ಪರೀಕ್ಷಾ ಪೂರ್ವ ತರಬೇತಿ: ಅರ್ಜಿ ಆಹ್ವಾನ

ಉಡುಪಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಸತಿ ಸಹಿತ ಉಚಿತವಾಗಿ ಪಿ.ಯು.ಸಿ (ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗ) ಶಿಕ್ಷಣದೊಂದಿಗೆ ನೀಟ್, ಜೆ.ಇ.ಇ ಮತ್ತು ಸಿ.ಇ.ಟಿ ಪರೀಕ್ಷಾ ಪೂರ್ವ ತರಬೇತಿ ಪಡೆಯಲು, ರಾಜ್ಯದ ಖಾಯಂ ನಿವಾಸಿಯಾಗಿರುವ, ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಅಥವಾ 3ಬಿ ಜಾತಿಗೆ ಸೇರಿರುವ, ಕುಟುಂಬದ ಒಟ್ಟು ವಾರ್ಷಿಕ ಆದಾಯ ಮಿತಿ 8 ಲಕ್ಷ ರೂ. ಒಳಗಿರುವ ಹಾಗೂ ಎಸ್.ಎಸ್.ಎಲ್.ಸಿ ವ್ಯಾಸಾಂಗವನ್ನು ಸರ್ಕಾರಿ ವಸತಿ ರಹಿತ […]
ವಿಶೇಷಚೇತನ ವಿದ್ಯಾರ್ಥಿಗಳಿಗೆ ಡಿಪ್ಲೋಮಾ ಪ್ರವೇಶಾತಿ: ಅರ್ಜಿ ಆಹ್ವಾನ

ಉಡುಪಿ: ಮೈಸೂರಿನ ಜೆ.ಎಸ್.ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ ಮೂರು ವರ್ಷಗಳ ಅವಧಿಯ ಡಿಪ್ಲೋಮಾ ಕೋರ್ಸುಗಳ ಪ್ರವೇಶಾತಿಗಾಗಿ ಎಸ್.ಎಸ್.ಎಲ್.ಸಿ / ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿಶೇಷಚೇತನ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 5 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ www.jsspda.org ಅಥವಾ ಪ್ರಾಂಶುಪಾಲರು, ಜೆ.ಎಸ್.ಎಸ್ ವಿಶೇಷಚೇತನರ ಪಾಲಿಟೆಕ್ನಿಕ್, ಮೈಸೂರು, ಮೊ.ನಂ: 9844644937 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲರ ಕಚೇರಿ ಪ್ರಕಟಣೆ ತಿಳಿಸಿದೆ.
ಅತಿಥಿ ಉಪನ್ಯಾಸಕರ ಹುದ್ದೆ: ಅರ್ಜಿ ಆಹ್ವಾನ

ಉಡುಪಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಾರಂಭವಾಗುವ ಅಲ್ಪಸಂಖ್ಯಾತರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ (ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗ) ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಜಿದಾರರು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಅಲ್ಪಸಂಖ್ಯಾತರ ತಾಲೂಕು ವಿಸ್ತರಣಾಧಿಕಾರಿಗಳ ಕಚೇರಿ, ನೆಲ ಮಹಡಿ, ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ, ತಾಲೂಕು ಪಂಚಾಯತ್ ರೋಡ್, ಕುಂದಾಪುರ ಇಲ್ಲಿ ಮೇ 16 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. […]
ಕುಂದಾಪುರ: ತಿರಸ್ಕೃತ ಬೆಳೆ ವಿಮೆ ಪಟ್ಟಿ ಪ್ರಕಟ – ಆಕ್ಷೇಪಣೆ ಆಹ್ವಾನ

ಉಡುಪಿ: ಕೃಷಿ ಇಲಾಖೆಯ ವತಿಯಿಂದ 2024-25 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿಗಳ ಫಸಲ್ ಭಿಮಾ ಯೋಜನೆಯಡಿ ಬೈಂದೂರು ತಾಲೂಕಿನ 58 ಹಾಗೂ ಕುಂದಾಪುರ ತಾಲೂಕಿನ 38 ಪ್ರಸ್ತಾವನೆಗಳು ವಿಮಾ ಸಂಸ್ಥೆಯಿoದ ತಿರಸ್ಕೃತಗೊಂಡಿದ್ದು, ತಿರಸ್ಕೃತಗೊಂಡ ರೈತರ ಪ್ರಸ್ತಾವನೆಯ ಪಟ್ಟಿಯನ್ನು ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ರೈತ ಸಂಪರ್ಕ ಕೇಂದ್ರ ಹಾಗೂ ಸಂಬoಧಿತ ಗ್ರಾಮ ಪಂಚಾಯತ್ ಕಚೇರಿಗಳ ನೋಟೀಸ್ ಬೋರ್ಡಿನಲ್ಲಿ ರೈತರ ಮಾಹಿತಿಗಾಗಿ ಮೇ 11 ರ ವರೆಗೆ ಪ್ರಕಟಿಸಲಾಗಿರುತ್ತದೆ. ರೈತರು […]
ವ್ಯಕ್ತಿ ಸ್ಥಿತಿ ಚಿಂತಾಜನಕ: ವಾರಸುದಾರರಿಗೆ ಸೂಚನೆ

ಉಡುಪಿ: ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ 55 ವರ್ಷದ ಅಪರಿಚಿತ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ವಾರಿಸುದಾರರು ಯಾರಾದರೂ ಇದ್ದಲ್ಲಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರ ದೂ.ಸಂ: 0820-2520555/9449827833 ಅನ್ನು ಸಂಪರ್ಕಿಸುವoತೆ ಜಿಲ್ಲಾಸ್ಪತ್ರೆಯ ಕಚೇರಿ ಪ್ರಕಟಣೆ ತಿಳಿಸಿದೆ.