ಉಡುಪಿ ಕೃಷ್ಣಮಠದಲ್ಲಿ ಐಡಿ ಆಧಾರಿತ ಎಂಟ್ರೆನ್ಸ್ ವ್ಯವಸ್ಥೆಗೆ ಚಾಲನೆ

ಉಡುಪಿ: ಶ್ರೀರಥಬೀದಿ- ರಾಜಾಂಗಣ ರಾಜಮಾರ್ಗದಲ್ಲಿ ನೂತನವಾಗಿ ನವೀಕರಿಸಲಾದ ಶ್ರೀ ಕೃಷ್ಣ ದರ್ಶನಕ್ಕಾಗಿ ಸರತಿ ಸಾಲು ವ್ಯವಸ್ಥೆ ಮತ್ತು ಮೇಲ್ಛಾವಣಿ ವ್ಯವಸ್ಥೆ ಹಾಗೂ ವಿಐಪಿ ದರ್ಶನಕ್ಕಾಗಿ ಹಾಗೂ ಸ್ಥಳೀಯ ಭಕ್ತರಿಗಾಗಿ ಐಡಿ ಆಧಾರಿತ ಎಂಟ್ರೆನ್ಸ್ ವ್ಯವಸ್ಥೆಗೆ ಇಂದು ಚಾಲನೆ ನೀಡಲಾಯಿತು. ಪರ್ಯಾಯ ಶ್ರೀ ಶೀರೂರು ಮಠ ಪೀಠಾಧೀಶರಾದ ಶ್ರೀ ವೇದವರ್ಧನತೀರ್ಥ ಸ್ವಾಮೀಜಿ ನೂತನ ವ್ಯವಸ್ಥೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು,ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ […]

ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿ, ಉಗ್ರ ಶಾರಿಖ್‌ ಶಿಕ್ಷೆಯ ಪ್ರಮಾಣ ಹೆಚ್ಚಿಸಬೇಕೆಂದು ಹೈಕೋರ್ಟ್ ಮೆಟ್ಟಿಲೇರಲು ಎನ್ಐಎ ಸಿದ್ದತೆ

ಬೆಂಗಳೂರು: ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟ ಉಗ್ರ ಶಾರಿಖ್‌ಗೆ ವಿಧಿಸಲಾದ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ತೀರಾ ಕಡಿಮೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಭಿಪ್ರಾಯಪಟ್ಟಿದ್ದು, ಶಿಕ್ಷೆ ಹೆಚ್ಚಳಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದೆ. ಶಾರಿಖ್ ಪ್ರಸ್ತುತ 27 ವರ್ಷದವನಾಗಿದ್ದು, ಈಗಾಗಲೇ ಮೂರು ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದಾನೆ. ಹೀಗಾಗಿ ಉಳಿದಿರುವುದು ಕೇವಲ ಏಳು ವರ್ಷದ ಶಿಕ್ಷೆಯಷ್ಟೇ ಎಂಬುದನ್ನು ಎನ್ಐಎ ಉಲ್ಲೇಖಿಸಿದೆ. ಶಿಕ್ಷೆ ಪೂರ್ಣಗೊಂಡ ಬಳಿಕ ಆತ ಸುಮಾರು […]

ನಾಗಬ್ರಹ್ಮನ ಸನ್ನಿಧಿಯಲ್ಲಿ ‘ಕುಡ್ಲದ ಪೊಣ್ಣು’: ಬೇರುಗಳನ್ನು ಮರೆಯದ ಪೂಜಾ ಹೆಗ್ಡೆ

ಉಡುಪಿ: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ಪೂಜಾ ಹೆಗ್ಡೆ, ಸಿನಿಮಾ ಲೋಕದ ಗ್ಲಾಮರ್ ಬದಿಗಿಟ್ಟು ತುಳುನಾಡಿನ ಮಣ್ಣಿನ ಮಗಳಾಗಿ ಭಕ್ತಿ ಮೆರೆದಿದ್ದಾರೆ. ಕುತ್ಯಾರು ಮೂಲದ ಬೆಟ್ಟು ನಾಗ ಬ್ರಹ್ಮಸ್ಥಾನದ ತಮ್ಮ ಮೂಲಮನೆಯಲ್ಲಿ ನಡೆದ ಪವಿತ್ರ ‘ಡೆಕ್ಕೆ ಬಲಿ’ ಸೇವೆಯಲ್ಲಿ ಅವರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ಸಾಂಸ್ಕೃತಿಕ ಬೇರುಗಳನ್ನು ಮರೆಯದ ಪೂಜಾ, ಅಲ್ಲಿ ನೆರೆದಿದ್ದ ಭಕ್ತರ ನಡುವೆ ಅತ್ಯಂತ ಸರಳವಾಗಿ ಬೆರೆತು ಅಪ್ಪಟ ‘ಕುಡ್ಲದ ಪೊಣ್ಣು’ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕಾಡಿನಿಂದ […]

