ಉಡುಪಿ: ಅಶ್ವಥ ಎಲೆಯಲ್ಲಿ ಮೂಡಿಬಂದ ರಾಜಕುಮಾರ್ ರೇಖಾಚಿತ್ರ

ಉಡುಪಿ: ಇಂದು ನಟಸಾರ್ವಭೌಮ ಡಾ. ರಾಜಕುಮಾರ್ ಜನ್ಮದಿನ. ಈ ದಿನವನ್ನು ಅಭಿಮಾನಿಗಳು ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದಾರೆ.

ನಟಸಾರ್ವಭೌಮನ ಜನ್ಮದಿನದ ಅಂಗವಾಗಿ ಅಶ್ವಥ್ದ ಎಲೆಯಲ್ಲಿ ಚಿತ್ರವನ್ನು ರಚಿಸಲಾಗಿದೆ‌ 97ನೇ ವರ್ಷದ ಜನುಮದಿನದ. ಅಂಗವಾಗಿ ಕಲಾವಿದ ಸಾಮಾಜಿಕ ಕಾರ್ಯಕರ್ತ ಸರಳೆಬೆಟ್ಟು ಗಣೇಶ್ ರಾಜ್ ಅವರು ಈ ಅಪರೂಪದ ಚಿತ್ರ ರಚಿಸಿದ್ದಾರೆ.

ಕಲಾವಿದನ ಕೈಚಳಕದಲ್ಲಿ ಒಣಗಿದ ಅಶ್ವಥ ಎಲೆಯಲ್ಲಿ ವರನಟ ರಾಜಕುಮಾರ್ ಅವರ ರೇಖಾ ಚಿತ್ರ ಮೂಡಿಬಂದಿದೆ.

ಉಡುಪಿಯಲ್ಲಿ ರಾಜ್ ಅಭಿಮಾನಿ ಸಂಘದ ಕಾರ್ಯದರ್ಶಿಯಾಗಿ ಗಣೇಶ್ ರಾಜ್ ಕೆಲಸ ಮಾಡಿದ್ದರು