ಕಂಡ್ಲೂರು ನದಿಯಲ್ಲಿ ಅಕ್ರಮ ಮರಳುಗಾರಿಕೆ: ಪೊಲೀಸರ ದಾಳಿ, 11 ಮಂದಿಯ ಬಂಧನ

ಉಡುಪಿ: ಕಂಡ್ಲೂರು ಸೇತುವೆ ಬಳಿ ವಾರಾಹಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿದ ಕುಂದಾಪುರ ಗ್ರಾಮಾಂತರ ಪೊಲೀಸರು 11 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಮರಳು ಧಕ್ಕೆಯ ಸೂಪರ್‌ವೈಸರ್ ಅಜ್ಮಲ್, ಕಾರ್ಮಿಕರಾದ ರಾಮಶಂಕರ ರಾಜಬೀರ್(35), ರಾಮ ಕುಮಾರ್ (40), ಗೋವಿಂದ ಚೌದರಿ(26), ಶಿವಮುನಿ(32), ಜುನ್ನ ರಾಜಬೀರ(35), ಸತ್ಯಾದೇವ(30), ಕಮಲೇಶ ನಿಸಾದ್ (35), ಸಂತೋಷ ನಿಸಾದ್(23), ಓಂ ಪ್ರಕಾಶ ರಾಜಬರ್(34), ರಮೇಶ ರಾಜಬರ್(35) ಬಂಧಿತ ಆರೋಪಿಗಳು. 3ಲಕ್ಷ ರೂ. ಮೌಲ್ಯದ ನಾಲ್ಕು ದೋಣಿಗಳು, ದೋಣಿಗಳಲ್ಲಿದ್ದ 4,500 ರೂ. ಮೌಲ್ಯದ […]
ʻಟಾಕ್ಸಿಕ್ʼ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ: ಸಿನಿಮಾ ದೃಶ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ಅಪಮಾನ; ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ದೂರು.!

ನಟ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಚಿತ್ರ ಚಿತ್ರಕ್ಕೆ ಒಂದರ ಮೇಲೊಂದು ಸಂಕಷ್ಟಗಳು ಎದುರಾಗುತ್ತಿವೆ. ಕೆಲ ದಿನಗಳ ಹಿಂದಷ್ಟೇ ಟೀಸರ್ ವಿರುದ್ಧ ಮಹಿಳಾ ಒಕ್ಕೂಟಗಳು ಸಿಡಿದೆದ್ದಿದವು. ಇದೀಗ ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ತಿರುಗಿಬಿದ್ದಿದೆ. ಟಾಕ್ಸಿಕ್ ಸಿನಿಮಾ ದೃಶ್ಯಗಳಲ್ಲಿ ಕ್ರೈಸ್ತ ಧರ್ಮಕ್ಕೆ ಅಪಮಾನ ಮಾಡಲಾಗಿದೆ, ಕ್ರೈಸ್ತರಿಗೆ ಮುಜುಗರ ತರಲಾಗಿದೆ ಎಂದು ಆರೋಪಿಸಿ, ನ್ಯಾಷನಲ್ ಕ್ರಿಶ್ಚಿಯನ್ ಫೆಡರೇಷನ್ ಚಲನಚಿತ್ರ ವಾಣಿಜ್ಯ ಮಂಡಳಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಗೃಹಸಚಿವರು ಹಾಗೂ ಸೆನ್ಸಾರ್ ಬೋರ್ಡ್‌ಗೆ ದೂರು ನೀಡಿದೆ. ಟಾಕ್ಸಿಕ್ […]
ಉಡುಪಿ:ಡಿ-ಸ್ಲಡ್ಜ್ ಆಪರೇಟರ್‌ಗಳ ನೋಂದಣಿಗೆ ಸೂಚನೆ

ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಾಸ್ತವ್ಯ, ವಾಣಿಜ್ಯ, ವಿದ್ಯಾಸಂಸ್ಥೆ, ಸರಕಾರಿ ಹಾಗೂ ಇತರೇ ಕಟ್ಟಡದಯಾವುದೇ ರೀತಿಯ ದ್ರವತ್ಯಾಜ್ಯದ ಗುಂಡಿಗಳಾದ ಶೌಚಾಲಯ ಗುಂಡಿ, ಉದ್ಯಮದ ತ್ಯಾಜ್ಯ ನೀರಿನ ಗುಂಡಿ ಹಾಗೂ ಇತರೇ ತ್ಯಾಜ್ಯ ನೀರಿನ ಗುಂಡಿಯನ್ನು ಸ್ವಚ್ಛಗೊಳಿಸುವ ಖಾಸಗಿ ವಾಹನದ ಡಿ-ಸ್ಲಡ್ಜ್ ಆಪರೇಟರ್‌ಗಳು ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ನೋಂದಾಯಿಸಿಕೊಳ್ಳುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.
ಉಡುಪಿ:ತಾಲ್ಲೂಕು ಮಟ್ಟದ ಗ್ರಾಮೀಣ ಪತ್ರಕರ್ತರಿಗೆ- ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನ

ಉಡುಪಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕು ಮಟ್ಟದ ಪತ್ರಕರ್ತರು ತಮ್ಮ ವೃತ್ತಿ ನಿರತ ಚಟುವಟಿಕೆಗಳ ಸಂಬಂಧ ತಮ್ಮ ಜಿಲ್ಲಾದ್ಯಂತ ಉಚಿತವಾಗಿ ಸಂಚರಿಸಲು ಅನುಕೂಲವಾಗುವಂತೆ ಉಚಿತ ಬಸ್‌ಪಾಸ್ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪತ್ರಕರ್ತರು ತಾವು ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಗಳಿಂದ ಸೇವಾ ಪ್ರಮಾಣಪತ್ರ, ಶಿಫಾರಸ್ಸು ಪತ್ರ ಮತ್ತು 11 ತಿಂಗಳುಗಳ ವೇತನಪತ್ರ (ಲೈನೇಜ್, ಸಂಭಾವನೆ, ಕಮೀಷನ್ ಪಡೆದಿರುವ ದಾಖಲೆ) ಗಳನ್ನು ಅಥವಾ ವೇತನ ಜಮಾ ಆಗಿರುವ ಮಾಹಿತಿ ಇರುವಂತಹ ಬ್ಯಾಂಕ್ […]
ಉಡುಪಿ:ಘನತ್ಯಾಜ್ಯ ನಿಯಮಾವಳಿ : ಉಲ್ಲಂಘನೆ ಮಾಡಿದ್ದಲ್ಲಿ ದಂಡ ವಸೂಲಿ

ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ಸ್ಥಳ ಅಥವಾ ಇತರೇ ಯಾವುದೇ ಅನಧಿಕೃತ ಸ್ಥಳದಲ್ಲಿ ಘನತ್ಯಾಜ್ಯವನ್ನು ಸುಡುವುದು, ಸುರಿಯುವುದು ಅಥವಾ ಅನಧಿಕೃತವಾಗಿ ಹೂಳುವ ಮೂಲಕ ವಿಲೇವಾರಿ ಮಾಡುವುದು, ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವುದು, ಬಯಲಿನಲ್ಲಿ ಮಲ ವಿಸರ್ಜನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡಿದ್ದಲ್ಲಿ, ಕಸವನ್ನು ವಿಂಗಡಿಸಿ ನೀಡದಿದ್ದಲ್ಲಿ, ಪ್ರತಿ ಉದ್ಯಮದ ಎದುರು ಕಸದ ಬುಟ್ಟಿಯನ್ನು ಇರಿಸದಿದ್ದಲ್ಲಿ ಹಾಗೂ ಕೊಳೆತ ಅಥವಾ ಇತರೇ ಘನತ್ಯಾಜ್ಯ ವಸ್ತುಗಳ ಅನಿಯಮಿತ ಶೇಖರಣೆ ಮಾಡಿದ್ದಲ್ಲಿ ಘನತ್ಯಾಜ್ಯ ನಿಯಮಾವಳಿಯಂತೆ ಪಟ್ಟಣ ಪಂಚಾಯತ್ […]