ಸಂಬಳ ಬರುತ್ತಿದ್ದಂತೆ ಹಣ ಖರ್ಚಾಗುತ್ತಿದೆಯೇ? ಚಿಂತಿಸಬೇಡಿ ಈ ಉಪಾಯ ಮಾಡಿ

ಸಂಬಳ ಎಷ್ಟೇ ಇರಲಿ ಅದರಲ್ಲಿ ಸಣ್ಣ ಮೊತ್ತವನ್ನಾದರೂ ಉಳಿತಾಯ ಮಾಡುವುದು ಇಂದಿನ ಅಗತ್ಯತೆಯಾಗಿದೆ. ಇಂದಿನ ಯುಗದಲ್ಲಿ, ನಮ್ಮ ಜೀವನ ಪದ್ಧತಿಗೆ ಯಾರಿಗೆ ಯಾವ ರೀತಿಯ ಆರೋಗ್ಯದ ತುರ್ತು ಬಂದೊದಗುತ್ತದೆ ಎಂದು ಊಹಿಸಲೂ ಅಸಾಧ್ಯ. ಹಾಗಾಗಿ ಉಳಿತಾಯ ಬಹಳಾ ಮುಖ್ಯ. ಸಂಬಳ ಬಂದ ನಂತರ ಹಣ ಉಳಿಸುವುದು ಅಂದರೆ “ಮಿಕ್ಕಿದ್ದನ್ನು ಉಳಿಸುವುದು” ಅಲ್ಲ, “ಮೊದಲು ಉಳಿಸಿ ನಂತರ ಖರ್ಚು ಮಾಡುವುದು” ಅನ್ನೋ ಅಭ್ಯಾಸ ಬೆಳೆಸಿಕೊಳ್ಳುವುದು ಮುಖ್ಯ. ಕೆಲವು ಸರಳ ಆದರೆ ಪರಿಣಾಮಕಾರಿ ಟಿಪ್ಸ್ ಇಲ್ಲಿವೆ 50-30-20 ನಿಯಮ ಪಾಲಿಸಿ […]
ಅದೈತ ಸಿದ್ಧಾಂತದ ಸಾರವನ್ನು ಜಗತ್ತಿಗೆ ಸಾರಿದ ಶಂಕರಾಚಾರ್ಯರ ಚಿಂತನೆಗಳು ಮನುಕುಲದ ಒಳಿತಿಗೆ ದಾರಿದೀಪ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಭಾರತೀಯ ಸಾಂಸ್ಕೃತಿಕ ಇತಿಹಾಸದಲ್ಲಿ ಶ್ರೇಷ್ಠ ಮಹಾಪುರುಷರೆಂದು ಗುರುತಿಸಲ್ಪಟ್ಟವರಲ್ಲಿ ಶಂಕರಾಚಾರ್ಯರು ಪ್ರಮುಖರಾಗಿದ್ದು, ಸನಾತನ ಧರ್ಮ ನಶಿಸಿ ಹೋಗುತ್ತಿರುವಂತಹ ಸಂದರ್ಭದಲ್ಲಿ ದೇಶದೆಲ್ಲೆಡೆ ಕಾಲ್ನಡಿಗೆಯಲ್ಲಿ ಸಂಚರಿಸಿ, ಅದೈತ ಸಿದ್ಧಾಂತದ ಸಾರವನ್ನು ಜಗತ್ತಿಗೆ ಸಾರಿರುವ ಶಂಕರಾಚಾರ್ಯರ ಆದರ್ಶ, ಚಿಂತನೆ ಹಾಗೂ ವಿವೇಚನೆಗಳು ಮನುಕುಲದ ಒಳಿತಿಗೆ ದಾರಿದೀಪವಾಗಿದೆ ಎಂದು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿಯ ಕೋರ್ಟ್ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು […]
ಉಡುಪಿ: ಪಾಳುಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ

