ರೂರಲ್ ಎಜುಕೇಶನ್ ಸೊಸೈಟಿ (ರಿ) ಪಟ್ಲ ಅಧ್ಯಕ್ಷರಾಗಿ ಪೆರ್ಣಂಕಿಲ ಶ್ರೀಶ ನಾಯಕ್ ಆಯ್ಕೆ

ಉಡುಪಿ: ರೂರಲ್ ಎಜುಕೇಶನ್ ಸೊಸೈಟಿ, ಪಟ್ಲ ಇದರ ವಾರ್ಷಿಕ ಮಹಾ ಸಭೆಯು ಅಧ್ಯಕ್ಷರಾದ ಡಾ. ನಾರಾಯಣ ಶೆಣೈ ಕೆ. ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ಗತಸಭೆಗಳ ವರದಿಗಳನ್ನು ಮತ್ತು ಆಯ-ವ್ಯಯ ತಖ್ತೆಗಳನ್ನು ಓದಿ ಅನುಮೋದಿಸಿದ ಬಳಿಕ 2026-28ನೇ ಸಾಲಿಗೆ 9 ಜನರನ್ನು ಒಳಗೊಂಡ ನೂತನ ಆಡಳಿತ ಮಂಡಳಿಯನ್ನು ಆರಿಸಲಾಯಿತು. ರೂರಲ್ ಎಜುಕೇಶನ್ ಸೊಸೈಟಿ, ಪಟ್ಲ ಇದರ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪೆರ್ಣಂಕಿಲ ಶ್ರೀಶ ನಾಯಕ್ ಇವರು ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಡಾ. ಗೋಪಿನಾಥ ನಾಯಕ್, ದರ್ಮೆಟ್ಟು ಪಳ್ಳಿ, […]
ಪೆರ್ಡೂರಿನಲ್ಲಿ ಭರತನಾಟ್ಯ ತರಗತಿ ಉದ್ಘಾಟನೆ

ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಕಲೆ ಭರತನಾಟ್ಯ ಪೆರ್ಡೂರು: ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಭರತನಾಟ್ಯದಂತಹ ಶಾಸ್ತ್ರೀಯ ಕಲಾಪ್ರಕಾರಗಳ ಪಾತ್ರ ಮಹತ್ವದ್ದಾಗಿದ್ದು ಅಂತಹ ಕಲಾ ಪ್ರಕಾರವನ್ನು ಚಾಣಕ್ಯ ಸಂಸ್ಥೆ ಪೆರ್ಡೂರಿನಲ್ಲಿ ಪ್ರಾರಂಭಿಸುವುದರಿಂದ ಇಲ್ಲಿನ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದಂತಾಗಿದೆ ಎಂದು ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನ ಅನುದಾನಿತ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನರಸಿಂಹ ದೇವಾಡಿಗ ಹೇಳಿದರು. ಅವರು ಜೂ. 7ರಂದು ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಪ್ರಧಾನ […]
ಮಣಿಪಾಲ: ಯುವಕ ನಾಪತ್ತೆ

ಉಡುಪಿ ಜೂನ್ 8: ಮೂಲತಃ ನೇಪಾಳ ದೇಶದವರಾದ, ಪ್ರಸ್ತುತ ಮಣಿಪಾಲದ ಲಕ್ಷ್ಮೀಶ ನಗರದಲ್ಲಿರುವ ಹೋಟೆಲ್ ಒಂದರಲ್ಲಿ ವೇಟರ್ ಕೆಲಸ ಮಾಡಿಕೊಂಡಿದ್ದ ಮನೋಜ್ (20) ಎಂಬ ಯುವಕನು ಮೇ 18 ರಂದು ರಾತ್ರಿ 11 ರ ಸುಮಾರಿಗೆ ವಿಪರೀತ ಮದ್ಯಪಾನ ಮಾಡಿ, ಗಲಾಟೆ ಮಾಡುತ್ತಿದ್ದು, ಪೋಷಕರೊಂದಿಗೆ ಮನೆಗೆ ಹೋಗಲು ನಿರಾಕರಿಸಿ, ಓಡಿಹೋಗಿರುತ್ತಾನೆ. ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಡಿದರೂ, ಸ್ನೇಹಿತರನ್ನು ವಿಚಾರಿಸಿದರೂ ಇದುವರೆಗೂ ಪತ್ತೆಯಾಗಿರುವುದಿಲ್ಲ.5 ಅಡಿ 5 ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ತುಳು, ಹಿಂದಿ […]
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮುನಿಯಾಲ್ ಆಯುರ್ವೇದ ಕಾಲೇಜಿನಲ್ಲಿ ಔಷಧೀಯ ಸಸ್ಯ ಹಾಗೂ ಸೀಡ್ ಬಾಲ್ವಿತರಣೆ

ಮಣಿಪಾಲ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮುನಿಯಾಲ್ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಸೈನ್ಸಸ್‌ನಲ್ಲಿ ಜೂನ್ 5 ರಂದು ಔಷಧೀಯ ಸಸ್ಯ ವಿತರಣೆ ಹಾಗೂ ಸೀಡ್ ಬಾಲ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ಪ್ರಕೃತಿ ಪ್ರೇಮವನ್ನುಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಡಾ. ಶುಭಾ, ಆಡಳಿತಾಧಿಕಾರಿ ಯೋಗೇಶ್ ಶೆಟ್ಟಿ, ಸ್ನಾತಕೋತ್ತರ ವಿಭಾಗದ ಡೀನ್ ಡಾ. ರವಿಶಂಕರ ಶೆಣೈ, ಡಾ. ದಿನೇಶ್ ನಾಯಕ್ ಹಾಗೂ ದ್ರವ್ಯಗುಣ ವಿಭಾಗದ […]
ಉಡುಪಿ: ಮಹಿಳೆ ನಾಪತ್ತೆ

ಉಡುಪಿ, ಜೂನ್ 8: ಮೂಲತಃ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ತುರುವಿನಾಳ ಮೂಲದವರಾದ ನಾಗಮ್ಮ (30) ಎಂಬ ಮಹಿಳೆಯು ಕೂಲಿ ಕೆಲಸಕ್ಕೆಂದು ಕಳೆದ ಎರಡು ತಿಂಗಳ ಹಿಂದೆ ಕುಂದಾಪುರಕ್ಕೆ ಬಂದಿದ್ದು, ಕೆ.ಎಸ್.ಆರ್.ಟಿ.ಸಿ ಬಳಿ ಇರುವ ಟೆಂಟ್ ನಲ್ಲಿ ವಾಸವಿದ್ದ ಇವರು ಮೇ 30 ರಿಂದ ನಾಪತ್ತೆಯಾಗಿರುತ್ತಾರೆ. 5 ಅಡಿ 2 ಇಂಚು ಎತ್ತರ ಇರುವ ಇವರು ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕುಂದಾಪುರ ಪೊಲೀಸ್ ಠಾಣೆ ದೂ.ಸಂಖ್ಯೆ: 08254-230338, ಕುಂದಾಪುರ ವಿಭಾಗ ಡಿ.ವೈ.ಎಸ್.ಪಿ […]