ಪೆರ್ಡೂರು ಎ.ಪಿ. ಟಿ. ಶಾಲೆಯಲ್ಲಿ ಚಾಣಕ್ಯ ನಲಿ ಕಲಿ ಬೇಸಗೆ ಶಿಬಿರ

ಹೆಬ್ರಿ: ರಜಾ ಸಮಯನ್ನು ಟಿವಿ ಮೊಬೈಲ್ ನೋಡುತ್ತಾ ವ್ಯರ್ಥ ಕಾಲ ಹರಣ ಮಾಡುವ ಬದಲು ಇಂತಹ ಬದುಕು ಶಿಕ್ಷಣ ನೀಡುವ ಬೇಸಗೆ ಶಿಬಿರಕ್ಕೆ ಸೇರ್ಪಡೆಗೊಳಿಸಿದಾಗ ಮಕ್ಕಳ ಪ್ರತಿಭೆಗಳು ಅನಾವರಣಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆ ಕಳೆದ 11 ವರ್ಷಗಳಿಂದ ವಿನೂತನ ಬೇಸಿಗೆ ಶಿಬಿರ ಮೂಲಕ ಮಕ್ಕಳ ಮನೆಗೆದ್ದಿದೆ ಎಂದು ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಮೋದ್ ರೈ ಪಳಜೆ ಹೇಳಿದರು. ಅವರು ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಪೆರ್ಡೂರು ಅನಂತಪದ್ಮನಾಭ […]

ಉಡುಪಿ: ಅಶ್ವಥ ಎಲೆಯಲ್ಲಿ ಮೂಡಿಬಂದ ರಾಜಕುಮಾರ್ ರೇಖಾಚಿತ್ರ

ಉಡುಪಿ: ಇಂದು ನಟಸಾರ್ವಭೌಮ ಡಾ. ರಾಜಕುಮಾರ್ ಜನ್ಮದಿನ. ಈ ದಿನವನ್ನು ಅಭಿಮಾನಿಗಳು ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದಾರೆ. ನಟಸಾರ್ವಭೌಮನ ಜನ್ಮದಿನದ ಅಂಗವಾಗಿ ಅಶ್ವಥ್ದ ಎಲೆಯಲ್ಲಿ ಚಿತ್ರವನ್ನು ರಚಿಸಲಾಗಿದೆ‌ 97ನೇ ವರ್ಷದ ಜನುಮದಿನದ. ಅಂಗವಾಗಿ ಕಲಾವಿದ ಸಾಮಾಜಿಕ ಕಾರ್ಯಕರ್ತ ಸರಳೆಬೆಟ್ಟು ಗಣೇಶ್ ರಾಜ್ ಅವರು ಈ ಅಪರೂಪದ ಚಿತ್ರ ರಚಿಸಿದ್ದಾರೆ. ಕಲಾವಿದನ ಕೈಚಳಕದಲ್ಲಿ ಒಣಗಿದ ಅಶ್ವಥ ಎಲೆಯಲ್ಲಿ ವರನಟ ರಾಜಕುಮಾರ್ ಅವರ ರೇಖಾ ಚಿತ್ರ ಮೂಡಿಬಂದಿದೆ. ಉಡುಪಿಯಲ್ಲಿ ರಾಜ್ ಅಭಿಮಾನಿ ಸಂಘದ ಕಾರ್ಯದರ್ಶಿಯಾಗಿ ಗಣೇಶ್ ರಾಜ್ ಕೆಲಸ ಮಾಡಿದ್ದರು

