ಉಡುಪಿ: ಮೂಲತಃ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ತುರುವಿನಾಳ ಮೂಲದವರಾದ ನಾಗಮ್ಮ (30) ಎಂಬ ಮಹಿಳೆಯು ಕೂಲಿ ಕೆಲಸಕ್ಕೆಂದು ಕಳೆದ ಎರಡು ತಿಂಗಳ ಹಿಂದೆ ಕುಂದಾಪುರಕ್ಕೆ ಬಂದಿದ್ದು, ಕೆ.ಎಸ್.ಆರ್.ಟಿ.ಸಿ ಬಳಿ ಇರುವ ಟೆಂಟ್ ನಲ್ಲಿ ವಾಸವಿದ್ದ ಇವರು ಮೇ 30 ರಿಂದ ನಾಪತ್ತೆಯಾಗಿರುತ್ತಾರೆ.
5 ಅಡಿ 2 ಇಂಚು ಎತ್ತರ ಇರುವ ಇವರು ಕನ್ನಡ ಭಾಷೆ ಮಾತನಾಡುತ್ತಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕುಂದಾಪುರ ಪೊಲೀಸ್ ಠಾಣೆ ದೂ.ಸಂಖ್ಯೆ: 08254-230338, ಕುಂದಾಪುರ ವಿಭಾಗ ಡಿ.ವೈ.ಎಸ್.ಪಿ ಮೊ.ನಂ: 9480805422, ಕುಂದಾಪುರ ಠಾಣೆಯ ಪಿ.ಐ ಮೊ.ನಂ: 9480805455, ಪಿ.ಎಸ್.ಐ ಮೊ.ನಂ: 8277988957 ಮತ್ತು 8277988959 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕುಂದಾಪುರ ಪೊಲೀಸ್ ಠಾಣಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

