ಉಡುಪಿ: ಆದಿಉಡುಪಿ ಎಪಿಎಂಸಿ ಮಾರುಕಟ್ಟೆಯ ಹಿಂಭಾಗದ ಖಾಸಗಿ ಸ್ಥಳದಲ್ಲಿದ್ದರುವ ಪಾಳುಬಾವಿಯಲ್ಲಿ ಕೊಳೆತಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಮೃತದೇಹ ಗುರುತಿಸಲಾಗದಷ್ಟು ಕೊಳೆತು ಹೋಗಿದ್ದು, ವ್ಯಕ್ತಿ ಹದಿನೈದು ದಿನಗಳ ಹಿಂದೆಯೇ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳ ಹಾಗೂ ಸಮಾಜಸೇವಕ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಬಾವಿಯಿಂದ ಮೃತದೇಹವನ್ನು ಮೇಲೆತ್ತಲಾಯಿತು. ಬಳಿಕ ಮಣಿಪಾಲ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರದಲ್ಲಿ ಮರಣೋತ್ತರ ಪ್ರಕ್ರಿಯೆ ನಡೆಸಲಾಯಿತು. ನಗರ ಪೋಲಿಸ್ ಠಾಣೆಯ ಎಸ್ಐ ಹರೀಶ್ ಹಾಗೂ ಹೆಡ್ ಕಾನ್ ಸ್ಟೇಬಲ್ ಜಾಸ್ವ […]
ದೋಸೆ ಹಿಟ್ಟು ಮಾಡಿ ಫ್ರಿಡ್ಜ್‌ನಲ್ಲಿ ಕೆಲವು ದಿನ ಇಟ್ಟು ತಿನ್ನುವ ಅಭ್ಯಾಸ ನಿಮಗಿದ್ಯಾ? ಅದೆಷ್ಟು ಡೇಂಜರ್ ನೋಡಿ

ಬೆಳಗಿನ ಉಪಹಾರದಲ್ಲಿ ದೋಸೆ ಬಹುತೇಕರ ಫೇವರಿಟ್ ಹಾಗೂ ಸುಲಭದ ತಿಂಡಿ. ಆದರೆ ಕೆಲಸದ ಒತ್ತಡದಿಂದ ಹಲವರು ವಾರಕ್ಕೆ ಸಾಕಾಗುವಷ್ಟು ಹಿಟ್ಟನ್ನು ಒಂದೇ ಬಾರಿ ತಯಾರಿಸಿ ಫ್ರಿಡ್ಜ್‌ನಲ್ಲಿ ಇಟ್ಟು ಬಳಸುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಇದೇ ಅಭ್ಯಾಸ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಎಷ್ಟು ದಿನ ಸುರಕ್ಷಿತ? ಸಾಮಾನ್ಯವಾಗಿ ದೋಸೆ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ 3 ರಿಂದ 4 ದಿನಗಳವರೆಗೆ ಬಳಸಬಹುದು. ಆದರೆ ಅದಕ್ಕಿಂತ ಹೆಚ್ಚು ದಿನ ಇಟ್ಟರೆ ಹಿಟ್ಟಿನಲ್ಲಿ ಬ್ಯಾಕ್ಟೀರಿಯಾಗಳ ಪ್ರಮಾಣ ಹೆಚ್ಚಾಗಿ ಆಹಾರದ ಗುಣಮಟ್ಟ ಹಾಳಾಗುತ್ತದೆ. […]
ಹಳೆಯ ಕಾರನ್ನು EV ಆಗಿ ಪರಿವರ್ತಿಸಿದ ಬಾರ್ಕೂರು ನ್ಯಾಷನಲ್ ಐಟಿಐ ವಿದ್ಯಾರ್ಥಿಗಳು, ಅಪರೂಪದ ಸಾಧನೆಗೆ ಮೆಚ್ಚುಗೆ

ಉಡುಪಿ ಜಿಲ್ಲೆಯ ಬಾರ್ಕೂರಿನ ನೇಷನಲ್ ಐಟಿಐ ಸಂಸ್ಥೆ ತನ್ನ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ತಾಂತ್ರಿಕ ಕೌಶಲ್ಯಗಳ ಮೂಲಕ ಮತ್ತೊಮ್ಮೆ ಗಮನ ಸೆಳೆದಿದೆ. ದುಬಾರಿ ವಿದ್ಯುತ್ ವಾಹನಗಳ (EV) ಯುಗದಲ್ಲಿ, ಹಳೆಯ ಪೆಟ್ರೋಲ್ ವಾಹನಗಳನ್ನು ಅತೀ ಕಡಿಮೆ ವೆಚ್ಚದಲ್ಲಿ ವಿದ್ಯುತ್ ವಾಹನಗಳಾಗಿ ಪರಿವರ್ತಿಸಬಹುದು ಎಂಬುದನ್ನು ಈ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳು ಸಾಬೀತುಪಡಿಸಿದ್ದಾರೆ. ಈ ಹಿಂದೆ 2021–2023ರ ಸಾಲಿನ ಎಲೆಕ್ಟ್ರಿಕಲ್ ವಿಭಾಗದ ವಿದ್ಯಾರ್ಥಿಗಳು ಹಿರಿಯ ಉಪನ್ಯಾಸಕ ಭಾಸ್ಕರ ಉಪಾದ್ಯ ಅವರ ಮಾರ್ಗದರ್ಶನದಲ್ಲಿ ಹಳೆಯ ನ್ಯಾನೋ ಕಾರನ್ನು ವಿದ್ಯುತ್ ವಾಹನವಾಗಿ ಪರಿವರ್ತಿಸಿ, […]