ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ಸ್ಥಳ ಅಥವಾ ಇತರೇ ಯಾವುದೇ ಅನಧಿಕೃತ ಸ್ಥಳದಲ್ಲಿ ಘನತ್ಯಾಜ್ಯವನ್ನು ಸುಡುವುದು, ಸುರಿಯುವುದು ಅಥವಾ ಅನಧಿಕೃತವಾಗಿ ಹೂಳುವ ಮೂಲಕ ವಿಲೇವಾರಿ ಮಾಡುವುದು, ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವುದು, ಬಯಲಿನಲ್ಲಿ ಮಲ ವಿಸರ್ಜನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡಿದ್ದಲ್ಲಿ, ಕಸವನ್ನು ವಿಂಗಡಿಸಿ ನೀಡದಿದ್ದಲ್ಲಿ, ಪ್ರತಿ ಉದ್ಯಮದ ಎದುರು ಕಸದ ಬುಟ್ಟಿಯನ್ನು ಇರಿಸದಿದ್ದಲ್ಲಿ ಹಾಗೂ ಕೊಳೆತ ಅಥವಾ ಇತರೇ ಘನತ್ಯಾಜ್ಯ ವಸ್ತುಗಳ ಅನಿಯಮಿತ ಶೇಖರಣೆ ಮಾಡಿದ್ದಲ್ಲಿ ಘನತ್ಯಾಜ್ಯ ನಿಯಮಾವಳಿಯಂತೆ ಪಟ್ಟಣ ಪಂಚಾಯತ್ ವತಿಯಿಂದ ನಿಗಧಿತ ದಂಡ ವಸೂಲಿಗೆ ಸೂಕ್ತ ಕ್ರಮವಹಿಸಲಾಗುವುದು ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
















