ಪಡುಬಿದ್ರಿ: ಪ್ರಾಮಾಣಿಕತೆ ಮೆರೆದ ರಿಕ್ಷಾಚಾಲಕ

ಪಡುಬಿದ್ರಿ: ಪಡುಬಿದ್ರಿನಲ್ಲಿ ರಿಕ್ಷಾ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದು ಜನರಿಗೆ ಮಾದರಿಯಾಗಿದ್ದಾರೆ. ಪಡುಬಿದ್ರಿ ಬಸ್ ನಿಲ್ದಾಣದಲ್ಲಿ ಸುಮಾರು ₹50,000 ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ದೊರೆತಿದ್ದು, ಅದನ್ನು ರಿಕ್ಷಾ ಚಾಲಕ ಜಗದೀಶ ಮತ್ತು ಆಶಾಲತಾ ಅವರು ಪಡುಬಿದ್ರಿ ಪೊಲೀಸ್ ಠಾಣೆಗೆ ಒಪ್ಪಿಸಿದರು.

ನಂತರ ಪೊಲೀಸರು ಬ್ಯಾಗಿನ ಮಾಲಕಿ ಫಾತಿಮಾ ಅವರನ್ನು ಪತ್ತೆಹಚ್ಚಿ, ಬ್ಯಾಗ್ ಅನ್ನು ಸುರಕ್ಷಿತವಾಗಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಠಾಣಾಧಿಕಾರಿ ಸಕ್ತಿವೇಲು ಉಪಸ್ಥಿತರಿದ್ದರು.