ಕರ್ನಾಟಕದಲ್ಲಿ ಫ್ಲಾಪ್ ಆಯ್ತು ಈ ಯೋಜನೆ. ರಾಜ್ಯದ ಜನರಿಗೆ ಸಿಕ್ತು ಬಿಗ್ ರಿಲೀಫ್

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ನಿರ್ದೇಶನದಂತೆ ಕರ್ನಾಟಕದಲ್ಲಿ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (HSRP) ಕಡ್ಡಾಯಗೊಳಿಸಲಾಗಿತ್ತು. ಆದರೆ ರಾಜ್ಯದಲ್ಲಿ ಈ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ವಾಹನಗಳ ಭದ್ರತೆ ಮತ್ತು ವಂಚನೆ ತಡೆಗಟ್ಟಲು ಜಾರಿಗೆ ತಂದ ಈ ಯೋಜನೆಗೆ ಜನರಿಂದ ಸ್ಪಂದನೆ ಕಡಿಮೆ ಕಂಡುಬಂದಿದೆ. ಹಲವಾರು ಬಾರಿ ಡೆಡ್‌ ಲೈನ್ ನೀಡಿದರೂ ಬಹುತೇಕ ವಾಹನ ಸವಾರರು HSRP ಅಳವಡಿಸಿಕೊಳ್ಳಲಿಲ್ಲ. ಇದರಿಂದಾಗಿ ಸರ್ಕಾರ ಯೋಜನೆಯನ್ನು ಸಡಿಲಗೊಳಿಸಿದ್ದು, ವಾಹನ ಸವಾರರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಪ್ರಾಮಾಣಿಕತೆಗೆ […]

ಮದುವೆ ಆಗಿ ಒಂದು ತಿಂಗಳಿಗೇ “ರಶ್ಮಿಕಾ ಮಂದಣ್ಣ” ಸಿಹಿಸುದ್ದಿ? “ಈಗ ನಾವು ಮೂವರು” ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌

ನಟಿ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ನಲ್ಲಿ “Now it’s us three” “ಈಗ ನಾವು ಮೂವರು” ಎಂಬ ಕ್ಯಾಪ್ಷನ್‌ನೊಂದಿಗೆ ಹಂಚಿಕೊಂಡಿರುವ ಗ್ರಾಫಿಕ್ ವಿಡಿಯೋ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ವಿಜಯ್ ದೇವರಕೊಂಡ ಅವರೊಂದಿಗೆ ಫೆ. 26ರಂದು ಅದ್ಧೂರಿ ಮದುವೆಯ ನಂತರ ಹಂಚಿಕೊಂಡಿರುವ ಈ ಪೋಸ್ಟ್ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ವಿಡಿಯೋದಲ್ಲಿ ಸಾಂಕೆತಿಕ ದೃಶ್ಯಗಳಿದ್ದು, Terribly Tiny Tales ಅನ್ನು ಟ್ಯಾಗ್ ಮಾಡಿರುವುದು ಗಮನ ಸೆಳೆಯುತ್ತಿದೆ. ಇದರಿಂದಾಗಿ ಇದು ವೈಯಕ್ತಿಕ ಸುದ್ದಿಯೋ ಅಥವಾ ಪ್ರಚಾರದ ಭಾಗವೋ ಎಂಬುದು ಸ್ಪಷ್ಟವಾಗಿಲ್ಲ. ಅಧಿಕೃತ ದೃಢೀಕರಣಕ್ಕಾಗಿ […]

