ಉಡುಪಿ: ಏಪ್ರಿಲ್ 11 ರಂದು ಬೃಹತ್ ರಕ್ತದಾನ ಶಿಬಿರ

ಉಡುಪಿ: ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಕುಂಜಿಬೆಟ್ಟು ಇಲ್ಲಿನ National Service Scheme ಘಟಕದ ವತಿಯಿಂದ ರಾಷ್ಟ್ರಿಯ ಸೇವಾ ಯೋಜನೆ ಹಾಗೂ ಫ್ರೆಂಡ್ಸ್ ಗ್ರೂಪ್ ,ಮತ್ತು ಮಣಿಪಾಲ ಆಸ್ಪತ್ರೆ (kmc) ಸಹಯೋಗದಲ್ಲಿ “ಬೃಹತ್ ರಕ್ತದಾನ ಶಿಬಿರ”ವನ್ನು ಏಪ್ರಿಲ್ 11 ರಂದು ಶನಿವಾರ ಬೆಳಿಗ್ಗೆ 9 ಗಂಟೆಗೆ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಕಾಲೇಜಿನ ಆಡಳಿತಾಧಿಕಾರಿ ವಸಂತ್ ರಾವ್ ಕರಂಬಳ್ಳಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಡಾ. ಗೋಪಾಲ ಮೋಹನ್ (ರಕ್ತನಿಧಿ ವಿಭಾಗ, ಕೆ.ಎಂ.ಸಿ. ಮಣಿಪಾಲ) ಭಾಗವಹಿಸಲಿದ್ದಾರೆ.

ಸಂದೀಪ್ (ಅಧ್ಯಕ್ಷರು, ಫ್ರೆಂಡ್ಸ್ ಗ್ರೂಪ್, ಉಡುಪಿ), ಡಾ. ಪದ್ಮಲತಾ (ನಿರ್ದೇಶಕರು, ಉದ್ಯೋಗ ಹಾಗೂ ಪ್ರವೇಶಾತಿ ವಿಭಾಗ, ಯು.ಪಿ.ಎಂ.ಸಿ.), ಹಾಗೂ ಆಶಾ ಕುಮಾರಿ (ನಿರ್ದೇಶಕರು, ಯು.ಪಿ.ಎಂ.ಸಿ.) ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಪ್ರಭಾ ಕಾಮತ್ ವಹಿಸಲಿದ್ದಾರೆ.