ಮಲ್ಪೆ ಬೀಚ್ ನಲ್ಲಿ ಅಕ್ಕ ಕೆಫೆ ಉದ್ಘಾಟಿಸಿದ ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳ್ಕರ್

ಉಡುಪಿ: ಮಲ್ಪೆ ಬೀಚ್ನಲ್ಲಿ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಆರಂಭಿಸಲಾದ ‘ಅಕ್ಕ ಕೆಫೆ’ಯನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳ್ಕರ್ ಶನಿವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಿಳೆಯರು ಆರ್ಥಿಕವಾಗಿ ಸದೃಢರಾದಾಗ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿ, ‘ಅಕ್ಕ ಕೆಫೆ’ ಕೇವಲ ಉಪಹಾರ ಮಂದಿರವಲ್ಲ, ಅದು ಮಹಿಳೆಯರ ಶ್ರಮ, ಸ್ವಾಭಿಮಾನ ಮತ್ತು ಆತ್ಮವಿಶ್ವಾಸದ ಪ್ರತೀಕವಾಗಿದೆ ಎಂದು […]

ಪಡುಬಿದ್ರಿ: ಪ್ರಾಮಾಣಿಕತೆ ಮೆರೆದ ರಿಕ್ಷಾಚಾಲಕ

ಪಡುಬಿದ್ರಿ: ಪಡುಬಿದ್ರಿನಲ್ಲಿ ರಿಕ್ಷಾ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದು ಜನರಿಗೆ ಮಾದರಿಯಾಗಿದ್ದಾರೆ. ಪಡುಬಿದ್ರಿ ಬಸ್ ನಿಲ್ದಾಣದಲ್ಲಿ ಸುಮಾರು ₹50,000 ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ದೊರೆತಿದ್ದು, ಅದನ್ನು ರಿಕ್ಷಾ ಚಾಲಕ ಜಗದೀಶ ಮತ್ತು ಆಶಾಲತಾ ಅವರು ಪಡುಬಿದ್ರಿ ಪೊಲೀಸ್ ಠಾಣೆಗೆ ಒಪ್ಪಿಸಿದರು. ನಂತರ ಪೊಲೀಸರು ಬ್ಯಾಗಿನ ಮಾಲಕಿ ಫಾತಿಮಾ ಅವರನ್ನು ಪತ್ತೆಹಚ್ಚಿ, ಬ್ಯಾಗ್ ಅನ್ನು ಸುರಕ್ಷಿತವಾಗಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಠಾಣಾಧಿಕಾರಿ ಸಕ್ತಿವೇಲು ಉಪಸ್ಥಿತರಿದ್ದರು.

ತುಳುನಾಡಿನ ವಿಶಿಷ್ಟ ಆಚರಣೆ “ಕಾಪು ಪಿಲಿಕೋಲ” ಸಂಪನ್ನ

ಕಾಪುವಿನ ಐತಿಹಾಸಿಕ ಶ್ರೀ ಬ್ರಹ್ಮ ಮುಗೇರ್ಕಳ ಪಿಲಿಚಂಡಿ ದೈವಸ್ಥಾನದಲ್ಲಿ ದೈವಾರ್ಷಿಕವಾಗಿ ನಡೆಯುವ ಸಾಂಪ್ರದಾಯಿಕ ಹಾಗೂ ಪ್ರಸಿದ್ದ ಪಿಲಿಕೋಲವು ಸಂಪನ್ನಗೊಂಡಿದೆ. ತುಳುನಾಡಿನ ದೈವಾರಾಧನೆಯ ವಿಶಿಷ್ಟ ಆಚರಣೆಗಳಲ್ಲಿ ಒಂದಾದ ಈ ಕೋಲವು ಸಂಪ್ರದಾಯಬದ್ಧವಾಗಿ ಜರುಗಿತು. ಕಾಪುವಿನ ಪಡು ಗ್ರಾಮದ ಶ್ರೀಬ್ರಹ್ಮ ಮುಗ್ಗೆರ್ಕಳ ಹುಲಿಚಂಡಿ ದೈವಸ್ಥಾನದಲ್ಲಿ ನಡೆದ ಈ ಆಚರಣೆ ತುಳುನಾಡಿನ ಪ್ರಾಚೀನ ದೈವಾರಾಧನಾ ಪರಂಪರೆಯ ಪ್ರತೀಕ. ಪಿಲಿಕೋಲಕ್ಕೂ ಮುನ್ನ ತೆಂಗಿನ ಗರಿಗಳಿಂದ ತಯಾರಿಸಲಾದ ‘ಒಳಿಗುಂಡ’ ಎಂಬ ತಾತ್ಕಾಲಿಕ ಮಂಟಪದೊಳಗೆ ಹುಲಿವೇಷದ ಬಣ್ಣಗಾರಿಕೆ ನಡೆಯುತ್ತದೆ. ಈ ಸಂದರ್ಭದಲ್ಲಿ ದೈವೀಶಕ್ತಿಯ ಆವಾಹನೆಯಾಗುತ್ತದೆ ಎಂಬ […]

