ಮನೆಯಲ್ಲೇ ಕುಳಿತು ಮೊಬೈಲ್ ನಲ್ಲೇ ಜನಗಣತಿಯಲ್ಲಿ ಭಾಗವಹಿಸಿ…. ಕೇವಲ 7-8 ನಿಮಿಷಗಳಲ್ಲಿ ಜನಗಣತಿ ಪೂರ್ಣಗೊಳಿಸಬಹುದು! ಲಿಂಕ್ ಇಲ್ಲಿದೆ

ಭಾರತ ಸರ್ಕಾರವು ಅಧಿಕೃತವಾಗಿ ಜನಗಣತಿ 2027 ಡಿಜಿಟಲ್ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಬಾರಿ ನಾಗರಿಕರು ಯಾವುದೇ ದಾಖಲೆಗಳ ಅಗತ್ಯವಿಲ್ಲದೆ, ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ತಮ್ಮ ಮಾಹಿತಿಯನ್ನು ನೇರವಾಗಿ ತುಂಬಬಹುದು. ಜನರಿಗೆ ನೀಡಲಾದ ಪ್ರಮುಖ ಅವಕಾಶವೆಂದರೆ ಸೆಲ್ಫ್ ಎನ್ಯುಮರೇಷನ್. ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡುವ ಮೊದಲು, ಅಂದರೆ ಏ.1 ರಿಂದ 15 ರವರೆಗೆ 15 ದಿನಗಳ ಕಾಲ ಸಮಯಾವಕಾಶ ನೀಡಲಾಗಿದೆ. ಇದರಲ್ಲಿ ಪ್ರತಿಯೊಬ್ಬ ನಾಗರಿಕನು ತನ್ನ ಮಾಹಿತಿಯನ್ನು ಡಿಜಿಟಲ್ ಪೋರ್ಟಲ್‌ನಲ್ಲಿ ಫಿಲ್ ಮಾಡಬಹುದು. ನಂತರ, ಏಪ್ರಿಲ್ 16 ರಿಂದ ಮೇ 15 ರವರೆಗೆ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡುತ್ತಾರೆ.

ಹಂತ 1: ವೆಬ್‌ಸೈಟ್ ಗೆ ಭೇಟಿ ನೀಡಿ – se.census.gov.in, ಮತ್ತು ನಿಮ್ಮ ಭಾಷೆ ಆಯ್ಕೆಮಾಡಿ.

ಹಂತ 2: ನಿಮ್ಮ ಮೊಬೈಲ್ ನಂಬರ್ ಬಳಸಿ ಲಾಗಿನ್ ಆಗಿ. ನಂತರ ನಿಮ್ಮ ರಾಜ್ಯ ಮತ್ತು ಇತರ ವಿವರಗಳನ್ನು ಸೇರಿಸಿ ರಿಜಿಸ್ಟರ್ ಆಗಿ.

ನೆನಪಿರಲಿ: ಒಂದು ಮನೆಗೆ ಒಂದು ಮೊಬೈಲ್ ನಂಬರ್ ಮಾತ್ರ ಬಳಸಬಹುದು.

ಹಂತ 3: 33 ಪ್ರಶ್ನೆಗಳಿಗೆ ಮಾಹಿತಿಯನ್ನು ಭರ್ತಿ ಮಾಡಿ.

ಹಂತ 4: ನಿಮ್ಮ ಮನೆಯ ಲೊಕೇಶನ್ ಅನ್ನು ಗುರುತಿಸಿ.

ಹಂತ 5: ಫಾರ್ಮ್ ಸಬ್ಮಿಟ್ ಮಾಡಿ ಮತ್ತು ಯುನಿಕ್ SE ಐಡಿ ಪಡೆಯಿರಿ.

ಹಂತ 6: ಬಂದಿರುವ ಯುಎಸ್‌ಇ ಐಡಿಯನ್ನು ಸುರಕ್ಷಿತವಾಗಿ ಉಳಿಸಿ.

ಕೊನೆಗೆ: ಮನೆ-ಮನೆ ಗಣತಿ ಪ್ರಾರಂಭವಾದಾಗ ಈ ಯುನಿಕ್ ಐಡಿ ತೋರಿಸಿ, ನಿಮ್ಮ ಮಾಹಿತಿಯನ್ನು ಭದ್ರವಾಗಿ ದಾಖಲು ಮಾಡಿಸಿಕೊಳ್ಳಿ.

