ಬ್ರಹ್ಮಾವರ: ಭಾರೀ ಗಾಳಿ ಮಳೆಗೆ ಶಾಲೆಯ ಹೆಂಚು ಬಿದ್ದು ವಿದ್ಯಾರ್ಥಿನಿಗೆ ಗಾಯ

ಉಡುಪಿ: ಜಿಲ್ಲೆಯ ಕೆಲವು ಭಾಗಗಳಲ್ಲಿ ಕಳೆದ ರಾತ್ರಿಯಿಂದ ಸುರಿದ ಭಾರೀ ಗಾಳಿ ಮಳೆಗೆ 15 ಮನೆಗಳಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ. ಈ ಮಧ್ಯೆ ಬ್ರಹ್ಮಾವರ ತಾಲೂಕಿನಲ್ಲಿ ಹಳೆಯ ಶಾಲಾ ಕಟ್ಟಡದ ಹೆಂಚು ಬಿದ್ದ ಪರಿಣಾಮ ವಿದ್ಯಾರ್ಥಿನಿಗೆ ಗಾಯವಾಗಿದೆ.ಇಂದು ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ಭಾರೀ ಗಾಳಿಯೊಂದಿಗೆ ಮಳೆಯಾಗಿತ್ತು. ಈ ವೇಳೆ ಬೀಸಿದ ಭಾರಿ ಗಾಳಿ ಮಳೆಗೆ ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಬೋರ್ಡ್ ಪ್ರೈಮರಿ ಶಾಲೆಯ ಮೇಲ್ಚಾವಣೆಯ ಹೆಂಚು ಬಿದ್ದು ಓರ್ವ ವಿದ್ಯಾರ್ಥಿನಿಯ […]
ಉಡುಪಿ: ಕಾಂಗ್ರೆಸಿಗರಿಗೆ ಶ್ರೀರಾಮ ಮಂದಿರ ಕಟ್ಟುವಾಗ ಇಲ್ಲದಂತಹ ರಾಮಭಕ್ತಿ ಇದೀಗ ದಿಢೀರ್ ಉಕ್ಕುತ್ತಿರುವುದು ಸಮಾಧಾನ ತಂದಿದೆ: ಸಂಸದ ಕೋಟ ವ್ಯಂಗ್ಯ

ಉಡುಪಿ: ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಸಹಿತ ಕಾಂಗ್ರೆಸ್ ನಾಯಕರಿಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟುವಾಗ ಇಲ್ಲದಂತಹಾ ರಾಮಭಕ್ತಿ ಇದೀಗ ದಿಢೀರ್ ಉಕ್ಕುತ್ತಿರುವುದು ಸಮಾಧಾನ ತಂದಿದೆ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ವ್ಯಂಗ್ಯವಾಡಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅವರು , ರಾಮನೇ ಇಲ್ಲವೆಂದು ಇತಿಹಾಸದುದ್ದಕ್ಕೂ ಸಾರಿದ ಕಾಂಗ್ರೆಸ್ ಪಕ್ಷವು ಈಗ ರಾಮ ಭಜನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಹಾಗೆಯೇ ಹಿಂದೂಗಳ ಶ್ರದ್ಧಾಕೇಂದ್ರ ಜ್ಞಾನವ್ಯಾಪಿ, ಮಥುರಾದಂತಹಾ ದೇವಸ್ಥಾನಗಳೂ ಹಿಂದೂಗಳ ಕೈಸೇರುವಲ್ಲಿ ನಿಮ್ಮೆಲ್ಲರ ಬೆಂಬಲ ನಮ್ಮ ಜೊತಗಿರಲಿ ಎಂದು […]
ಮೂತ್ರಪಿಂಡದ ಸಮಸ್ಯೆಗಳ ಬಗ್ಗೆ ನಿರ್ಲಕ್ಷ ಮಾಡಬೇಡಿ: ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿದೆ ಮೂತ್ರಪಿಂಡದ ಎಲ್ಲಾ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ

