ಭಾರತೀಯ ರತ್ನಗಳ ಹಾಗೂ ಆಭರಣ ಸಂಸ್ಥೆಯಿoದ ಗ್ರಾಮೀಣ ಪ್ರತಿಭೆಗಳಿಗೆ ಸ್ವ-ಉದ್ಯೋಗದ ಸುವರ್ಣ ಅವಕಾಶ: ನಿರ್ಮಲಾ ಸೀತಾರಾಮನ್

ಉಡುಪಿ: 2016 ರಲ್ಲಿ ಸಣ್ಣ ಆವರಣದಲ್ಲಿ ಹಿಂಜರಿಕೆಯೊoದಿಗೆ ಆರಂಭವಾದ ಭಾರತೀಯ ರತ್ನ ಮತ್ತು ಆಭರಣ ಸಂಸ್ಥೆಯು ಹತ್ತು ವರ್ಷಗಳಲ್ಲಿ ಬೆಳೆದಿದ್ದು ಹಲವಾರು ಗ್ರಾಮೀಣ ಪ್ರತಿಭೆಗಳಿಗೆ ಉದ್ಯೋಗಾವಕಾಶಗಳನ್ನು ನೀಡಿದೆ ಎಂದು ಭಾರತ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಭಾರತೀಯ ರತ್ನಗಳ ಹಾಗೂ ಆಭರಣ ಸಂಸ್ಥೆಯ ನೂತನ ಕಚೇರಿಯ ಅನಾವರಣ ನಡೆಸಿ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಉದ್ಯಮ ನೇತೃತ್ವದ ಕೌಶಲ್ಯವು ಯುವಕರ ಜೀವನವನ್ನು ಹೇಗೆ ಪರಿವರ್ತಿಸುತ್ತದೆ ಮತ್ತು ಅವಕಾಶಗಳನ್ನು ಸೃಷ್ಟಿಸುತ್ತದೆ […]

ಮದರ್ ತೆರೇಸಾ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್: ಎ.29 ರಂದು SSLC ಮತ್ತು PUC ರಾಜ್ಯ ಮಟ್ಟದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ

ಕುಂದಾಪುರ: ಶಂಕರನಾರಾಯಣ ಮದರ್ ತೆರೇಸಾ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ವತಿಯಿಂದ ‘ಅಭ್ಯುದಯ’ ಯಶಸ್ಸಿನ ಸಂಭ್ರಮ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವು ಏಪ್ರಿಲ್ 29 ರಂದು ಸಂಸ್ಥೆಯಲ್ಲಿ ನಡೆಯಲಿದೆ.

ಆತ್ರಾಡಿ: ತಾಯಿ-ಮಗಳ ಹತ್ಯೆ ಪ್ರಕರಣ- ಆರೋಪಿಗೆ ಜೀವಾವಧಿ ಶಿಕ್ಷೆ

ಉಡುಪಿ: 2022ರಲ್ಲಿ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ತಾಯಿ–ಮಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಉಡುಪಿ ನ್ಯಾಯಾಲಯ ತೀರ್ಪು ನೀಡಿದೆ. ಅತ್ರಾಡಿ ಗ್ರಾಮದ ಮದಗ ಪ್ರದೇಶದ ನಿವಾಸಿ ಚೆಲುವಿ ಹಾಗೂ ಆಕೆಯ ಅಪ್ರಾಪ್ತ ವಯಸ್ಕ ಮಗಳು ಪ್ರಿಯಾ ಅವರ ಮೃತದೇಹಗಳು 2022ರ ಮೇ 9ರಂದು ಮನೆಯಲ್ಲಿ ಪತ್ತೆಯಾಗಿದ್ದವು. ಮೇ 8ರ ಸಂಜೆದಿಂದ 9ರ ಬೆಳಗಿನ ನಡುವಿನ ಅವಧಿಯಲ್ಲಿ ಅಪರಾಧ ನಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿತ್ತು. ಇಬ್ಬರನ್ನೂ ಕತ್ತು ಹಿಸುಕಿಕೊಂಡು ಕೊಲೆ ಮಾಡಿರುವುದು ದೃಢಪಟ್ಟಿತ್ತು. […]

ಕ್ರೈಸ್ಟ್ ಕಿಂಗ್ ಪ್ರೌಢಶಾಲೆಯ ಶಗುನ್ ಎಸ್ ವರ್ಮ ಹೆಗ್ಡೆ ಭಾರತೀಯ ವಾಲಿಬಾಲ್ ತಂಡದ ತರಬೇತಿ ಶಿಬಿರಕ್ಕೆ ಆಯ್ಕೆ

ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಶಗುನ್ ಎಸ್ ವರ್ಮ ಹೆಗ್ಡೆ ರಾಷ್ಟ್ರೀಯ ಸ್ಕೂಲ್ ಗೇಮ್ಸ್ ಫೆಡರೇಶನ್‌ನವರು ನಡೆಸುವ ೧೮ರ ವಯೋಮಿತಿಯ ಶಾಲಾ ಬಾಲಕಿಯರ ವಿಭಾಗದ ಅಂತಾರಾಷ್ಟ್ರೀಯ ವಾಲಿಬಾಲ್ ಪಂದ್ಯಾಟದ ಭಾರತೀಯ ವಾಲಿಬಾಲ್ ತಂಡದ ಆಯ್ಕೆಯ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾಳೆ. ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಆಯ್ಕೆ ಶಿಬಿರದಲ್ಲಿ ಒಟ್ಟು ೨೪ ಕ್ರೀಡಾಪಟುಗಳು ಆಯ್ಕೆಯಾಗಿದ್ದು ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಇಬ್ಬರಲ್ಲಿ ಶಗುನ್ ವರ್ಮ ಹೆಗ್ಡೆ ಕೂಡಾ ಒಬ್ಬಳಾಗಿದ್ದಾಳೆ. ಮುಂದೆ ಚೀನಾದ ಶಾಂಗ್ಲೋದಲ್ಲಿ ಅಂತಾರಾಷ್ಟ್ರೀಯ […]

ಬಂಟಕಲ್ ಇಂಜಿನಿಯರಿoಗ್ ಕಾಲೇಜಿನ ವಿದ್ಯಾರ್ಥಿಗಳಿಂದ ವಿಶ್ವ ಭೂ ದಿನದ ಅಂಗವಾಗಿ ಜಾಗೃತಿ ಜಾಥಾ

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸಾಂಸ್ಕೃತಿಕ ಘಟಕವು ಜಂಟಿಯಾಗಿ ವಿಶ್ವ ಭೂ ದಿನದ ಅಂಗವಾಗಿ ದಿನಾಂಕ ೨೫ ಎಪ್ರಿಲ್ ೨೦೨೬ ರಂದು ಭೂ ಸಂರಕ್ಷಣೆಯ ಕುರಿತು ಉಡುಪಿಯಲ್ಲಿ ಜಾಥವನ್ನು ಆಯೋಜಿಸಿತ್ತು. ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ರಾಧಾಕೃಷ್ಣ ಎಸ್ ಐತಾಳ್ ಮತ್ತು ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಾಗರಾಜ್ ಭಟ್ ಈ ಜಾಥಕ್ಕೆ ಚಾಲನೆ ನೀಡಿದರು. ಪ್ರಾಂಶುಪಾಲರು ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿ ಪರಿಸರ ಸಂರಕ್ಷಣೆಯಲ್ಲಿ […]