ವಂದೇ ಮಾತರಂ ಹಾಡಿನ ಎಲ್ಲಾ ಚರಣ ಹಾಡಲೇಬೇಕು: ಕೇಂದ್ರದ ಆದೇಶ

ನವದೆಹಲಿ: ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ ಎಲ್ಲ ಆರು ಚರಣಗಳನ್ನು ಹಾಡುವುದು ಕಡ್ಡಾಯ. ರಾಷ್ಟ್ರ ಗೀತೆಯೊಂದಿಗೆ ಹಾಡುವುದಿದ್ದಲ್ಲಿ ಮೊದಲಿಗೆ ‘ವಂದೇ ಮಾತರಂ’ ಹಾಡಬೇಕು ಎಂದು ಗೃಹ ಸಚಿವಾಲಯ ಸೂಚಿಸಿದೆ.‘ವಂದೇ ಮಾತರಂ’ ಹಾಡುವುದಕ್ಕೆ ಮತ್ತು ನುಡಿಸುವುದಕ್ಕೆ ಸಂಬಂಧಿಸಿದಂತೆ ಸಚಿವಾಲಯವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸಚಿವಾಲಯವು ಜನವರಿ 28ರಂದು ಈ ಸಂಬಂಧ ಆದೇಶ ಹೊರಡಿಸಿದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ಮತ್ತು ರಾಜ್ಯಪಾಲರು ಆಗಮಿಸುವ ವೇಳೆ ಇಲ್ಲವೇ ಕಾಯಕ್ರಮ ಮುಗಿಸಿ ನಿರ್ಗಮಿಸುವ ವೇಳೆ, ಆಕಾಶವಾಣಿ ಮತ್ತು ಟಿ.ವಿಗಳ ಮೂಲಕ […]
ಫೆ. 15ರಂದು ಶ್ರೀಕೃಷ್ಣ ಮಠದಲ್ಲಿ ವೈಭವದ ಶಿವರಾತ್ರಿ ಮಹೋತ್ಸವ ಆಚರಣೆ

ಉಡುಪಿ: ಪರ್ಯಾಯ ಶಿರೂರು ಮಠ ಶ್ರೀಕೃಷ್ಣ ಮಠದ ವತಿಯಿಂದ ಫೆ. 15ರಂದು ಶ್ರೀಕೃಷ್ಣ ಮಠದಲ್ಲಿ ವೈಭವದ ಶಿವರಾತ್ರಿ ಮಹೋತ್ಸವದ ಆಚರಣೆ ನಡೆಯಲಿದೆ ಎಂದು ಪರ್ಯಾಯ ಶಿರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ಹೇಳಿದ್ದಾರೆ. ಶಿರೂರು ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶ್ರೀಗಳು ಮಾತನಾಡಿ, ಫೆ. 15, ಸಂಜೆ 6 ಗಂಟೆಯಿಂದ ಫೆ. 16ರ ಬೆಳಿಗ್ಗೆ 6 ಗಂಟೆಯ ತನಕ ಅಖಂಡ ಶಿವರಾತ್ರಿ ಉತ್ಸವ ನಡೆಯಲಿದೆ.ನಿರಂತರ ಪೂಜೆ, ಪಾರಾಯಣ, ಉಪನ್ಯಾಸ, ಭಜನೆ ಕಾರ್ಯಕ್ರಮಗಳು ಜರುಗಲಿವೆ ಎಂದರು. ವಿಷ್ಣುಸಹಸ್ರನಾಮ, ಪಾರಾಯಾಣಾದಿ, ಶಿವಪಂಚಾಕ್ಷರಿ […]
ಫೆ.14-15ರಂದು ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ‘ಶಿವಪಾಡಿ ವೈಭವ’

ಉಡುಪಿ: ಮಹಾಶಿವರಾತ್ರಿ ಮಹೋತ್ಸವ ಅಂಗವಾಗಿ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಇದೇ ಫೆ. 14 ಮತ್ತು 15ರಂದು ‘ಶಿವಪಾಡಿ ವೈಭವ’ ಅದ್ದೂರಿಯಾಗಿ ನಡೆಯಲಿದೆ ಎಂದು ಶಿವಪಾಡಿ ವೈಭವ ಆಚರಣಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದರು. ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.14ರಂದು ಬೆಳಿಗ್ಗೆ 9:30ಕ್ಕೆ ಆರೋಗ್ಯ ಶಿಬಿರದ ಉದ್ಘಾಟನೆ ನಡೆಯಲಿದ್ದು, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು […]
ಮಹಿಳೆಯ ಹೇರ್ ಕಟ್ ವೇಳೆ ಸಲೂನ್ ಎಡವಟ್ಟು: ಮಾಡೆಲ್‌ಗೆ 25 ಲಕ್ಷ ರೂ. ಪರಿಹಾರ ನೀಡಲು ಸುಪ್ರೀಂ ಕೋರ್ಟ್ ಆದೇಶ.!

