ಉಡುಪಿ: ಮಹಿಳೆ ನಾಪತ್ತೆ

ಉಡುಪಿ: ಮೂಲತಃ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ತುರುವಿನಾಳ ಮೂಲದವರಾದ ನಾಗಮ್ಮ (30) ಎಂಬ ಮಹಿಳೆಯು ಕೂಲಿ ಕೆಲಸಕ್ಕೆಂದು ಕಳೆದ ಎರಡು ತಿಂಗಳ ಹಿಂದೆ ಕುಂದಾಪುರಕ್ಕೆ ಬಂದಿದ್ದು, ಕೆ.ಎಸ್.ಆರ್.ಟಿ.ಸಿ ಬಳಿ ಇರುವ ಟೆಂಟ್ ನಲ್ಲಿ ವಾಸವಿದ್ದ ಇವರು ಮೇ 30 ರಿಂದ ನಾಪತ್ತೆಯಾಗಿರುತ್ತಾರೆ. 5 ಅಡಿ 2 ಇಂಚು ಎತ್ತರ ಇರುವ ಇವರು ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕುಂದಾಪುರ ಪೊಲೀಸ್ ಠಾಣೆ ದೂ.ಸಂಖ್ಯೆ: 08254-230338, ಕುಂದಾಪುರ ವಿಭಾಗ ಡಿ.ವೈ.ಎಸ್.ಪಿ ಮೊ.ನಂ: 9480805422, […]

4,800 ಅಕ್ರಮ ನುಸುಳುಕೋರರು ಬಾಂಗ್ಲಾದೇಶಕ್ಕೆ ಗಡೀಪಾರು: ‘ಪಶ್ಚಿಮ ಬಂಗಾಳ’ ಸಿಎಂ ಸುವೇಂದು ಅಧಿಕಾರಿ

ಕೋಲ್ಕತ್ತ: ಪೌರತ್ವ ತಿದ್ದುಪಡಿ ಕಾಯ್ದೆ (CAA) ವ್ಯಾಪ್ತಿಗೆ ಬಾರದ 4,800 ಬಾಂಗ್ಲಾದೇಶಿ ಅಕ್ರಮ ನುಸುಳುಕೋರರನ್ನು ಕಳೆದ ಒಂದು ತಿಂಗಳ ಅವಧಿಯಲ್ಲಿ ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ರವಿವಾರ ಹೇಳಿದ್ದಾರೆ. ಪಶ್ಚಿಮ ಬಂಗಾಳ ಬಿಜೆಪಿ ಆಯೋಜಿಸಿದ್ದ ‘ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ–2026’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಗಡಿ ಜಿಲ್ಲೆಗಳಲ್ಲಿ ಬಂಧನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಇರಿಸಲಾಗಿರುವ 836 ಅಕ್ರಮ ನುಸುಳುಕೋರರನ್ನೂ ಶೀಘ್ರದಲ್ಲೇ ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗುವುದು ಎಂದು […]

ಎಸ್.ಆರ್. ಪಿಯು ಕಾಲೇಜು, ಹೆಬ್ರಿಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ಓರಿಯಂಟೇಶನ್ ಕಾರ್ಯಕ್ರಮ ಯಶಸ್ವಿ

ಹೆಬ್ರಿ: ಎಸ್.ಆರ್. ಪಿಯು ಕಾಲೇಜು, ಹೆಬ್ರಿಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗಾಗಿ ವಿಶೇಷ ಓರಿಯಂಟೇಶನ್ ಕಾರ್ಯಕ್ರಮ ಎಸ್.ಆರ್. ಆಡಿಟೋರಿಯಂನಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಶ್ರೀ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಭಾಗವಹಿಸಿ, ವಿದ್ಯಾರ್ಥಿಗಳು ಪಿಯುಸಿ ಶಿಕ್ಷಣದ ಮಹತ್ವವನ್ನು ಅರಿತು ಶಿಸ್ತು, ಸಮಯಪಾಲನೆ ಹಾಗೂ ನಿರಂತರ ಪರಿಶ್ರಮದ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಬೇಕು. ಶಿಕ್ಷಣದಲ್ಲಿ ಪೋಷಕರ ಪಾತ್ರ ಮಹತ್ತರವಾದುದು, ಮಕ್ಕಳು ಪೋಷಕರನ್ನು ಅನುಕರಣೆ ಮಾಡುವುದರಿಂದ ಮನೆಯಲ್ಲಿ ಕಲಿಕೆಗೆ […]