ಭಾಗ – 1 : ವಸತಿ ವಿವರಗಳು

  • ಕಟ್ಟಡ ಸಂಖ್ಯೆ
  • ಜನಗಣತಿ ಮನೆ ಸಂಖ್ಯೆ
  • ನೆಲಕ್ಕೆ ಬಳಸಿರುವ ವಸ್ತು
  • ಗೋಡೆಗೆ ಬಳಸಿರುವ ವಸ್ತು
  • ಛಾವಣಿಗೆ ಬಳಸಿರುವ ವಸ್ತು
  • ಮನೆಯ ನಿರ್ದಿಷ್ಟ ಬಳಕೆ ಖಚಿತ
  • ಜನಗಣತಿ ಮನೆಯ ಸ್ಥಿತಿ
  • ಮನೆಯ ಸಂಖ್ಯೆ

ಭಾಗ – 2 : ಮನೆಯ ಸಂಯೋಜನೆ

  • ಮನೆಯಲ್ಲಿ ವಾಸಿಸುವ ಒಟ್ಟು ವ್ಯಕ್ತಿಗಳ ಸಂಖ್ಯೆ
  • ಮನೆಯ ಮುಖ್ಯಸ್ಥರ ಹೆಸರು
  • ಮನೆಯ ಮುಖ್ಯಸ್ಥರ ಲಿಂಗ
  • ಎಸ್‌ಸಿ / ಎಸ್‌ಟಿ / ಇತರರಿಗೆ ಸೇರಿದೆಯೇ
  • ಮನೆಯ ಮಾಲೀಕತ್ವದ ಸ್ಥಿತಿ
  • ಪ್ರತ್ಯೇಕವಾಗಿ ವಾಸದ ಕೊಠಡಿಗಳ ಸಂಖ್ಯೆ
  • ಮನೆಯಲ್ಲಿನ ವಿವಾಹಿತ ದಂಪತಿಗಳ ಸಂಖ್ಯೆ


ಭಾಗ – 3 : ಸೌಕರ್ಯಗಳು ಮತ್ತು ನೈರ್ಮಲ್ಯ

  • ಕುಡಿಯುವ ನೀರಿನ ಮುಖ್ಯ ಮೂಲ
  • ಕುಡಿಯುವ ನೀರಿನ ಮೂಲ ಲಭ್ಯತೆ
  • ಬೆಳಕಿನ ಮುಖ್ಯ ಮೂಲ
  • ಶೌಚಾಲಯಕ್ಕೆ ಪ್ರವೇಶ
  • ಶೌಚಾಲಯದ ಪ್ರಕಾರ
  • ತ್ಯಾಜ್ಯ ನೀರು ಔಟ್ಲೆಟ್
  • ಸ್ನಾನದ ಸೌಲಭ್ಯದ ಲಭ್ಯತೆ
  • ಅಡುಗೆಮನೆ, LPG/PNG ಸಂಪರ್ಕ
  • ಅಡುಗೆಗೆ ಬಳಸುವ ಮುಖ್ಯ ಇಂಧನ

ಭಾಗ – 4 : ಸ್ವತ್ತುಗಳು & ಸಂಪರ್ಕ

  • ರೇಡಿಯೋ/ಟ್ರಾನ್ಸಿಸ್ಟರ್
  • ದೂರದರ್ಶನ
  • ಇಂಟರ್ನೆಟ್ ಪ್ರವೇಶ
  • ಲ್ಯಾಪ್‌ಟಾಪ್/ಕಂಪ್ಯೂಟರ್
  • ದೂರವಾಣಿ/ಮೊಬೈಲ್ ಫೋನ್/ಸ್ಮಾರ್ಟ್‌ಫೋನ್
  • ಬೈಸಿಕಲ್/ಸ್ಕೂಟರ್/ಮೋಟಾರ್‌ಸೈಕಲ್/ಮೊಪೆಡ್
  • ಕಾರು/ಜೀಪ್/ವ್ಯಾನ್
  • ಮನೆಯಲ್ಲಿ ಸೇವಿಸುವ ಪ್ರಮುಖ ಧಾನ್ಯ
  • ಮೊಬೈಲ್ ಸಂಖ್ಯೆ (ಜನಗಣತಿ ಸಂವಹನಕ್ಕಾಗಿ ಮಾತ್ರ)