ಫೆ. 15ರಂದು ಶ್ರೀಕೃಷ್ಣ ಮಠದಲ್ಲಿ ವೈಭವದ ಶಿವರಾತ್ರಿ ಮಹೋತ್ಸವ ಆಚರಣೆ

ಉಡುಪಿ: ಪರ್ಯಾಯ ಶಿರೂರು ಮಠ ಶ್ರೀಕೃಷ್ಣ ಮಠದ ವತಿಯಿಂದ ಫೆ. 15ರಂದು ಶ್ರೀಕೃಷ್ಣ ಮಠದಲ್ಲಿ ವೈಭವದ ಶಿವರಾತ್ರಿ ಮಹೋತ್ಸವದ ಆಚರಣೆ ನಡೆಯಲಿದೆ ಎಂದು ಪರ್ಯಾಯ ಶಿರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ಹೇಳಿದ್ದಾರೆ.

ಶಿರೂರು ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶ್ರೀಗಳು ಮಾತನಾಡಿ, ಫೆ. 15, ಸಂಜೆ 6 ಗಂಟೆಯಿಂದ ಫೆ. 16ರ ಬೆಳಿಗ್ಗೆ 6 ಗಂಟೆಯ ತನಕ ಅಖಂಡ ಶಿವರಾತ್ರಿ ಉತ್ಸವ ನಡೆಯಲಿದೆ.ನಿರಂತರ ಪೂಜೆ, ಪಾರಾಯಣ, ಉಪನ್ಯಾಸ, ಭಜನೆ ಕಾರ್ಯಕ್ರಮಗಳು ಜರುಗಲಿವೆ ಎಂದರು.

ವಿಷ್ಣುಸಹಸ್ರನಾಮ, ಪಾರಾಯಾಣಾದಿ, ಶಿವಪಂಚಾಕ್ಷರಿ ಮಂತ್ರ ಜಪವನ್ನು ಹಮ್ಮಿಕೊಳ್ಳಲಾಗಿದೆ. ಫೆ. 15ರ ಸಂಜೆ 5.45 ಕ್ಕೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಯಿಂದ 6.30 ರ ವರೆಗೆ ಪರ್ಯಾಯ ಶ್ರೀಗಳು ಸಂದೇಶ ನೀಡಲಿದ್ದಾರೆ.  ಸಂಜೆ 6.30 ರಿಂದ 7 ಗಂಟೆಗೆ ಪ್ರವಚನ, ರಾತ್ರಿ 7 ಗಂಟೆಯಿಂದ ರಾತ್ರಿ 9.30 ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ರಾತ್ರಿ 9.30 ರಿಂದ 10 ಗಂಟೆವರೆಗೆ ಪೂಜೆ, ರಾತ್ರಿ 10 ಗಂಟೆಯಿಂದ 11 ಗಂಟೆಗೆ ಪ್ರವಚನ, ರಾತ್ರಿ 11 ಗಂಟೆಯಿAದ 11 ಗಂಟೆಯಿಂದ ರಾತ್ರಿ 12.30 ರುದ್ರ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ ಪೂಜೆ, ರಾತ್ರಿ 12.30 ರಿಂದ 2.30 ರಿಂದ ಕುಳಿತು ಭಜನೆ ಪೂಜೆ, ರಾತ್ರಿ 2.30 ರಿಂದ 4 ಗಂಟೆವರೆಗೆ ಕುಣಿತ ಭಜನೆ, ರಾತ್ರಿ 4 ಗಂಟೆಯಿಂದ 5.30 ರ ವರೆಗೆ ರುದ್ರ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ ಪೂಜೆ ನಡೆಯಲಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀ ಮಠದ ದಿವಾನರಾದ ಡಾ. ಉದಯ ಕುಮಾರ್ ಸರಳತ್ತಾಯ ಉಪಸ್ಥಿತರಿದ್ದರು.