“ಪಂಚಾಯತ್” ಅಭಿಮಾನಿಗಳಿಗೆ ಸಿಹಿಸುದ್ದಿ- ಸದ್ಯದಲ್ಲೇ ಹೊರಬರಲಿದೆ ಸೀಸನ್-5

ಅಮೆಜಾನ್ ಪ್ರೈಂ ನಲ್ಲಿ ಸ್ಟ್ರೀಮಿಂಗ್ ಆಗಿ ವಿಭಿನ್ನ ಕಥೆಗಳಿಂದ ಹಾಸ್ಯಭರಿತ ಸನ್ನಿವೇಶಗಳಿಂದ ಫುಲ್ ಫೇಮಸ್ ಆಗಿದೆ “ಪಂಚಾಯತ್ ವೆಬ್ ಸೀರೀಸ್. ಹಳ್ಳಿಯ ಪಂಚಾಯತಿ ಕಾರ್ಯಾಲಯಕ್ಕೆ ಮುಖ್ಯಸ್ಥನಾಗಿ ಬರುವ ಯುವಕನೊಬ್ಬನ ಕಥೆ ಉತ್ತರ ಭಾರತದ ಹಳ್ಳಿಯ ಸೊಗಡಿನೊಂದಿಗೆ ಸಾಗುತ್ತಾ ಹೋಗುತ್ತದೆ. ಇದರ  4 ಸೀಸನ್ ಗಳು ಈಗಾಗಲೇ ಹೊರಬಂದಿದ್ದು, ಮುಂದಿನ ಸೀಸನ್ ಗೆ ಕಾತುರರಾಗಿ ಕಾಯ್ತಾ ಇದ್ದಾರೆ ಅಭಿಮಾನಿಗಳು.

ಇದೀಗ “ಪಂಚಾಯತ್” ತಂಡ ಸರಣಿಯ 6ನೇ ವಾರ್ಷಿಕೋತ್ಸವವನ್ನು ಆಚರಿಸಿ ಇನ್‌ಸ್ಟಾಗ್ರಾಂನಲ್ಲಿ, ಹೊಸ ಸೀಸನ್‌ ಶೂಟಿಂಗ್ ಪ್ರಾರಂಭದ ಘೋಷಣೆಯನ್ನು ಮಾಡಿದೆ ಕುತೂಹಲ ಹೆಚ್ಚಿಸಿದೆ. ಪೋಸ್ಟ್‌ನಲ್ಲಿ ಶೋದ ಸ್ಟಿಲ್ ಫೋಟೋಗಳು ಮತ್ತು  ತೆರೆಯ ಹಿಂದಿನ ಸೀನ್ ಗಳನ್ನು ತಂಡ ಹಂಚಿಕೊಂಡಿದೆ ಹಾಗೂ ಪೋಸ್ಟ್ ನಲ್ಲಿ ಹೀಗೆ ಬರೆದುಕೊಂಡಿದೆ  ಚಿತ್ರತಂಡ. ““6 years of being in Phulera and never wanting to leave. #PanchayatOnPrime, New Season, Now Filming.”