ಹೆಬ್ರಿ: ರಜಾ ಸಮಯನ್ನು ಟಿವಿ ಮೊಬೈಲ್ ನೋಡುತ್ತಾ ವ್ಯರ್ಥ ಕಾಲ ಹರಣ ಮಾಡುವ ಬದಲು ಇಂತಹ ಬದುಕು ಶಿಕ್ಷಣ ನೀಡುವ ಬೇಸಗೆ ಶಿಬಿರಕ್ಕೆ ಸೇರ್ಪಡೆಗೊಳಿಸಿದಾಗ ಮಕ್ಕಳ ಪ್ರತಿಭೆಗಳು ಅನಾವರಣಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆ ಕಳೆದ 11 ವರ್ಷಗಳಿಂದ ವಿನೂತನ ಬೇಸಿಗೆ ಶಿಬಿರ ಮೂಲಕ ಮಕ್ಕಳ ಮನೆಗೆದ್ದಿದೆ ಎಂದು ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಮೋದ್ ರೈ ಪಳಜೆ ಹೇಳಿದರು.
ಅವರು ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಪೆರ್ಡೂರು ಅನಂತಪದ್ಮನಾಭ ದೇವಸ್ಥಾನ ಅನುದಾನಿತ ಪ್ರಾಥಮಿಕ ಶಾಲೆ, ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಶಿಕ್ಷಕ ವೃಂದ ಇವರ ಸಹಯೋಗದೊಂದಿಗೆ ಪೆರ್ಡೂರು ಎ.ಪಿ. ಟಿ.ಶಾಲೆಯಲ್ಲಿ ನಡೆಯುತ್ತಿರುವ ಬೇಸಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಾಂತರಾಮ್ ಸೂಡ ಕೆ. ಮಾತನಾಡಿ ಪೋಷಕರು ತಮ್ಮ ಮಕ್ಕಳನ್ನು ಕೇವಲ ಅಂಕ ಗಳಿಕೆಯ ಸಾಧನಾವಾಗಿಸದೆ ನಮ್ಮ ಸಂಸ್ಕೃತಿ ಸಂಸ್ಕಾರದ ಬಗ್ಗೆ ತಿಳಿ ಹೇಳಿ ಇಂತಹ ಶಿಬಿರದ ಪ್ರಯೋಜನ ಪಡೆಯುವಂತೆ ಪ್ರೆರೇಪಿಸಬೇಕು. ಸಮಾಜಮುಖಿ ಚಿಂತನೆಯುಳ್ಳ ಪತ್ರಕರ್ತ ಉದಯಕುಮಾರ್ ಶೆಟ್ಟಿ ಮತ್ತು ಅವರ ತಂಡದ ಪರಿಶ್ರಮ ಶ್ಲಾಘನೀಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಎಸ್ಡಿ ಎಂಸಿ ಅಧ್ಯಕ್ಷ ನರಸಿಂಹ ದೇವಾಡಿಗ ವಹಿಸಿದ್ದರು. ಸಮಾರಂಭದಲ್ಲಿ ಎಪಿಟಿ ಶಾಲೆಯ ಶಿಕ್ಷಕರಾದ ಸುಪ್ರಿತಾ, ನಮಿತಾ, ಜಯ, ಚಾಣಕ್ಯ ನಲಿಕಲಿ ಬೇಸಿಗೆ ಶಿಬಿರದ ಸಂಯೋಜಕಿ ಭವ್ಯ, ಮಾನ್ಯ, ಧನ್ಯ, ಮಾನ್ವಿ ಮೊದಲಾದವರು ಉಪಸ್ಥಿರಿದ್ದರು.
ಶಾಲಾ ಮುಖ್ಯ ಶಿಕ್ಷಕ ಅರುಣ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಚಾಣಕ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಚಾಣಕ್ಯದ ಪ್ರಾಂಶುಪಾಲೆ ವೀಣಾ ಶೆಟ್ಟಿ ವಂದಿಸಿದರು. ಶಿಬಿರದ ಯಶಸ್ವಿಗೆ ಶಾಲಾ ಎಸ್ಡಿಎಂಸಿ, ಶಾಲಾ ಶಿಕ್ಷಕ ವೃಂದ ಸಹಕರಿಸಿದರು.

















