ಹೆಬ್ರಿಯಲ್ಲಿ ಎ. 6ರಿಂದ ವೈವಿಧ್ಯಮಯ ಬೇಸಗೆ ಶಿಬಿರ: ಸಾಧಕ ಬಾಲಕ ಅದ್ವೈತ್ ನಿಂದ ಉದ್ಘಾಟನೆ

ಹೆಬ್ರಿ: ಹೆಬ್ರಿ ಎಸ್.ಆರ್.ಸ್ಕೂಲ್ ಬಳಿ ಇರುವ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ವಿನೂತನ ತರಬೇತಿ ಹಾಗೂ ವೈವಿಧ್ಯಮಯ ಮನರಂಜನೆ ಮೂಲಕ ಉಡುಪಿ ಜಿಲ್ಲೆ ಮಾತ್ರವಲ್ಲದೆ ದೂರದ ವಿದ್ಯಾರ್ಥಿಗಳ ಮನಗೆದ್ದಿರುವ 11ನೇ ವರ್ಷದ ಚಾಣಕ್ಯ ನಲಿಕಲಿ ವೈವಿಧ್ಯಮಯ ಬೇಸಗೆ ಶಿಬಿರ ಏ.6ರಿಂದ 19ರ ವರೆಗೆ ಬೆಳಿಗ್ಗೆ 9.30 ರಿಂದ ಸಂಜೆ 4:30ರ ತನಕ ಎಸ್ ಆರ್ ಬಳಿ ಇರುವ ಚಾಣಕ್ಯ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ.ಭಗವದ್ಗೀತೆಯನ್ನು ನಾಲ್ಕು ಭಾಷೆಗಳಲ್ಲಿ 18 ಬಾರಿ ಬರೆದು ದಾಖಲೆ ಮಾಡಿದ ಪ್ರಸ್ತುತ […]
ಕೊಡಗಿನ ತಡಿಯಾಂಡಮೋಳ್ ಬೆಟ್ಟದಲ್ಲಿ ನಾಪತ್ತೆಯಾಗಿದ್ದ ಕೇರಳ ಯುವತಿ ಶರಣ್ಯ ಪತ್ತೆ – 3 ದಿನಗಳನ್ನು ಹೀಗೆ ಕಳೆದಿದ್ದರು ಶರಣ್ಯಾ

ತಡಿಯಾಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ 36 ವರ್ಷದ ಶರಣ್ಯ ಕೊನೆಗೂ ಪತ್ತೆಯಾಗಿದ್ದಾರೆ. ಇವರು ಕಾಡಿನಲ್ಲಿ ಮೂರು ದಿನಗಳು ಒಬ್ಬಂಟಿಯಾಗಿ ಕಳೆದಿದ್ದರು, ವೈದ್ಯರು ಅವರ ಆರೋಗ್ಯ ಪರಿಶೀಲನೆ ನಡೆಸಿದ್ದಾರೆ. ಶರಣ್ಯ, ಐಟಿ ಉದ್ಯೋಗಿಯಾಗಿದ್ದು, ಏಪ್ರಿಲ್ 2ರಂದು ಕೊಡಗು ಜಿಲ್ಲೆಯ ಕಕ್ಕಬ್ಬೆ ಗ್ರಾಮದಲ್ಲಿ ಖಾಸಗಿ ಹೋಂಸ್ಟೇಯಲ್ಲಿ ತಂಗಿ, ತಡಿಯಾಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ಹೊರಟಿದ್ದರು. ಮಧ್ಯಾಹ್ನ ಎರಡು ಗಂಟೆಗೆ “ದಾರಿ ತಪ್ಪಿದ್ದೇನೆ” ಎಂದು ಕರೆ ಮಾಡಿ ಸಂಪರ್ಕ ಕಟ್ ಆಗಿತ್ತು. ಅರಣ್ಯ ಇಲಾಖೆಯಿಂದ ಶೋಧಕಾರ್ಯ ಶರಣ್ಯ ಪತ್ತೆಗೆ ಅರಣ್ಯ […]
ಮನೆಯಲ್ಲೇ ಕುಳಿತು ಮೊಬೈಲ್ ನಲ್ಲೇ ಜನಗಣತಿಯಲ್ಲಿ ಭಾಗವಹಿಸಿ…. ಕೇವಲ 7-8 ನಿಮಿಷಗಳಲ್ಲಿ ಜನಗಣತಿ ಪೂರ್ಣಗೊಳಿಸಬಹುದು! ಲಿಂಕ್ ಇಲ್ಲಿದೆ