ಬಂಟಕಲ್ ನಲ್ಲಿ ಆರ್ ಎಸ್ ಬಿ, ಬಿಜಿಎಸ್ ಬಿ ‘ಋಣಾನುಬಂಧ’ ವಧುವರರ ಸಮಾವೇಶ

ಉಡುಪಿ: ಆರ್.ಎಸ್.ಬಿ. ಹಾಗೂ ಬಿ.ಜಿ.ಎಸ್.ಬಿ. ಸಮಾಜ ಬಾಂಧವರ ಜಂಟಿ ಆಶ್ರಯದಲ್ಲಿ, ಆರ್.ಎಸ್.ಬಿ. ಮತ್ತು ಬಿ.ಜಿ.ಎಸ್.ಬಿ. ಸಪ್ತಪದಿ ವಿವಾಹ ಮಾಹಿತಿ ಕೇಂದ್ರದ ವತಿಯಿಂದ ಆಯೋಜಿಸಲಾದ ‘ಋಣಾನುಬಂಧ’ ವಧುವರರ ಸಮಾವೇಶವು ಭಾನುವಾರ ಬಂಟಕಲ್ ರೋಟರಿ ಭವನದಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಪ್ತಪದಿ ವಿವಾಹ ಮಾಹಿತಿ ಕೇಂದ್ರದ ಅಧ್ಯಕ್ಷ ನಾಗೇಂದ್ರ ಕಾಮತ್ ಅವರು, ಸಮಾಜದ ಯುವ ಪೀಳಿಗೆಗೆ ಸೂಕ್ತ ಜೀವನ ಸಂಗಾತಿಯನ್ನು ಕಂಡುಕೊಳ್ಳಲು ಇಂತಹ ಸಮಾವೇಶಗಳು ಭದ್ರ ಬುನಾದಿ ಹಾಕಿಕೊಡುತ್ತವೆ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ […]

“ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಭಾರಿ ಬೆಂಕಿ ಆಕಸ್ಮಿಕಬೆಳಗಿನ ಜಾವ 5.15 ರ ಸುಮಾರಿಗೆ ಹೊತ್ತಿಕೊಂಡ ಬೆಂಕಿ…”

ಭೋಪಾಲ್‌: ಮಧ್ಯಪ್ರದೇಶದ ರತ್ನಂ ಜಿಲ್ಲೆಯಲ್ಲಿ ತಿರುವನಂತಪುರಂ-ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ರವಿವಾರ(ಮೇ17) ಭಾರಿ ಬೆಂಕಿ ಕಾಣಿಸಿಕೊಂಡಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಬೆಂಕಿ ಅವಘಡ ಸಂಭವಿಸಿದ ಕೋಚ್‌ನಲ್ಲಿ 68 ಪ್ರಯಾಣಿಕರಿದ್ದರು.ಪಶ್ಚಿಮ ಮಧ್ಯ ರೈಲ್ವೆಯ ಕೋಟಾ ವಿಭಾಗದ ಲುನಿ ರಿಚಾ ಮತ್ತು ವಿಕ್ರಮ್ ಗಢ ಅಲೋಟ್ ನಿಲ್ದಾಣಗಳ ನಡುವೆ ಬೆಳಗಿನ ಜಾವ 5.15 ರ ಸುಮಾರಿಗೆ ರೈಲು ಸಂಖ್ಯೆ 12431 ರ ಬಿ-1 ಕೋಚ್ ಮತ್ತು ಪಕ್ಕದ ಎಸ್‌ಎಲ್‌ಆರ್ (ಸೀಟಿಂಗ್ ಕಮ್ ಲಗೇಜ್) ಕೋಚ್‌ನಲ್ಲಿ ಈ ಘಟನೆ ಸಂಭವಿಸಿದೆ. […]