ಹೆಬ್ರಿ ಎಸ್.ಆರ್. ಸ್ಕೂಲ್: 18ನೇ ಬಾರಿ ಎಸ್.ಎಸ್.ಎಲ್.ಸಿ. 100% ಫಲಿತಾಂಶ.

ಹೆಬ್ರಿ: ಈ ಬಾರಿಯ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಹೆಬ್ರಿಯ ಎಸ್.ಆರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು 18ನೇ ಬಾರಿ 100% ಫಲಿತಾಂಶವನ್ನು ದಾಖಲಿಸಿಕೊಂಡಿದೆ.

ದೀಪ್ತಿ.ಎಸ್.ಆಚಾರ್ಯ 593 (94.88%)ಅಂಕ ಪಡೆದು ಪ್ರಥಮ ಸ್ಥಾನ, ಪ್ರೀತಿ ನಾಯ್ಕ್ 590 (94.40%) ಮತ್ತು ಸೌಜನ್ಯ ಶೆಟ್ಟಿ 590 (94.40%)ಅಂಕ ಪಡೆದು ದ್ವಿತೀಯ ಸ್ಥಾನ, ಸೃಜನ್ ಎಸ್ ನಾಯ್ಕ್ 580 (92.80%)ಅಂಕ ಪಡೆದು ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಪರೀಕ್ಷೆಗೆ ಹಾಜರಾದ 53 ವಿದ್ಯಾರ್ಥಿಗಳಲ್ಲಿ,11 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 29 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು  ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹೆಚ್.ನಾಗರಾಜ ಶೆಟ್ಟಿ, ಕಾರ್ಯದರ್ಶಿಯವರಾದ ಸಪ್ನಾ ಎನ್. ಶೆಟ್ಟಿ ಅಭಿನಂದಿಸಿದ್ದಾರೆ.