ಆರ್ ಎಸ್ ಬಿ ವಧು-ವರರ ಸಮಾವೇಶ-2026 ಸಂಪನ್ನ

ಉಡುಪಿ: ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ, (ರಿ.) ಮಣಿಪಾಲ, ರಾಜಾಪುರ ಸಾರಸ್ವತ ಬ್ರಾಹ್ಮಣ ಮಹಿಳಾ ವೇದಿಕೆ, (ರಿ.) ಮಣಿಪಾಲ ಮತ್ತು ರಾಜಾಪುರ ಸಾರಸ್ವತ ಸಮಾಜ (ರಿ.) ಬೆಂಗಳೂರು ಇದರ ಅಂಗಸಂಸ್ಥೆಯಾಗಿರುವ ಆರ್ ಎಸ್ ಬಿ ಅನುಬಂಧ ವಿವಾಹ ವೇದಿಕೆ , ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆರ್ ಎಸ್ ಬಿ ಸಮಾಜದ ವಿವಾಹಾಪೇಕ್ಷಿತ ವಧು- ವರರ ಸಮಾವೇಶವು ಎ.19 ರಂದು ಮಣಿಪಾಲದ ಆರ್ ಎಸ್ ಬಿ ಭವನದಲ್ಲಿ ಜರಗಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಣಿಪಾಲ ಆರ್ ಎಸ್ […]

ಬೇಸಿಗೆಗೆ ಇಡ್ಲಿ, ದೋಸೆ, ವಡೆ ತಿನ್ನುವ ಮೊದಲು ಎಚ್ಚರಿಕೆ ಬೇಕೇ ಬೇಕು: ಇಡ್ಲಿ ತಿಂದು ಉದ್ಯೋಗಿಗಳು ಅಸ್ವಸ್ಥರಾದ ಪ್ರಕರಣ, ಈಗ ಹಲವು ಚರ್ಚೆಗೆ ಕಾರಣ!

ಬೆಂಗಳೂರು: ನಗರದ ಖಾಸಗಿ ಕಂಪನಿಯ ಕ್ಯಾಂಟೀನ್‌ನಲ್ಲಿ ಇಡ್ಲಿ, ವಡೆ ಹಾಗೂ ಸಾಂಬಾರ್-ಅನ್ನ ಸೇವಿಸಿದ ಬಳಿಕ 97 ಮಂದಿ ಉದ್ಯೋಗಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಈ ಘಟನೆಯ ಬಳಿಕ ಹುದುಗಿಸಿದ (fermented) ಆಹಾರಗಳ ಸುರಕ್ಷತೆ ಕುರಿತು ಚರ್ಚೆಗಳು ಮತ್ತೆ ಜೋರಾಗಿದೆ. ಸಾಮಾನ್ಯವಾಗಿ ಇಡ್ಲಿ, ದೋಸೆ, ವಡೆಯಂತಹ ಹುದುಗಿಸಿದ ಆಹಾರ ಪದಾರ್ಥಗಳನ್ನು ಕರುಳಿನ ಆರೋಗ್ಯಕ್ಕೆ ಉತ್ತಮ, ಸುಲಭವಾಗಿ ಜೀರ್ಣವಾಗುವ ಆಹಾರವೆಂದು ಪರಿಗಣಿಸಲಾಗುತ್ತದೆ. ಆದರೆ ಬೇಸಿಗೆಯ ಹೆಚ್ಚಿನ ತಾಪಮಾನದಲ್ಲಿ ಇವುಗಳನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸದಿದ್ದರೆ ಅಪಾಯ ಉಂಟಾಗಬಹುದು […]

ಚಾರ್ಮಾಡಿ ಘಾಟ್‌ನಲ್ಲಿ ಭೀಕರ ಅಪಘಾತ: ಪಿಕಪ್ ಪಲ್ಟಿಯಾಗಿ ಹಲವರಿಗೆ ಗಂಭೀರ ಗಾಯ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಘಾಟ್ ರಸ್ತೆಯ ಆರನೇ ತಿರುವಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ, ಹತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ. 25ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಪಿಕಪ್ ವಾಹನ ಪಲ್ಟಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗಾಯಾಳುಗಳಲ್ಲಿ ಆಂಧ್ರಪ್ರದೇಶ ಹಾಗೂ ಬಳ್ಳಾರಿ ಮೂಲದ ಪ್ರಯಾಣಿಕರು ಸೇರಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ಆರಂಭಿಸಿ, […]

