ಶಿವಮೊಗ್ಗದಲ್ಲಿ ಅಕೌಂಟೆಂಟ್ ಹುದ್ದೆಗೆ ನೇಮಕಾತಿ

ಕಾರ್ಕಳ: ಕ್ರಿಯೇಟಿವ್ ಎಜುಕೇಶನ್ ಫೌಂಡೇಶನ್, ಕಾರ್ಕಳ ಸಂಸ್ಥೆಯ ಶಿವಮೊಗ್ಗ ಘಟಕದಲ್ಲಿ ಅಕೌಂಟೆಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಟ್ಯಾಲಿ ಹಾಗೂ ಜಿಎಸ್‌ಟಿ ಜ್ಞಾನ ಕಡ್ಡಾಯವಾಗಿದ್ದು, ಕನಿಷ್ಠ 1 ವರ್ಷದ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ತಮ್ಮ ರೆಸ್ಯೂಮ್ ಅನ್ನು [email protected] ಗೆ ಕಳುಹಿಸಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 96069 97391

ಬಂಟ್ವಾಳ: ಐಟಿಐ ವಿದ್ಯಾರ್ಥಿಗಳ ಮಧ್ಯೆ ಗಲಾಟೆ- ಇಬ್ಬರು ಸಹಪಾಠಿಗಳಿಗೆ ಚೂರಿ ಇರಿದ ವಿದ್ಯಾರ್ಥಿ

ಮಂಗಳೂರು: ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಇಬ್ಬರು ಸಹಪಾಠಿಗಳಿಗೆ ವಿದ್ಯಾರ್ಥಿಯೋರ್ವ ಪೆನ್ ಚಾಕುವಿನಿಂದ ಇರಿದ ಘಟನೆ. ಬಂಟ್ವಾಳ ತಾಲೂಕಿನ ವಿಟ್ಲದ ಖಾಸಗಿ ಕಾಲೇಜಿನಲ್ಲಿ ನಡೆದಿದೆ.ಕಾಲೇಜಿನೊಳಗಿನ ವಿಚಾರದಲ್ಲಿ ವಿದ್ಯಾರ್ಥಿ ಹೇಮಂತ್ ವಿದ್ಯಾರ್ಥಿಗೆ ಚೂರಿಯಿಂದ ಹಲ್ಲೆ ನಡೆಸಿದ್ದಾನೆ. ಗಲಾಟೆ ತಪ್ಪಿಸಲು ಬಂದ ಮತ್ತೊಬ್ಬ ವಿದ್ಯಾರ್ಥಿಗೂ ಗಾಯವಾಗಿದೆ. ಓರ್ವ ವಿದ್ಯಾರ್ಥಿಗೆ ಬೆನ್ನಿಗೆ ಗಾಯ ಹಾಗೂ ಇನ್ನೋರ್ವನಿಗೆ ತೊಡೆ ಭಾಗದಲ್ಲಿ ಗಾಯವಾಗಿದೆ. ಸದ್ಯ ಗಾಯಗೊಂಡ ಮಹಮ್ಮದ್ ರಿಯಾನ್ ಹಾಗೂ ಯಜೇಶ್ ಅವರನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ತಿಳಿದು‌ […]

ಉಡುಪಿ: ಬಸ್ ಏಜೆಂಟ್ ಬಾವಿಗೆ ಹಾರಿ ಆತ್ಮಹತ್ಯೆ

ಉಡುಪಿ: ಬಸ್ ಏಜೆಂಟೊಬ್ಬರು‌ ಮನೆಯ‌ ಹತ್ತಿರದ ಬಾವಿಗೆ ಜಿಗಿದು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಬನ್ನಂಜೆ ಗರಡಿ ಸಂಪರ್ಕಿಸುವ ರಸ್ತೆ ಸಮೀಪ ಬುಧವಾರ ನಡೆದಿದೆ. ಮೃತ ವ್ಯಕ್ತಿಯನ್ನು ಬಸ್ ಏಜೆಂಟ್ ಕೆ. ರಾಜೇಶ್ ಶೆಣೈ ಎಂದು‌ ಗುರುತಿಸಲಾಗಿದೆ. ಸಮಾಜಸೇವಕ ಈಶ್ವರ್ ಮಲ್ಪೆ ತಂಡದವರು ಕಾರ್ಯಾಚರಣೆ ಮೂಲಕ ಶವವನ್ನು ಬಾವಿಯಿಂದ ಮೇಲೆತ್ತಿದರು. ಶವವನ್ನು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ‌ ಒಳಕಾಡು ಸಹಕರಿಸಿದರು. ನಗರ ಪೋಲಿಸ್ ಠಾಣೆಯ ಎಸ್. ಐ ನಾರಾಯಣ, ಹೆಡ್ ಕಾನ್ಸ್ಟೇಬಲ್ ನೇತಾವತಿ ಕಾನೂನು […]

ಧೂಳಿನೊಂದಿಗೆ ಬಾನೆತ್ತರಕ್ಕೆ ಚಿಮ್ಮಿದ ಸುಳಿಗಾಳಿ: ನಾಡಗುಡ್ಡೆಅಂಗಡಿ ಜಾರುಬಂಡಿ ಮೈದಾನದಲ್ಲಿ ವಿಚಿತ್ರ ವಿದ್ಯಮಾನ

ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾಡಗುಡ್ಡೆಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿನ ಜಾರು ಬಂಡಿ ಮೈದಾನದಲ್ಲಿ ವಿಚಿತ್ರ ಸುಳಿಗಾಳಿ ಕಾಣಿಸಿಕೊಂಡಿದ್ದು ಅದರ ವಿಡಿಯೋ ವೈರಲ್ ಆಗಿದೆ. ಮೈದಾನದ ಮಧ್ಯೆ ಧೂಳಿನ ಜೊತೆಗೆ ಗಿರ ಗಿರನೇ ತಿರುಗುವ ವಿಚಿತ್ರ ವಿದ್ಯಮಾನ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ.ಆಟದ ಮೈದಾನದ ನಡುವೆ ಇದ್ದಕ್ಕಿದ್ದಂತೆ ಸುಳಿಗಾಳಿ ಕಾಣಿಸಿದ್ದು, ಸುರುಳಿ ಸುತ್ತುತ್ತಲೇ ಧೂಳಿನೊಂದಿಗೆ ಬಾನೆತ್ತರಕ್ಕೆ ಚಿಮ್ಮಲಾರಂಭಿಸಿದೆ. ಮೈದಾನದಲ್ಲಿದ್ದ ಕಸ, ಮಣ್ಣಿನ ಧೂಳನ್ನೆಲ್ಲ ಹೊತ್ತು ಗಾಳಿ ಸುಮಾರು ಇನ್ನೂರು ಅಡಿ ಎತ್ತರಕ್ಕೆ ಹಾವಿನಂತೆ ಲಂಬವಾಗಿ […]

ಮೂಡುಬಿದಿರೆ:ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಪ್ರಥಮ

ಮೂಡುಬಿದಿರೆ: ಫೆಬ್ರವರಿ 7 ಮತ್ತು 8 ರಂದು ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಅನ್ವಿತಾ ಬಿ ಹಿಂದಿ ಭಾಷಣದಲ್ಲಿ ಪ್ರಥಮ ಸ್ಥಾನ ಮತ್ತು ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಸ್ನೇಹ ಪರಪ್ಪ ಸಮಾಯಿ ಕನ್ನಡ ಆಶು ಭಾಷಣದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಅಭಿನಂದಿಸಿದ್ದಾರೆ.