ಜೆಇಇ ಮೈನ್ (ಬಿ.ಟೆಕ್) ಅಂತಿಮ ಫಲಿತಾಂಶ

ಕಾರ್ಕಳ: ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ ನಡೆಸಿದ ಜೆಇಇ ಮೈನ್(ಬಿ.ಟೆಕ್)-೨೦೨೬ರ ಅಂತಿಮ ಹಂತದ ಫಲಿತಾಂಶದಲ್ಲಿ ಜ್ಞಾನಸುಧಾ ಪಿ.ಯು ಕಾಲೇಜಿನ ೧೦ ವಿದ್ಯಾರ್ಥಿಗಳು ೯೯ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಉತ್ತಮ ಸಾಧನೆ ಮಾಡಿರುತ್ತಾರೆ. ರಾಷ್ಟ್ರಮಟ್ಟದಲ್ಲಿ ೧೫ ಲಕ್ಷದ ೩೮ ಸಾವಿರದ ೪೬೮ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಜ್ಞಾನಸುಧಾದ ಕನಿಷ್ಕ್ ಅಮೀನ್ ೯೯.೯೦೫೫೧೯೯ ಪರ್ಸಂಟೈಲ್ ಪಡೆದು ಜನರಲ್ ಕೆಟಗೆರಿಯಲ್ಲಿ ೧೬೦೮ನೇ ರ‍್ಯಾಂಕ್ ಪಡೆದಿರುತ್ತಾರೆ. ಸಂಸ್ಥೆಯ ೩೦ ವಿದ್ಯಾರ್ಥಿಗಳು ೯೮ ಪರ್ಸಂಟೈಲ್‌ಗಿಂತ ಅಧಿಕ, ೫೯ ವಿದ್ಯಾರ್ಥಿಗಳು ೯೭ ಪರ್ಸಂಟೈಲ್‌ಗಿಂತ ಅಧಿಕ, ೯೩ […]
ಮದರ್ ತೆರೆಸಾ ಪಿಯು* ಕಾಲೇಜು, ಶಂಕರನಾರಾಯಣ: ವಾಣಿಜ್ಯ ವಿಭಾಗದ (EBACs/EBAS) ಅತ್ಯಮೋಘ ಸಾಧನೆ; ಪ್ರವೇಶಾತಿ ಪ್ರಾರಂಭ

ಕುಂದಾಪುರ: ಮದರ್ ತೆರೆಸಾ ಪಿಯು ಕಾಲೇಜು, ಶಂಕರನಾರಾಯಣವು ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು, ಅಂಕಗಳ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ಸಮಾನ ಆದ್ಯತೆ ನೀಡುತ್ತಾ ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರಾಗಿ ರೂಪಿಸುತ್ತಾ ಬರುತ್ತಿದೆ. ಹೊರಗಿನ ಹೋಲಿಕೆಗಳಿಗಿಂತ, ತನ್ನದೇ ಹಿಂದಿನ ಸಾಧನೆಗಳನ್ನು ಮೀರಿಸುವುದೇ ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ ಹಾಗೂ ಪ್ರವೇಶಾತಿ ಸಮಯದಲ್ಲಿ ಅಂಕಗಳ ಮಿತಿ ಇಲ್ಲದೆ ಎಲ್ಲಾ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತಿದ್ದು, ಕಡಿಮೆ ಅಂಕ ಗಳಿಸಿ ಬಂದವರೂ ಕೂಡ ಇಲ್ಲಿ ಉನ್ನತ ಸಾಧನೆ ಮಾಡುವಂತಹ ವಾತಾವರಣವನ್ನು ಕಲ್ಪಿಸಲಾಗುತ್ತದೆ. ಇಲ್ಲಿನ ವಾಣಿಜ್ಯ ವಿಭಾಗದಲ್ಲಿ EBACs […]
ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ ತರಗತಿ ಪ್ರವೇಶಾತಿ