ಜನತಾ ಪಿಯು ಕಾಲೇಜು ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಜಿಲ್ಲೆಗೆ ಪ್ರಥಮ ರ‍್ಯಾಂಕ್ ಟಾಪ್ 10ರಲ್ಲಿ 17 ರ‍್ಯಾಂಕ್

ಹೆಮ್ಮಾಡಿ: ವಿಜ್ಞಾನ ವಿಭಾಗದಲ್ಲಿ 598 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದ ಹೆಮ್ಮಾಡಿಯ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿನಿ ರಶ್ಮಿ ಅವರಿಗೆ ಸಮರ್ಪಣಾ ಎಜುಕೇಶನಲ್ ಟ್ರ್ರಸ್ಟ್ ಅಧ್ಯಕ್ಷ, ಪ್ರಾಂಶುಪಾಲ ಗಣೇಶ್ ಆರ್. ಮೊಗವೀರ ಅವರು 2 ಲಕ್ಷ ರೂ. ನಗದು ಘೋಷಣೆ ಮಾಡಿದ್ದಾರೆ. ಹೆಮ್ಮಾಡಿಯ ಮತ್ತ್ವಜ್ಯೋತಿ ಸಭಾಂಗಣದಲ್ಲಿ ರಾಂಕ್ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಸಂಸ್ಥೆ ಸ್ಥಾಪನೆಯಾದ ನಾಲ್ವೇ ವರ್ಷಗಳಲ್ಲಿ ಕ್ರೀಡೆ, ಸಾಂಸ್ಕೃತಿಕ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಲವು ಸಾಧನೆಗಳನ್ನು ಮಾಡಿದ್ದೇವೆ. ಕೇವಲ ಒಂದೆರಡು […]

ಯುಪಿಎಂಸಿ- ಉಪೇಂದ್ರ ಪೈ ಪ್ರೀಮಿಯರ್ ಲೀಗ್ ಉದ್ಘಾಟನೆ

ಉಡುಪಿ: ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ (UPMC)ಕಾಲೇಜಿನಲ್ಲಿ ವಿದ್ಯಾರ್ಥಿಗಳೇ ಐಪಿಎಲ್ ಮಾದರಿಯಲ್ಲಿ ಹರಾಜು ಪ್ರಕ್ರಿಯೆ ನಡೆಸಿ ಪ್ರತಿ ವರ್ಷದಂತೆ ಆಯೋಜಿಸಿಕೊಂಡು ಬರುತ್ತಿರುವ ಯುಪಿಎಂಸಿ ಟ್ರೋಫಿ 2026 ಯುಪಿಎಂಸಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಮತ್ತು ಥ್ರೋ ಬಾಲ್ ಪಂದ್ಯಾಟವನ್ನು ಅದಿತಿ ಬಿಲ್ಡರ್ಸ್ ಮಾಲಕರಾದ ಶ್ರೀ ರಂಜನ್ ಪೂಜಾರಿ ಉದ್ಘಾಟಿಸಿದರು. ಅವರು ವಿದ್ಯಾರ್ಥಿಗಳು ಕಲಿಕೆಯ ಜೊತೆಯಲ್ಲಿ ಕ್ರೀಡೆಯನ್ನು ಹವ್ಯಾಸವಾಗಿ ಅಳವಡಿಸಿಕೊಂಡು ಆಸಕ್ತಿ ತೋರಬೇಕು, ಇದರಿಂದ ಜೀವನದಲ್ಲಿ ಯಶಸ್ಸು ದೊರಕುತ್ತದೆ ಎಂದರು. ಮತ್ತೋರ್ವ ಅತಿಥಿಗಳಾದ ಕಾವೇರಿ ಟಿಂಬರ್ಸ್ ನ ಮಾಲಕರಾದ ಶ್ರೀ […]