ಉಡುಪಿ: ಮೂತ್ರಪಿಂಡಗಳು (ಕಿಡ್ನಿ) ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು, ರಕ್ತವನ್ನು ಶುದ್ಧೀಕರಿಸಿ ದೇಹದ ತ್ಯಾಜ್ಯವನ್ನು ಹೊರಹಾಕುವ ಮಹತ್ವದ ಕಾರ್ಯ ನಿರ್ವಹಿಸುತ್ತವೆ. ಆದರೆ ಆರಂಭಿಕ ಹಂತದಲ್ಲಿ ಮೂತ್ರಪಿಂಡದ ಸಮಸ್ಯೆಗಳು ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸದೇ ಇರಬಹುದು. ಆದ್ದರಿಂದ ಕೆಲವು ಎಚ್ಚರಿಕೆ ಸೂಚನೆಗಳನ್ನು ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ. ನಿಮ್ಮ ಎಲ್ಲಾ ಮೂತ್ರಪಿಂಡದ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿದ್ದು ಈ ಸಮಸ್ಯೆ ಕಂಡರೆ ತಕ್ಷಣ ಭೇಟಿ ನೀಡಿ ಪರಿಹಾರ […]
ಭಾರತದಲ್ಲಿ ಪಾಕಿಸ್ತಾನದ ಫೇಸ್ ಕ್ರೀಂ ಅವಾಂತರ,18 ಮಹಿಳೆಯರಿಗೆ ಶುರುವಾಯ್ತು ಮೂತ್ರಪಿಂಡದ ಸಮಸ್ಯೆ, ಭಾರತದ ಈ ಉತ್ಪನ್ನಗಳೂ ಕೂಡ ಡೇಂಜರ್!

ನಾಗ್ಪುರ: ಬೆಳ್ಳಗಿನ ಚರ್ಮದ ಆಸೆ ಆರೋಗ್ಯಕ್ಕೆ ಮುಳುವಾಗಬಹುದು ಎಂಬ ಆತಂಕಕಾರಿ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಬೆಳಕಿಗೆ ಬಂದಿದೆ. ಚರ್ಮ ಬಿಳಿಯಾಗಿಸುವ ಕ್ರೀಮ್ ಬಳಸುತ್ತಿದ್ದ 18 ಮಹಿಳೆಯರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವುದು ವೈದ್ಯಕೀಯ ತನಿಖೆಯಲ್ಲಿ ಪತ್ತೆಯಾಗಿದೆ. ವರದಿಗಳ ಪ್ರಕಾರ, ಈ ಮಹಿಳೆಯರೆಲ್ಲರೂ ಪಾಕಿಸ್ತಾನದಲ್ಲಿ ತಯಾರಾಗುವ ‘ಗೋರಿ ಬ್ಯೂಟಿ ಕ್ರೀಮ್’ ಬಳಸುತ್ತಿದ್ದರು. ಪ್ರಯೋಗಾಲಯ ಪರೀಕ್ಷೆಯಲ್ಲಿ ಈ ಕ್ರೀಮ್‌ನಲ್ಲಿ ಪಾದರಸದ (Mercury) ಪ್ರಮಾಣ ಕಾನೂನುಬದ್ಧ ಮಿತಿಗಿಂತ ಹೆಚ್ಚಿರುವುದು ಪತ್ತೆಯಾಗಿದ್ದು, ಇದೇ ಆರೋಗ್ಯ ಸಮಸ್ಯೆಗೆ ಕಾರಣವಾಗಿರಬಹುದು ಎಂದು ತಜ್ಞರು ಶಂಕಿಸಿದ್ದಾರೆ. ಎಫ್‌ಡಿಎ ನಿಷೇಧ […]
ಉಡುಪಿಯಲ್ಲಿ ಉದ್ಯೋಗಾವಕಾಶ: ತಕ್ಷಣ ನೇಮಕಾತಿ

ಉಡುಪಿ:ಉಡುಪಿಯ ಕೊರಂಗ್ರಪಾಡಿ ರಸ್ತೆಯಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಾವಕಾಶ ನೇಮಕಾತಿ ನಡೆಯಲಿದೆ. ಸಂಸ್ಥೆಗೆ ಕೆಳಕಂಡ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳು: ಆಫೀಸ್ ಸಿಬ್ಬಂದಿ (ಮಹಿಳೆಯರು – ಕಂಪ್ಯೂಟರ್ ಜ್ಞಾನ ಕಡ್ಡಾಯ) ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. 7483998397, 6363117712 ಸ್ಥಳ: ಕೊರಂಗ್ರಪಾಡಿ ರಸ್ತೆ, ಉಡುಪಿ.