ಉಡುಪಿ: ಕಾಂಗ್ರೆಸಿಗರಿಗೆ ಶ್ರೀರಾಮ ಮಂದಿರ ಕಟ್ಟುವಾಗ ಇಲ್ಲದಂತಹ ರಾಮಭಕ್ತಿ ಇದೀಗ ದಿಢೀರ್ ಉಕ್ಕುತ್ತಿರುವುದು ಸಮಾಧಾನ ತಂದಿದೆ: ಸಂಸದ ಕೋಟ ವ್ಯಂಗ್ಯ

ಉಡುಪಿ: ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಸಹಿತ ಕಾಂಗ್ರೆಸ್ ನಾಯಕರಿಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟುವಾಗ ಇಲ್ಲದಂತಹಾ ರಾಮಭಕ್ತಿ ಇದೀಗ ದಿಢೀರ್ ಉಕ್ಕುತ್ತಿರುವುದು ಸಮಾಧಾನ ತಂದಿದೆ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ವ್ಯಂಗ್ಯವಾಡಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಅವರು , ರಾಮನೇ ಇಲ್ಲವೆಂದು ಇತಿಹಾಸದುದ್ದಕ್ಕೂ ಸಾರಿದ ಕಾಂಗ್ರೆಸ್ ಪಕ್ಷವು ಈಗ ರಾಮ ಭಜನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ.

ಹಾಗೆಯೇ ಹಿಂದೂಗಳ ಶ್ರದ್ಧಾಕೇಂದ್ರ ಜ್ಞಾನವ್ಯಾಪಿ, ಮಥುರಾದಂತಹಾ ದೇವಸ್ಥಾನಗಳೂ ಹಿಂದೂಗಳ ಕೈಸೇರುವಲ್ಲಿ ನಿಮ್ಮೆಲ್ಲರ ಬೆಂಬಲ ನಮ್ಮ ಜೊತಗಿರಲಿ ಎಂದು ಅಪೇಕ್ಷಿಸುತ್ತೇನೆ.

ಮತ್ತು ಯೋಗಿಯಂತಹಾ ಯೋಗಿಯವರೇ ಆಡಳಿತ ನಡೆಸುತ್ತಿರುವ ಉತ್ತರ ಪ್ರದೇಶದಲ್ಲಿ ರಾಮ‌ಮಂದಿರಕ್ಕೆ ಕನ್ನ ಹಾಕಿದ ದುಷ್ಟರನ್ನು ಶಿಕ್ಷಿಸದೆ ಬಿಡಲಾರರು. ಅದರ ಬಗ್ಗೆ ದೇಶದ ಜನತೆಗೂ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಕೋಟ ಶ್ರೀನಿವಾಸ್ ಪೂಜಾರಿ, ಸಂಸದ