ಐವಿ ಸೋಂಕಿತರ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸುಮಾರು 2.60 ಲಕ್ಷ ಮಂದಿ ಹೆಚ್ಐವಿ ಸೋಂಕಿನೊಂದಿಗೆ ಬದುಕುತ್ತಿದ್ದು, […]