ಗಿಡ ನೆಟ್ಟು ಸ್ವಚ್ಛ ಪರಿಸರ ನಿರ್ಮಿಸೋಣ- ಜಯಕರ ಶೆಟ್ಟಿ ಇಂದ್ರಾಳಿ

ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಪರಿಸರ ಪ್ರೇಮಿಗಳು ಬೈಲೂರು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಡುಪಿ, ಕಲಾ ಕಿರಣ್ ಕ್ಲಬ್ ಬೈಲೂರು, ಬೈಲೂರು ಶ್ರೀಮಹಿಷಮರ್ದಿನಿ ದೇವಸ್ಥಾನ ಇವುಗಳ ಸಹಭಾಗಿತ್ವದಲ್ಲಿ ‘ಹಸಿರು ನನ್ನೂರು ಬೈಲೂರು’ ಚಿತ್ರಕಲಾ ಸ್ಪರ್ಧೆಯನ್ನು ಬೈಲೂರು ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಗಿಡಗಳನ್ನು ನೆಡುವುದು ಮುಖ್ಯ […]

ಶ್ರವಣ ಸಮಸ್ಯೆಗಳಿಗೆ ಇಲ್ಲಿ ಸಿಗುತ್ತೆ ಅದ್ಬುತ ಪರಿಹಾರ: ಉಡುಪಿಯ ಸ್ಪೀಚ್ & ಹೇರಿಂಗ್ ಕೇರ್ ಸೆಂಟರ್‌ನಲ್ಲಿ ನಿಮಗೆ ಸಿಗಲಿದೆ ಸಮಗ್ರ ಸೇವೆ.

ಉಡುಪಿ: ಇತ್ತೀಚಿನ ದಿನಗಳಲ್ಲಿ ಶ್ರವಣ ಸಮಸ್ಯೆಗಳು ಹಾಗೂ ಮಾತಿನ ತೊಂದರೆಗಳು ಎಲ್ಲ ವಯೋಮಾನದವರಲ್ಲೂ ಹೆಚ್ಚಾಗುತ್ತಿವೆ.ಇದಕ್ಕೆ ಪರಿಹಾರ ಕಂಡುಕೊಳ್ಳಲು ತುಂಬಾ ಜನರಿಗೆ ಸಾಧ್ಯವಾಗುವುದಿಲ್ಲ. ಆದರೆ ಉಡುಪಿಯ ಸ್ಪೀಚ್ & ಹೇರಿಂಗ್ ಕೇರ್ ಸೆಂಟರ್‌ನಲ್ಲಿ ನಿಮ್ಮ ಎಲ್ಲಾ ಶ್ರವಣ ಸಮಸ್ಯೆಗಳಿಗೆ ತಕ್ಷಣ ಸಿಗುತ್ತೆ ಪರಿಹಾರ. ಹೌದು. ಇಂತಹ ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ಒದಗಿಸುವ ಉದ್ದೇಶದಿಂದ ಉಡುಪಿಯಲ್ಲಿರುವ ಸ್ಪೀಚ್ & ಹೇರಿಂಗ್ ಕೇರ್ ಸೆಂಟರ್ ಜನರಿಗೆ ವಿಶೇಷ ಸೇವೆಗಳನ್ನು ನೀಡುತ್ತಿದೆ. ಏನೇನು ಸೇವೆಗಳು? ಆಡಿಯಾಲಜಿಸ್ಟ್ ಹಾಗೂ ಸ್ಪೀಚ್ ಲ್ಯಾಂಗ್ವೇಜ್ ಪಥಾಲಜಿಸ್ಟ್ ನಿರ್ಮಲ […]