ಬ್ರಹ್ಮಾವರ: ಮನೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ – ಆರೋಪಿಯ ಬಂಧನ; 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ವಶ

ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಬಾರ್ಕೂರು ನಿವಾಸಿ ಪ್ರವೀಣ್ ಕುಮಾರ್ ಕೆ ಬಂಧಿತ ಆರೋಪಿ. ಬಂಧಿತನಿಂದ ಸುಮಾರು 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 7,500 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಹೇರಾಡಿ ಗ್ರಾಮದ ನಿವಾಸಿ ಎಂ. ಮಂಜುನಾಥ ರಾವ್ ಹಾಗೂ ಅವರ ಪತ್ನಿ ಮನೆಗೆ ಬೀಗ ಹಾಕಿ ಬಾರಕೂರಿನಲ್ಲಿ ನಡೆಯುತ್ತಿದ್ದ ನಾಗಮಂಡಲ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ […]
ಮಣಿಪಾಲ: ಆಟೋ ಚಾಲಕ ಆತ್ಮಹತ್ಯೆಗೆ ಶರಣು

ಉಡುಪಿ: ಸರಳಬೆಟ್ಟುವಿನ ಉಮಾಮಹೇಶ್ವರಿ ದೇವಸ್ಥಾನದ ಪಕ್ಕದ ಮನೆಯೊಂದರಲ್ಲಿ ಆಟೋ ಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಂಜುನಾಥ ಅಡಿಗ(34) ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕ. ಮೃತ ಮಂಜುನಾಥ ಅಡಿಗ ಮಣಿಪಾಲ ಸರಳಬೆಟ್ಟು ಪರಿಸರದಲ್ಲಿ ರಿಕ್ಷಾ ಓಡಿಸುತ್ತಿದ್ದು ಸ್ವತಃ ಬಾಡಿಗೆಗೆ ಕಾರುಗಳನ್ನು ಹೊಂದಿದ್ದರು. ಪಡುಬಿದ್ರೆಯ ಕಂಪನಿಗೆ ಬಾಡಿಗೆಗೆ ಒಡಂಬಡಿಕೆ ಮಾಡಿಕೊಂಡಿದ್ದರು. ಮೃತರ ತಾಯಿ ಕೆಎಂಸಿ ಆಸ್ಪತ್ರೆಯ ಶುಶೂಷೆ ವಿಭಾಗದ ಪ್ರಿನ್ಸ್ ಪಾಲ್ ಆಗಿ ಸೇವೆ ಸಲ್ಲಿಸಿದ್ದು ನಿವೃತ್ತರಾಗಿದ್ದಾರೆ. ಸ್ಥಳೀಯವಾಗಿ ಕಾಂಗ್ರೆಸ್ ಪಕ್ಷದಲ್ಲಿಯೂ ಸಕ್ರಿಯವಾಗಿ ಕಳೆದ ಎರಡು ಮೂರು ಚುನಾವಣೆಯಲ್ಲಿ ಕಾರ್ಯಕರ್ತರಾಗಿ ದುಡಿದಿದ್ದಾರೆ ಎಂದು […]
“ಪಂಚಾಯತ್” ಅಭಿಮಾನಿಗಳಿಗೆ ಸಿಹಿಸುದ್ದಿ- ಸದ್ಯದಲ್ಲೇ ಹೊರಬರಲಿದೆ ಸೀಸನ್-5

ಅಮೆಜಾನ್ ಪ್ರೈಂ ನಲ್ಲಿ ಸ್ಟ್ರೀಮಿಂಗ್ ಆಗಿ ವಿಭಿನ್ನ ಕಥೆಗಳಿಂದ ಹಾಸ್ಯಭರಿತ ಸನ್ನಿವೇಶಗಳಿಂದ ಫುಲ್ ಫೇಮಸ್ ಆಗಿದೆ “ಪಂಚಾಯತ್ ವೆಬ್ ಸೀರೀಸ್. ಹಳ್ಳಿಯ ಪಂಚಾಯತಿ ಕಾರ್ಯಾಲಯಕ್ಕೆ ಮುಖ್ಯಸ್ಥನಾಗಿ ಬರುವ ಯುವಕನೊಬ್ಬನ ಕಥೆ ಉತ್ತರ ಭಾರತದ ಹಳ್ಳಿಯ ಸೊಗಡಿನೊಂದಿಗೆ ಸಾಗುತ್ತಾ ಹೋಗುತ್ತದೆ. ಇದರ 4 ಸೀಸನ್ ಗಳು ಈಗಾಗಲೇ ಹೊರಬಂದಿದ್ದು, ಮುಂದಿನ ಸೀಸನ್ ಗೆ ಕಾತುರರಾಗಿ ಕಾಯ್ತಾ ಇದ್ದಾರೆ ಅಭಿಮಾನಿಗಳು. ಇದೀಗ “ಪಂಚಾಯತ್” ತಂಡ ಸರಣಿಯ 6ನೇ ವಾರ್ಷಿಕೋತ್ಸವವನ್ನು ಆಚರಿಸಿ ಇನ್‌ಸ್ಟಾಗ್ರಾಂನಲ್ಲಿ, ಹೊಸ ಸೀಸನ್ ಶೂಟಿಂಗ್ ಪ್ರಾರಂಭದ ಘೋಷಣೆಯನ್ನು ಮಾಡಿದೆ […]
ಕಣ್ಣಿಗೆ ಸುಂದರ, ದೇಹಕ್ಕೆ ವಿಷ: ಬಣ್ಣ ಬಣ್ಣದ ಮಾವಿನ ಹಣ್ಣು ಕೊಳ್ಳುವಾಗ ಹೀಗೆ ಪರೀಕ್ಷಿಸಿ ಕೊಳ್ಳಬಹುದು

