ಆರ್ ಎಸ್ ಬಿ ವಧು-ವರರ ಸಮಾವೇಶ-2026 ಸಂಪನ್ನ

ಉಡುಪಿ: ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ, (ರಿ.) ಮಣಿಪಾಲ, ರಾಜಾಪುರ ಸಾರಸ್ವತ ಬ್ರಾಹ್ಮಣ ಮಹಿಳಾ ವೇದಿಕೆ, (ರಿ.) ಮಣಿಪಾಲ ಮತ್ತು ರಾಜಾಪುರ ಸಾರಸ್ವತ ಸಮಾಜ (ರಿ.) ಬೆಂಗಳೂರು ಇದರ ಅಂಗಸಂಸ್ಥೆಯಾಗಿರುವ ಆರ್ ಎಸ್ ಬಿ ಅನುಬಂಧ ವಿವಾಹ ವೇದಿಕೆ , ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆರ್ ಎಸ್ ಬಿ ಸಮಾಜದ ವಿವಾಹಾಪೇಕ್ಷಿತ ವಧು- ವರರ ಸಮಾವೇಶವು ಎ.19 ರಂದು ಮಣಿಪಾಲದ ಆರ್ ಎಸ್ ಬಿ ಭವನದಲ್ಲಿ ಜರಗಿತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಣಿಪಾಲ ಆರ್ ಎಸ್ ಬಿ ಸಂಘದ ಅಧ್ಯಕ್ಷರಾದ ಉಪೇಂದ್ರ ನಾಯಕ್ ರವರು ವಹಿಸಿದ್ದರು.

ಶ್ರೀಮತಿ ಜ್ಯೋತಿ ಕಾಮತ್ ಮತ್ತು ಗೀತಾ ನಾಯಕ್ ಇವರು ಪ್ರಾರ್ಥಿಸಿದರು.

ಮಣಿಪಾಲ ಮಹಿಳಾ ವೇದಿಕೆಯ ಅಧ್ಯಕ್ಷೆ ರೂಪಾ ನಾಯಕ್ ಸ್ವಾಗತಿಸಿದರು. ಅನುಬಂಧ ವಿವಾಹ ವೇದಿಕೆಯ ಸಂಯೋಜಕಿ ಮಹಾಲಕ್ಷ್ಮಿ ಧೋಂಡ್ಯೆ ಪ್ರಸ್ತಾವನೆಗೈದರು. ರಮೇಶ್ ನಾಯಕ್ ರವರು ಕಾರ್ಯಕ್ರಮದ ಮುನ್ನೋಟ ನೀಡಿದರು.

ರಾಜಾಪುರ ಸಾರಸ್ವತ ಸಮಾಜ (ರಿ.) ಬೆಂಗಳೂರು ಇದರ ಅಧ್ಯಕ್ಷರಾದ ಡಾ. ಕೇಶವ ಪಾಟ್ಕರ್ ಮತ್ತು ಪರ್ಕಳ ಶ್ರೀ ದುರ್ಗಾ ಪರಮೇಶ್ವರಿ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ನರಸಿಂಹ ನಾಯಕ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮದ ಬಗ್ಗೆ ಸಮಯೋಚಿತವಾಗಿ ಮಾತನಾಡಿದರು. ಶ್ರೀಮತಿ ಸುಮಿತ್ರಾ ನಾಯಕ್ ಕಾರ್ಯಕ್ರಮ ನಿರೂಪಿಸಿ, ಜ್ಯೋತಿ ನಾಯಕ್ ವಂದಿಸಿದರು.