ಮೂತ್ರಪಿಂಡದ ಸಮಸ್ಯೆಗಳ ಬಗ್ಗೆ ನಿರ್ಲಕ್ಷ ಮಾಡಬೇಡಿ: ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿದೆ ಮೂತ್ರಪಿಂಡದ ಎಲ್ಲಾ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ

ಉಡುಪಿ: ಮೂತ್ರಪಿಂಡಗಳು (ಕಿಡ್ನಿ) ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು, ರಕ್ತವನ್ನು ಶುದ್ಧೀಕರಿಸಿ ದೇಹದ ತ್ಯಾಜ್ಯವನ್ನು ಹೊರಹಾಕುವ ಮಹತ್ವದ ಕಾರ್ಯ ನಿರ್ವಹಿಸುತ್ತವೆ. ಆದರೆ ಆರಂಭಿಕ ಹಂತದಲ್ಲಿ ಮೂತ್ರಪಿಂಡದ ಸಮಸ್ಯೆಗಳು ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸದೇ ಇರಬಹುದು. ಆದ್ದರಿಂದ ಕೆಲವು ಎಚ್ಚರಿಕೆ ಸೂಚನೆಗಳನ್ನು ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ. ನಿಮ್ಮ ಎಲ್ಲಾ ಮೂತ್ರಪಿಂಡದ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿದ್ದು ಈ ಸಮಸ್ಯೆ ಕಂಡರೆ ತಕ್ಷಣ ಭೇಟಿ ನೀಡಿ ಪರಿಹಾರ ಕಂಡುಕೊಳ್ಳಿ.

ಮೂತ್ರಪಿಂಡದ ಸಮಸ್ಯೆಯ 5 ಪ್ರಮುಖ ಲಕ್ಷಣಗಳು

  • ಕಾಲುಗಳು, ಪಾದಗಳು ಹಾಗೂ ಮುಖದಲ್ಲಿ ಊತ ಕಾಣಿಸಿಕೊಳ್ಳುವುದು.
  • ಕಾರಣವಿಲ್ಲದೆ ಆಯಾಸ ಹಾಗೂ ದೌರ್ಬಲ್ಯ ಅನುಭವವಾಗುವುದು.
  • ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ (ಮೂತ್ರದ ಪ್ರಮಾಣ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು).
  • ಕಣ್ಣಿನ ಸುತ್ತ ಊತ ಅಥವಾ ಮುಖದಲ್ಲಿ ಊತ ಕಾಣಿಸಿಕೊಳ್ಳುವುದು.
  • ನಿಯಂತ್ರಣಕ್ಕೆ ಬಾರದ ಅಧಿಕ ರಕ್ತದೊತ್ತಡ (ಹೈ ಬಿಪಿ).

ತಜ್ಞರ ಪ್ರಕಾರ, ಈ ರೀತಿಯ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಆರಂಭಿಕ ಹಂತದಲ್ಲೇ ಸಮಸ್ಯೆ ಪತ್ತೆಯಾದರೆ ಸೂಕ್ತ ಚಿಕಿತ್ಸೆ ಮೂಲಕ ಗಂಭೀರ ತೊಂದರೆಗಳನ್ನು ತಡೆಯಬಹುದು. ಹೈಟೆಕ್ ಮೆಡಿಕೇರ್ ಆಸ್ಪತ್ರೆಯು ನೆಫ್ರಾಲಜಿಸ್ಟ್ (ಕಿಡ್ನಿ ತಜ್ಞ) ಸೇವೆ ಲಭ್ಯವಿದ್ದು, ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿಗೆ ತಜ್ಞರ ಸಲಹೆ ಮತ್ತು ಚಿಕಿತ್ಸೆ ದೊರೆಯಲಿದ್ದು ಭೇಟಿ ನೀಡಿ ಸಮಸ್ಯೆ ಬಗೆಹರಿಸಬಹುದು

ಸಂಪರ್ಕಿಸಿ: ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞 74068 68214

ವಿಳಾಸ:
ಹೈಟೆಕ್ ಮೆಡಿಕೇರ್ ಆಸ್ಪತ್ರೆ,
ಎನ್.ಎಚ್. 66, ಅಂಬಲಪಾಡಿ, ಉಡುಪಿ – 576103.

ಸಂಪರ್ಕಿಸಿ: 📞 74068 68214 📞 82025 33331
📞 82025 33332,📞 82025 33333