ಹೆಬ್ರಿಯಲ್ಲಿ ಎ. 6ರಿಂದ ವೈವಿಧ್ಯಮಯ ಬೇಸಗೆ ಶಿಬಿರ: ಸಾಧಕ ಬಾಲಕ ಅದ್ವೈತ್  ನಿಂದ ಉದ್ಘಾಟನೆ

ಹೆಬ್ರಿ: ಹೆಬ್ರಿ ಎಸ್.ಆರ್.ಸ್ಕೂಲ್ ಬಳಿ ಇರುವ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ವಿನೂತನ ತರಬೇತಿ ಹಾಗೂ ವೈವಿಧ್ಯಮಯ ಮನರಂಜನೆ  ಮೂಲಕ ಉಡುಪಿ ಜಿಲ್ಲೆ ಮಾತ್ರವಲ್ಲದೆ ದೂರದ ವಿದ್ಯಾರ್ಥಿಗಳ ಮನಗೆದ್ದಿರುವ 11ನೇ ವರ್ಷದ ಚಾಣಕ್ಯ ನಲಿಕಲಿ ವೈವಿಧ್ಯಮಯ ಬೇಸಗೆ ಶಿಬಿರ ಏ.6ರಿಂದ 19ರ ವರೆಗೆ ಬೆಳಿಗ್ಗೆ 9.30 ರಿಂದ ಸಂಜೆ 4:30ರ ತನಕ ಎಸ್ ಆರ್ ಬಳಿ ಇರುವ ಚಾಣಕ್ಯ ಸಂಸ್ಥೆಯ ಸಭಾಂಗಣದಲ್ಲಿ  ನಡೆಯಲಿದೆ.
ಭಗವದ್ಗೀತೆಯನ್ನು ನಾಲ್ಕು ಭಾಷೆಗಳಲ್ಲಿ  18 ಬಾರಿ   ಬರೆದು ದಾಖಲೆ ಮಾಡಿದ  ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಅದ್ವೈತ್  ಅವರಿಂದ  ಎ. 6ರಂದು ಬೆಳಿಗ್ಗೆ 9.30ಕ್ಕೆ ಬೇಸಿಗೆ ಶಿಬಿರದ ಉದ್ಘಾಟನೆ ನಡೆಯಲಿದ್ದು ಗಣ್ಯರು ಭಾಗವಹಿಸಲಿದ್ದಾರೆ.

*ಶಿಬಿರದಲ್ಲಿ ಏನೇನಿದೆ:*
ಚಿತ್ರಕಲೆ/  ಪೈಂಟಿಂಗ್/ರಂಗೋಲಿ,ರಂಗಭೂಮಿ ನಾಟಕ ಅಭಿನಯ, ವರ್ಲಿ /ಕ್ಲೇ ಆರ್ಟ್,ಮುಖವರ್ಣಿಕೆ, ಗಾಳಿಪಟ ತಯಾರಿ,ಕರಾಟೆ/ ಜಿಮ್ನಾಸ್ಟಿಕ್,ನಿರೂಪಣೆ ಕಲೆ, ಫಿಲ್ಮ್ ಡ್ಯಾನ್ಸ್ ತರಬೇತಿ,ಟಿವಿ ರಿಯಾಲಿಟಿ ಸ್ಪರ್ಧೆ, ಹಾರ್ಮೋನಿಯಂ /ಕೀ ಬೋರ್ಡ್ /ತಬಲಾ
/ಕೊಳಲು,ಯಕ್ಷಗಾನ ಹೆಜ್ಜೆ ತರಬೇತಿ,ಕಸದಿಂದ ಕಲಾಕೃತಿ ,ಪಿಕ್ ನಿಕ್,ಟ್ಯಾಟೋ, ಶಾಸ್ತ್ರೀಯ ಸಂಗೀತ /ಕರೋಕೆ, ಭರತನಾಟ್ಯ, ಯೋಗ / ಧ್ಯಾನ/ಪ್ರ‌ಾಣಾಯಾಮ, ಚೆಸ್, ಕ್ಯಾರಂ &  ಜನರಲ್  ನಾಲೆಡ್ಜ್, ವ್ಯಕ್ತಿತ್ವ ವಿಕಸನ ತರಬೇತಿ,ಅಕ್ಷರ ಚೆನ್ನಾಗಿ ಬರೆಯಲು/ ನೆನಪು ಶಕ್ತಿ ಹೆಚ್ಚಿಸಲು ವಿವಿಧ ತರಬೇತಿಗಳು, ದಿನನಿತ್ಯ ಮನೋರಂಜನಾ ಕ್ರೀಡೆಗಳು,ವೈವಿಧ್ಯಮಯ ಗ್ರಾಮೀಣ ಕಸೂತಿ ತರಬೇತಿ, ಅಲ್ಲದೆ  ಇನ್ನಿತರ  ಹತ್ತು ಹಲವಾರು ವೈವಿಧ್ಯಮಯ ತರಬೇತಿಗಳು ಹೆಸರಾಂತ ತರಬೇತಿದಾರರಿಂದ ನಡೆಯಲಿದೆ. ಅಲ್ಲದೆ ಶಿಬಿರಾರ್ಥಿಗಳಿಗೆ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ವೈಶಿಷ್ಟ್ಯತೆ:ನುರಿತ ತರಬೇತುದಾರರಿಂದ ವೈವಿಧ್ಯಮಯ ತರಬೇತಿ,ಶಿಬಿರದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ಹಾಗೂ ವಿವಿಧ ಸ್ಪರ್ಧೆ ನಡೆಸಿ ಬಹುಮಾನ ವಿತರಣೆ, ಸಮಾರೋಪದಲ್ಲಿ ಮಕ್ಕಳ ಪ್ರತಿಭಾ ಪ್ರದರ್ಶನ,ಅಮ್ಮ /ಅಜ್ಜಿಯಂದಿರೊಂದಿಗೆ ಒಂದು ದಿನ ವಿನೂತನ ಕಾಯ೯ಕ್ರಮ
,ಹೆಬ್ರಿ ಸಾಲುಮರ ತಿಮ್ಮಕ್ಕ ಟ್ರೀ ಪಾರ್ಕ್ ಹಾಗೂ ನಿಸರ್ಗ ಧಾಮದಲ್ಲಿ ವೈವಿಧ್ಯಮಯ ತರಬೇತಿಗಳು ಚಾಣಕ್ಯ ನಲಿ ಕಲಿಯ ವೈಶಿಷ್ಟತೆಯಾಗಿದೆ.
ವಿನೂತನ ತರಬೇತಿ ಹಾಗೂ ಬದುಕು ಶಿಕ್ಷಣ ನೀಡುವ ವೈವಿಧ್ಯಮಯ ತರಬೇತಿಯಲಿ 5 ವರ್ಷ ದಿಂದ 16 ವರ್ಷದ ಒಳಗಿನ ತಮ್ಮಮಕ್ಕಳನ್ನು ಸೇರಿಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕಲ್ಪಿಸಿ, ಹೆಚ್ಚಿನ ಮಾಹಿತಿಗಾಗಿ 9900408545, 89707 26196 ಸಂಪರ್ಕಿಸುವಂತೆ  ಪ್ರಕಟಣೆ ತಿಳಿಸಿದೆ.