ಎಸ್.ಎಸ್.ಎಲ್.ಸಿ ಫಲಿತಾಂಶ: ಕಾರ್ಕಳ ಜ್ಞಾನಸುಧಾ ಪ್ರೌಢಶಾಲೆಯ ಇಬ್ಬರು ರಾಜ್ಯಕ್ಕೆ ದ್ವಿತೀಯ

ಕಾರ್ಕಳ: ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಲ್ಲಿನ ಜ್ಞಾನಸುಧಾ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರು 624 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿನಿ ಮಹಾಲಕ್ಷ್ಮಿ ಭಾಗವ್ 624 ಅಂಕಗಳನ್ನು ಗಳಿಸಿದ್ದು,  ಇವರು  ಕಾರ್ಕಳ ತಾಲೂಕು ಹಿರ್ಗಾನದ ಜಗದೀಶ್ ಭಾಗವ್ ಹಾಗೂ ವನಿತಾ ಭಾಗವ್ ಅವರ ಪುತ್ರಿ. ಭವಿಷ್ಯದಲ್ಲಿ ವೈದ್ಯೆಯಾಗಬೇಕೆಂಬ ಆಸೆಯನ್ನು ಹೊಂದಿದ್ದು, ಯಕ್ಷಗಾನ ರಂಗದಲ್ಲೂ ಹೆಸರು ಮಾಡಿದ್ದಾರೆ. ಇನ್ನೊಬ್ಬ ವಿದ್ಯಾರ್ಥಿನಿ ಮಹಾಲಕ್ಷ್ಮಿ ಪೈ ಬಿ ಗುಡ್ಡೆಯಂಗಡಿ ನಿವಾಸಿಗಳಾದ ಮಂಜುನಾಥ ಪೈ ಹಾಗೂ ಮೇಘ ಪೈ […]

ಮಣಿಪಾಲ: ಮಾವಿನಕಾಯಿ ಕೊಯ್ಯುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಮೃತ್ಯು

ಉಡುಪಿ: ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಹಿಂಭಾಗದಲ್ಲಿ ಮಾವಿನಕಾಯಿ ಕೊಯ್ಯುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ದುರ್ಘಟನೆ ನಡೆದಿದೆ. ಮೃತ ದುರ್ದೈವಿ ಅಲೆವೂರು ನಿವಾಸಿ ಸದಾನಂದ ದೇವಾಡಿಗ (55) ಎಂದು ಗುರುತಿಸಲಾಗಿದೆ. ಅವರು ಗ್ರಾಮ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಶುಕ್ರವಾರ ಬೆಳಿಗ್ಗೆ ಮಾವಿನ ಕಾಯಿ ಕೊಯ್ಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿದ್ದು, ಇದರಿಂದ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ಇಲಾಖೆ ಸಿಬ್ಬಂದಿ ಆಗಮಿಸಿ […]

ಹೆಬ್ರಿ ಎಸ್.ಆರ್. ಸ್ಕೂಲ್: 18ನೇ ಬಾರಿ ಎಸ್.ಎಸ್.ಎಲ್.ಸಿ. 100% ಫಲಿತಾಂಶ.

ಹೆಬ್ರಿ: ಈ ಬಾರಿಯ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಹೆಬ್ರಿಯ ಎಸ್.ಆರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು 18ನೇ ಬಾರಿ 100% ಫಲಿತಾಂಶವನ್ನು ದಾಖಲಿಸಿಕೊಂಡಿದೆ. ದೀಪ್ತಿ.ಎಸ್.ಆಚಾರ್ಯ 593 (94.88%)ಅಂಕ ಪಡೆದು ಪ್ರಥಮ ಸ್ಥಾನ, ಪ್ರೀತಿ ನಾಯ್ಕ್ 590 (94.40%) ಮತ್ತು ಸೌಜನ್ಯ ಶೆಟ್ಟಿ 590 (94.40%)ಅಂಕ ಪಡೆದು ದ್ವಿತೀಯ ಸ್ಥಾನ, ಸೃಜನ್ ಎಸ್ ನಾಯ್ಕ್ 580 (92.80%)ಅಂಕ ಪಡೆದು ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾದ 53 ವಿದ್ಯಾರ್ಥಿಗಳಲ್ಲಿ,11 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 29 ವಿದ್ಯಾರ್ಥಿಗಳು ಪ್ರಥಮ […]