ಮಲ್ಪೆ ಪ್ರವಾಸಕ್ಕೆಂದು ಬಂದಿದ್ದ ವ್ಯಕ್ತಿ ಸಾವು

ಉಡುಪಿ: ಪ್ರವಾಸಕ್ಕಾಗಿ ಮಲ್ಪೆಗೆ ಬಂದಿದ್ದ ವ್ಯಕ್ತಿಯೊಬ್ಬರು ವಾಸ್ತವ್ಯ ಹೂಡಿದ್ದ ಹೋಟೆಲ್ ರೂಮಿನಲ್ಲಿ ಮಲಗಿದ್ದಲ್ಲಿಯೇ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಬೆಂಗಳೂರು ಆನೇಕಲ್ ನಿವಾಸಿ ಧನಂಜಯ್ ಕೆ.ಎನ್. (37) ಎಂದು ಗುರುತಿಸಲಾಗಿದೆ. ಇವರು ಕಳೆದ ಸುಮಾರು ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಏಪ್ರಿಲ್ 19ರಂದು ಸಂಜೆ ಸ್ನೇಹಿತರೊಂದಿಗೆ ಮಲ್ಪೆಗೆ ಪ್ರವಾಸಕ್ಕೆ ಆಗಮಿಸಿದ್ದ ಧನಂಜಯ್ ಅವರು ರೂಮಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಏಪ್ರಿಲ್ 20ರಂದು ಮಧ್ಯಾಹ್ನ ಅವರು ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ […]

“ನನ್ನ ಕೆಲಸವೇ ಪ್ರಪಂಚ ಎಂದುಕೊಂಡಿದ್ದೆ, ಈಗ ಆ ಕೆಲಸವನ್ನೇ ಕಳೆದುಕೊಂಡಿದ್ದೇನೆ” ವೈರಲ್ ಆಗ್ತಿದೆ ಮಹಿಳಾ ಉದ್ಯೋಗಿಯ ಈ ವಿಡಿಯೋ!

ಬೆಂಗಳೂರು: ಕಾರ್ಪೊರೇಟ್ ಲೋಕದಲ್ಲಿ ಎಷ್ಟು ನಿಷ್ಠೆಯಿಂದ ಕೆಲಸ ಮಾಡಿದರೂ, ಕೆಲವೊಮ್ಮೆ ಅನಿರೀಕ್ಷಿತವಾಗಿ ಸಂಕಷ್ಟ ಎದುರಾಗಬಹುದು. ಇಂತಹದೇ ಒಂದು ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ತನ್ನ ಉದ್ಯೋಗವನ್ನೇ ಜೀವನದ ಕೇಂದ್ರಬಿಂದು ಮಾಡಿಕೊಂಡಿದ್ದ ಮಹಿಳೆಯೊಬ್ಬರು, ದಿಢೀರ್ ಕೆಲಸ ಕಳೆದುಕೊಂಡ ಅನುಭವವನ್ನು ಇನ್‌ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಬೆಂಗಳೂರಿನ ನಿಧಿ ಎಂಬ ಯುವತಿಯ ವಿಡಿಯೋ ಇದೀಗ ವೈರಲ್ ಆಗಿದ್ದು, ವೃತ್ತಿಜೀವನ ಮತ್ತು ವೈಯಕ್ತಿಕ ಬದುಕಿನ ನಡುವಿನ ಸಮತೋಲನದ ಅಗತ್ಯವನ್ನು ಮತ್ತೆ ನೆನಪಿಸಿದೆ. “ನನ್ನ ಕೆಲಸವೇ ನನ್ನ ಪ್ರಪಂಚ ಎಂದುಕೊಂಡಿದ್ದೆ. […]