ಉಡುಪಿ: ಮೈಸೂರು ವಿಶ್ವವಿದ್ಯಾಲಯ ಸಂಯೋಜಿತ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ ಪ್ರಸಕ್ತ ಸಾಲಿಗೆ ನಾಲ್ಕು ವರ್ಷಗಳ ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ (ಬಿವಿಎ) ಪದವಿ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ಕಲೆ (ಅಚ್ಚುಕಲೆ), ಅನ್ವಯಕಲೆ, ಕಲಾ ಇತಿಹಾಸ ಹಾಗೂ ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮದ ವಿಭಾಗಗಳಲ್ಲಿ ವಿಶೇಷ ಅಧ್ಯಯನದ ಸ್ನಾತಕ ಪದವಿಯಾಗಿದ್ದು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ […]
ಏ.23 ರಂದು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಉಡುಪಿ: ನಗರದ ಕುಂಜಿಬೆಟ್ಟು ಕ್ರೋಮಾ ಬಿಲ್ಡಿಂಗ್‌ನ ಪ್ರಗತಿ ಬಿಸಿನೆಸ್ ಪಾರ್ಕ್ನ ಎರಡನೇ ಮಹಡಿಯ ಆಕ್ಸಿಸ್ ಮ್ಯಾಕ್ಸ್ಲೈಫ್ ಇಲ್ಲಿ ಏಪ್ರಿಲ್ 23 ರಂದು ಬೆಳಗ್ಗೆ 10.30 ಕ್ಕೆ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ಆಯೋಜಿಸಲಾಗಿದೆ. ಪಿ.ಯು.ಸಿ, ಐ.ಟಿ.ಐ ಮತ್ತು ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ: […]
ಮೂಡ್ಲಕಟ್ಟೆ: ಎ.23, 24 ರಂದು ಎಂ.ಐ.ಟಿ ಕಾಲೇಜಿನಲ್ಲಿ ‘ಸಾವಿಷ್ಕರ್-2026’: ಮೈಸೂರು ಎಕ್ಸ್‌ಪ್ರೆಸ್ ಮತ್ತು ಬ್ಯಾಂಡ್ ಸ್ಟ್ರಿಂಗ್ಸ್ ತಂಡದಿಂದ ಸಂಗೀತ ರಸದೌತಣ

ಕುಂದಾಪುರ: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏಪ್ರಿಲ್ 23 ಮತ್ತು 24 ರಂದು ರಾಷ್ಟ್ರೀಯ ಮಟ್ಟದ ಅಂತರ ಕಾಲೇಜು ತಾಂತ್ರಿಕ ಹಾಗೂ ಸಾಂಸ್ಕೃತಿಕ ಹಾಗೂ ಕ್ರೀಡಾ ಹಬ್ಬ ‘ಸಾವಿಷ್ಕರ್-2026’ ಅದ್ಧೂರಿಯಾಗಿ ಜರುಗಲಿದೆ. ಉದ್ಘಾಟಕರಾಗಿ ಪ್ರಸಿದ್ದ ಯಕ್ಷಗಾನ ಕಲಾವಿದರಾದ ಡಾ.ಶಿವಾನಂದ ಹೆಗ್ಡೆ ಕೆರೆಮನೆ ಆಗಮಿಸಲಿದ್ದಾರೆ. ಈ ಸಾಂಸ್ಕೃತಿಕ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲು ದೇಶದ ಖ್ಯಾತ ಸಂಗೀತ ತಂಡಗಳಿಂದ ವಿಶೇಷ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಏಪ್ರಿಲ್ 23ರಂದು ಸಂಜೆ ಪ್ರಖ್ಯಾತ ಸಂಗೀತ ತಂಡವಾದ ‘ಮೈಸೂರು ಎಕ್ಸ್‌ಪ್ರೆಸ್’ ವತಿಯಿಂದ ಪವರ್‌ಫುಲ್ ಸಂಗೀತ […]