ಮಹಿಳೆಯೊಬ್ಬರು ತಾನು ಹೇಳಿದ್ದಕ್ಕಿಂತ ಹೆಚ್ಚು ಉದ್ದ ಕೂದಲು ಕತ್ತರಿಸಿದ ಸಲೂನ್ ವಿರುದ್ಧ ಕೋರ್ಟ್ ಮೆಟ್ಟಿಲೇರಿ, 2 ಕೋಟಿ ಪರಿಹಾರಕ್ಕೆ ಮನವಿ ಮಾಡಿದ್ದು, ಕಡೆಗೂ ಆಕೆ ಅದರಲ್ಲಿ 25 ಲಕ್ಷ ರೂಪಾಯಿ ಪರಿಹಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಾಡೆಲ್ ಆಶ್ನಾ ರಾಯ್ ಎಂಬುವವರೇ ಹೀಗೆ ಕೇಸ್ ಹಾಕಿ 25 ಲಕ್ಷ ರೂಪಾಯಿ ಪರಿಹಾರ ಪಡೆದವರು. ಏನಿದು ಘಟನೆ:2018ರ ಪ್ರಕರಣ ಇದಾಗಿದ್ದು, 2018ರ ಏಪ್ರಿಲ್‌ನಲ್ಲಿ ಐಐಎಂ ಕಲ್ಕತ್ತಾ ಸ್ನಾತಕೋತ್ತರ ಪದವೀಧರೆಯಾದ ಮಾಡೆಲ್ ಆಶ್ನಾ ರಾಯ್ ಎಂಬುವವರು, ತಮ್ಮ ಕೆಲಸದ ಸಂದರ್ಶನಕ್ಕೆ ಮುಂಚಿತವಾಗಿ […]
ಕಾಪು ಪುರಸಭೆ ಕಟ್ಟಡಕ್ಕೆ ಬೀಗ ಹಾಕಿ ಹೋದ ನೌಕರ: ಸಿಬ್ಬಂದಿ ಒಳಗೆಯೇ ಲಾಕ್!

ಉಡುಪಿ: ಪುರಸಭೆ ಸಿಬ್ಬಂದಿಯ ಅಚಾತುರ್ಯದಿಂದಾಗಿ ಪ್ರಾಧಿಕಾರದ ಸಿಬ್ಬಂದಿಗಳು ಕಚೇರಿಯೊಳಗೆ ದಿಗ್ಬಂಧನ ಒಳಗಾದ ಘಟನೆ ಕಾಪುವಿನಲ್ಲಿ ನಡೆದಿದೆ. ಕಾಪು ಪುರಸಭೆ ಕಟ್ಟಡದಲ್ಲಿ ಕಾಪು ಯೋಜನಾ ಪ್ರಾಧಿಕಾರದ ಕಚೇರಿಯು ನಿರ್ವಹಿಸುತ್ತಿದ್ದು ಎರಡು ಕಚೇರಿಗಳಿಗೆ ತೆರಳಲು ಒಂದೇ ದ್ವಾರ ಇರುವುದರಿಂದ ಹೀಗಾಗಿದೆ ಎಂದು ಹೇಳಲಾಗುತ್ತಿದೆ.ಸಾಮಾನ್ಯವಾಗಿ ಪುರಸಭೆ ಸಿಬ್ಬಂದಿಗಳು ಸಂಜೆ 5:30 ರಿಂದ 6 ಗಂಟೆಯ ಒಳಗೆ ಬೀಗ ಹಾಕಿ ತೆರಳುತ್ತಾರೆ. ಈ ವೇಳೆ ಪ್ರಾಧಿಕಾರದ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರೆ ಅವರನ್ನು ಕಚೇರಿಯ ಬಾಗಿಲು ಹಾಕಿರುವ ಬಗ್ಗೆ ಮಾಹಿತಿ ನೀಡಿ ಕಳುಹಿಸಲಾಗುತ್ತಿತ್ತು. ಆದರೆ […]