ಭಾರತ ಸರ್ಕಾರವು ಅಧಿಕೃತವಾಗಿ ಜನಗಣತಿ 2027 ಡಿಜಿಟಲ್ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಬಾರಿ ನಾಗರಿಕರು ಯಾವುದೇ ದಾಖಲೆಗಳ ಅಗತ್ಯವಿಲ್ಲದೆ, ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ತಮ್ಮ ಮಾಹಿತಿಯನ್ನು ನೇರವಾಗಿ ತುಂಬಬಹುದು. ಜನರಿಗೆ ನೀಡಲಾದ ಪ್ರಮುಖ ಅವಕಾಶವೆಂದರೆ ಸೆಲ್ಫ್ ಎನ್ಯುಮರೇಷನ್. ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡುವ ಮೊದಲು, ಅಂದರೆ ಏ.1 ರಿಂದ 15 ರವರೆಗೆ 15 ದಿನಗಳ ಕಾಲ ಸಮಯಾವಕಾಶ ನೀಡಲಾಗಿದೆ. ಇದರಲ್ಲಿ ಪ್ರತಿಯೊಬ್ಬ ನಾಗರಿಕನು ತನ್ನ ಮಾಹಿತಿಯನ್ನು ಡಿಜಿಟಲ್ ಪೋರ್ಟಲ್‌ನಲ್ಲಿ ಫಿಲ್ ಮಾಡಬಹುದು. ನಂತರ, ಏಪ್ರಿಲ್ 16 […]
“ದಾರಿ ತಪ್ಪಿದ್ದೇನೆ” ಎಂದು ಹೇಳಿ ಫೋನ್ ಕಟ್ –ತಡಿಯಂಡಮೋಳ್ ಚಾರಣಕ್ಕೆ ಹೋದ ಕೇರಳ ಯುವತಿ ಪತ್ತೆಗೆ ಪೊಲೀಸ್-ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದಲ್ಲಿ ತಡಿಯಂಡಮೋಳ್ ಟ್ರೆಕ್ಕಿಂಗ್‌ಗೆ ತೆರಳಿದ್ದ ಕೇರಳ ಮೂಲದ ಯುವತಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ಎರ್ನಾಕುಲಂನಲ್ಲಿ ಐಟಿ ಉದ್ಯೋಗಿಯಾಗಿರುವ, ಕೋಯಿಕ್ಕೋಡ್ ನಿವಾಸಿ 35 ವರ್ಷದ ಶರಣ್ಯಾ ಬೆಳಗ್ಗೆ ಸುಮಾರು 8.30ರ ವೇಳೆಗೆ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ಗೆ ಬಂದಿದ್ದರು. ಒಬ್ಬೊಬ್ಬರನ್ನೇ ಟ್ರೆಕ್ಕಿಂಗ್‌ಗೆ ಬಿಡದ ನಿಯಮದ ಹಿನ್ನೆಲೆಯಲ್ಲಿ, ಬೇರೊಂದು ಗುಂಪಿನೊಂದಿಗೆ ಕಳುಹಿಸಲಾಗಿತ್ತು. “ದಾರಿ ತಪ್ಪಿದ್ದೇನೆ” ಎಂದು ಫೋನ್ ಕಟ್ ಸಾಮಾನ್ಯವಾಗಿ ಟ್ರೆಕ್ಕಿಂಗ್‌ಗೆ ತೆರಳಿದವರು ಮಧ್ಯಾಹ್ನ 1.30ರೊಳಗೆ ಚೆಕ್‌ಪೋಸ್ಟ್‌ಗೆ ಮರಳಬೇಕಿತ್ತು. ಆದರೆ […]
ಉಡುಪಿ: ಏಪ್ರಿಲ್ 11 ರಂದು ಬೃಹತ್ ರಕ್ತದಾನ ಶಿಬಿರ

ಉಡುಪಿ: ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಕುಂಜಿಬೆಟ್ಟು ಇಲ್ಲಿನ National Service Scheme ಘಟಕದ ವತಿಯಿಂದ ರಾಷ್ಟ್ರಿಯ ಸೇವಾ ಯೋಜನೆ ಹಾಗೂ ಫ್ರೆಂಡ್ಸ್ ಗ್ರೂಪ್ ,ಮತ್ತು ಮಣಿಪಾಲ ಆಸ್ಪತ್ರೆ (kmc) ಸಹಯೋಗದಲ್ಲಿ “ಬೃಹತ್ ರಕ್ತದಾನ ಶಿಬಿರ”ವನ್ನು ಏಪ್ರಿಲ್ 11 ರಂದು ಶನಿವಾರ ಬೆಳಿಗ್ಗೆ 9 ಗಂಟೆಗೆ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಕಾಲೇಜಿನ ಆಡಳಿತಾಧಿಕಾರಿ ವಸಂತ್ ರಾವ್ ಕರಂಬಳ್ಳಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಡಾ. ಗೋಪಾಲ ಮೋಹನ್ (ರಕ್ತನಿಧಿ ವಿಭಾಗ, ಕೆ.ಎಂ.ಸಿ. ಮಣಿಪಾಲ) ಭಾಗವಹಿಸಲಿದ್ದಾರೆ. ಸಂದೀಪ್ (ಅಧ್ಯಕ್ಷರು, […]