ಕಣ್ಣಿಗೆ ಸುಂದರ, ದೇಹಕ್ಕೆ ವಿಷ: ಬಣ್ಣ ಬಣ್ಣದ ಮಾವಿನ ಹಣ್ಣು ಕೊಳ್ಳುವಾಗ ಹೀಗೆ ಪರೀಕ್ಷಿಸಿ ಕೊಳ್ಳಬಹುದು

 ಕಣ್ಣಿಗೆ ಹೊಳೆಯುವಂತಹಾ ಚೆಂದದ ಬಣ್ಣ ಬಣ್ಣದ ಮಾವಿನ ಹಣ್ಣುಗಳು ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಕೃತಕವಾಗಿ ಮಾಗಿಸಿದ ಮಾವಿನ ಹಣ್ಣುಗಳಾಗಿರುವ ಸಂಭವವಿದ್ದು, ಗಂಭೀರ ಆರೋಗ್ಯ ಸಮಸ್ಯೆಗಳನ್ನುಂಟುಮಾಡುತ್ತವೆ. ನೈಸರ್ಗಿಕವಾಗಿ ಹಣ್ಣಾದ ಮಾವು ಎಂದಿಗೂ ಏಕರೂಪದ ಬಣ್ಣವನ್ನು ಹೊಂದಿರುವುದಿಲ್ಲ ಎಂಬುದನ್ನು ನೆನಪಿಡಲೇಬೇಕು. ಹಣ್ಣುಗಳಲ್ಲಿ ಕೃತಕ ರಾಸಾಯನಿಕ ಬಳಕೆಯಿಂದ ತಕ್ಷಣವೇ ಗಂಟಲು ಉರಿ, ವಾಂತಿ, ವಾಕರಿಕೆ, ಭೇದಿ ಸೇರಿದಂತೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ದೀರ್ಘಕಾಲ ಬಳಸಿದರೆ ನರಮಂಡಲ ಹಾನಿ ಮತ್ತು ಉಸಿರಾಟ ತೊಂದರೆಗಳು ಎದುರಿಸಬಹುದು.

  • ಬಣ್ಣ: ಅತಿಯಾದ ಏಕರೂಪದ ಹಳದಿ ಬಣ್ಣ
  • ವಾಸನೆ: ಹಣ್ಣು ಬೇರೆ ರಾಸಾಯನಿಕ ವಾಸನೆ ಬರಬಹುದು
  • ಬೇಕಿಂಗ್ ಸೋಡಾ ಪರೀಕ್ಷೆ: ಬೇಕಿಂಗ್ ಸೋಡಾ ನೀರಿನಲ್ಲಿ ಹಣ್ಣನ್ನು ತೊಳೆದಾಗ ಬಣ್ಣ ಬದಲಾದರೆ

ಈ ನಿಯಮಗಳನ್ನು ಪಾಲಿಸುವ ಮೂಲಕ ಹಾನಿಕರ ಹಣ್ಣುಗಳನ್ನು ಕೊಳ್ಳದೇ ಇರಬಹುದು. ಆದಷ್ಟು ಮಾಡಿ ನಿಮ್ಮ ಪರಿಚಿತರ ಅಂಗಡಿಯಿಂದ ಅಥವಾ ಲೋಕಲ್ ಹಣ್ಣುಗಳ ಮಾರಾಟಗಾರರಿಂದ ಹಣ್ಣು ಖರೀದಿಸಿ ಬಣ್ಣ ನೋಡಿ ಮಾರು ಹೋಗದಿರಿ.