ಉಡುಪಿ: ಇಂದು ಇಂದ್ರಾಣಿ ಮುಖ್ಯಪ್ರಾಣ ದೇವರ ಪ್ರತಿಷ್ಠೆ, ಧಾರ್ಮಿಕ ಸಭೆ

ಉಡುಪಿ: ಇಂದ್ರಾಳಿಯ ಇಂದ್ರಾಣಿ ಶ್ರೀಮುಖ್ಯಪ್ರಾಣ ದೇವರ ಹಾಗೂ ನಾಗದೇವರ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವದಿಂದ ನಡೆಯುತ್ತಿವೆ.ಇಂದು ಬೆಳಗ್ಗೆ ಆದ್ಯ ಗಣಯಾಗ, ಪ್ರತಿಷ್ಠಾ ಹೋಮ, ಸ್ನಪನ ಕಲಶಾಭಿಷೇಕ, ಪ್ರಾಯಶ್ಚಿತ ಹೋಮ, ಶ್ರೀವಾಯುಸ್ತುತಿ ಹೋಮ, ನವಗ್ರಹ ಹೋಮ, ಪವಮಾನ ಹೋಮ ನೆರವೇರಲಿದೆ. ತತ್ವಹೋಮ, ಮಧ್ಯಾಹ್ನ 12.15ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ 6ರಿಂದ ಮಹಾಸುದರ್ಶನ ಹೋಮ, ದಿಶಾಹೋಮ, ಕಲಶ ಮಂಡಲ ರಚನೆ, ಅಧಿವಾಸ ಪೂಜೆ ಜರುಗಲಿದೆ.ಬೆಳಿಗ್ಗೆ 11 ಗಂಟೆಗೆ ಮಣಿಪಾಲ ನೃತ್ಯ ಕಲಾ ಮಂದಿರದ […]

ಪದವಿಯೊಂದಿಗೆ ಪಡೆಯಬಹುದು ಕೌಶಲಧಾರಿತ ಡಿಪ್ಲೋಮಾ: ಉಡುಪಿ ಉಪೇಂದ್ರ ಪೈ ಕಾಲೇಜು ಮತ್ತು MSDC ಸಹಯೋಗದಲ್ಲಿ ಉದ್ಯೋಗಮುಖಿ ಶಿಕ್ಷಣ.

ಉಡುಪಿ: ಉಪೇಂದ್ರ ಪೈ ಮೆಮೊರಿಯಲ್ ಕಾಲೇಜು -Upendra Pai Memorial College (UPMC) ಸಂಸ್ಥೆ, Manipal Skill Development Centre (MSDC) ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಉದ್ಯೋಗಮುಖಿ ಶಿಕ್ಷಣ ಒದಗಿಸುವ ನೂತನ ಕಾರ್ಯಕ್ರಮಗಳನ್ನು ಘೋಷಿಸಿದೆ. ಈ ಯೋಜನೆಯಡಿ ವಿದ್ಯಾರ್ಥಿಗಳು ಡಿಗ್ರಿಯೊಂದಿಗೆ ಪ್ರೊಫೆಷನಲ್ ಸ್ಕಿಲ್ ಡಿಪ್ಲೋಮಾವನ್ನು ಒಂದೇ ಸಮಯದಲ್ಲಿ ಪಡೆಯುವ ಅವಕಾಶ ಪಡೆಯಲಿದ್ದಾರೆ. ಸಾಮಾನ್ಯವಾಗಿ ಡಿಗ್ರಿ ಮತ್ತು ಡಿಪ್ಲೋಮಾ ಪಡೆಯಲು ನಾಲ್ಕು ವರ್ಷ ಬೇಕಾಗುತ್ತದೆ. ಆದರೆ ಈ ಸಂಯೋಜಿತ ಕಾರ್ಯಕ್ರಮದ ಮೂಲಕ ಕೇವಲ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಬಹುದಾಗಿದೆ […]

ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ: ಇಂಡಕ್ಷನ್‌ ಸ್ಟವ್‌, ಪಾತ್ರೆ ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರ ಚಿಂತನೆ

ನವದೆಹಲಿ, ಏ.4: ಕೊಲ್ಲಿ ಯುದ್ಧದಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಡಕ್ಷನ್‌ ಸ್ಟವ್‌, ಅದಕ್ಕೆ ಪೂರಕವಾದ ಪಾತ್ರೆಗಳ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ ನೀಡಲು ಮುಂದಾಗಿದೆ. ಗ್ಯಾಸ್‌ ಟ್ರಬಲ್‌ ಹಿನ್ನೆಲೆಯಲ್ಲಿ ದೇಶಾದ್ಯಂತ ಈ ರೀತಿಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಇರಾನ್‌ ಯುದ್ಧದಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ವಿದ್ಯುತ್‌ ಆಧಾರಿತ ಇಂಡಕ್ಷನ್‌ ಸ್ಟವ್‌, ಅದಕ್ಕೆ ಪೂರಕವಾದ ಪಾತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ […]