ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಾಸ್ತವ್ಯ, ವಾಣಿಜ್ಯ, ವಿದ್ಯಾಸಂಸ್ಥೆ, ಸರಕಾರಿ ಹಾಗೂ ಇತರೇ ಕಟ್ಟಡದ
ಯಾವುದೇ ರೀತಿಯ ದ್ರವತ್ಯಾಜ್ಯದ ಗುಂಡಿಗಳಾದ ಶೌಚಾಲಯ ಗುಂಡಿ, ಉದ್ಯಮದ ತ್ಯಾಜ್ಯ ನೀರಿನ ಗುಂಡಿ ಹಾಗೂ ಇತರೇ ತ್ಯಾಜ್ಯ ನೀರಿನ ಗುಂಡಿಯನ್ನು ಸ್ವಚ್ಛಗೊಳಿಸುವ ಖಾಸಗಿ ವಾಹನದ ಡಿ-ಸ್ಲಡ್ಜ್ ಆಪರೇಟರ್‌ಗಳು ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ನೋಂದಾಯಿಸಿಕೊಳ್ಳುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.
