ದಟ್ಟ ಹಳದಿ, ಕೇಸರಿ, ಕೆಂಬಣ್ಣದ ಮಾವಿನ ಹಣ್ಣುಗಳನ್ನ ಸಾಲಾಗಿ ಚೆಂದವಾಗಿ ಜೋಡಿಸಿಟ್ಟಿದ್ದನ್ನ ನೋಡ್ತಾ ಇದ್ರೆ ಆಹಾ! ಯಾರ ಬಾಯಲ್ಲಿ ನೀರು ಬರಲ್ಲ ಹೇಳಿ. ಅದೂ ಈ ಬೇಸಿಗೆಯ ಬಿಸಿಲ ಧಗೆಯಲ್ಲಿ ಬೆಂದು ಮನೆಗೆ ಬರುವ ಹೊತ್ತಿಗೆ ಮಾವಿನ ಹಣ್ಣು ಜೊತೆಯಲ್ಲಿದ್ದರೆ ಹೊಟ್ಟೆ ತಂಪಾಗುತ್ತದೆಯೆಂದು ಮಾವಿನ ಹಣ್ಣನ್ನು ಖಂಡಿತಾ ಕೊಳ್ಳುವ ಮನಸ್ಸಾಗುತ್ತದೆ. ಆದರೆ, ಈಗ ಹೀಗೆ ಕಣ್ಣಿಗೆ ಕುಕ್ಕುವ ಮಾವಿನಹಣ್ಣನ್ನು ಕೊಳ್ಳುವಾಗ ಎಚ್ಚರ ವಹಿಸಲೇಬೇಕು. ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿವೆ ಮಾವಿನ ಹಣ್ಣುಗಳು ಕಣ್ಣಿಗೆ ಹೊಳೆಯುವಂತಹಾ ಚೆಂದದ ಬಣ್ಣ ಬಣ್ಣದ […]
ಬಾರ್ಕೂರಿನಲ್ಲಿ ಎ.5 ರಂದು ಸುಜ್ಞಾನ ವಿದ್ಯಾರ್ಥಿವೇತನ ಪರೀಕ್ಷೆ: ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ವಿದ್ಯಾರ್ಥಿವೇತನ ಪರೀಕ್ಷೆ; ಡಾ. ರಮೇಶ್ ಶೆಟ್ಟಿ

ಬಾರ್ಕೂರು: ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಬಾರ್ಕೂರು ಎಜುಕೇಶನಲ್ ಸೊಸೈಟಿ ಹಾಗೂ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಸಂಯುಕ್ತವಾಗಿ ಮಹತ್ವದ ಯೋಜನೆ ಆರಂಭಿಸಿದೆ. ಇದರ ಅಂಗವಾಗಿ ಸುಜ್ಞಾನ ನ್ಯಾಷನಲ್ ಪಿಯು ಕಾಲೇಜಿನಲ್ಲಿ ಏಪ್ರಿಲ್ 5ರಂದು ವಿದ್ಯಾರ್ಥಿವೇತನ ಪರೀಕ್ಷೆ ನಡೆಯಲಿದೆ. 1946ರಲ್ಲಿ ಸ್ಥಾಪಿತವಾದ ಬಾರ್ಕೂರು ಎಜುಕೇಶನಲ್ ಸೊಸೈಟಿ ಗ್ರಾಮೀಣ ಶಿಕ್ಷಣ ಕ್ಷೇತ್ರದಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದು, ಇದೀಗ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಜೊತೆ ಕೈಜೋಡಿಸಿ ಸಂಸ್ಥೆಯನ್ನು ಸುಜ್ಞಾನ ನ್ಯಾಷನಲ್ ಪಿಯು ಕಾಲೇಜಾಗಿ ಪರಿವರ್ತಿಸಲಾಗಿದೆ ಎಂದು ಶಾಂತಾರಾಮ ಶೆಟ್ಟಿ […]