ಪ್ರೊಫೆಷನಲ್ ಎಡ್ಜುಕೇಶನ್ ನಲ್ಲಿ ಉದ್ಯೋಗಾವಕಾಶಗಳು

ಉಡುಪಿ: ಪ್ರೊಫೆಷನಲ್ ಎಡ್ಜುಕೇಶನ್ ನಲ್ಲಿ ಸಿ.ಎ, ಸಿ.ಎಸ್, ಸಿಎಂಎ, ಎಲ್.ಎಲ್.ಬಿ, ಎಲ್.ಎಲ್.ಎಂ, ಎಂಕಾಂ, ಎಂ.ಬಿ.ಎ, ಎಂಎಸ್ಸಿ ಆದವರಿಗೆ ಉದ್ಯೋಗಾವಕಾಶಗಳು. ಅರ್ಹತೆ: ಉತ್ತಮ ಸಂವಹನ ಸಾಮರ್ಥ್ಯಬೋಧನೆಯಲ್ಲಿ ಆಸಕ್ತಿವೃತ್ತಿಪರತೆ ಆಸಕ್ತರು ಬಯೋಡೇಟಾವನ್ನು [email protected]ಸಂಪರ್ಕ: 8088161969

ಸಿಟಿ ಸೆಂಟರ್ ಮಾಲ್ ಗೆ ಬಂದಿದ್ದ ಮಹಿಳೆ ನಾಪತ್ತೆ

ಮಂಗಳೂರು: ಮಂಗಳೂರಿನ ಸಿಟಿ ಸೆಂಟರ್ ಮಾಲ್ ಗೆ ತಾಯಿಯೊಂದಿಗೆ ಬಂದಿದ್ದ ಮಹಿಳೆಯೊಬ್ಬಳು ನಾಪತ್ತೆಯಾದ ಘಟನೆ ನಡೆದಿದ್ದು, ಈ ಕುರಿತಂತೆ ಎಪ್ರಿಲ್ 28 ರಂದು ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಮಹಿಳೆಯನ್ನು ತೊಕ್ಕೊಟ್ಟು ಸಮೀಪದ ಪೆರ್ಮನ್ನೂರು ಗ್ರಾಮದ ಕೆರೆಬೈಲ್ ಗುಡ್ಡೆಯ ನಿವಾಸಿ ಸಫನಾ ಎಂದು ಗುರುತಿಸಲಾಗಿದೆ. ಎಪ್ರಿಲ್ 28ರಂದು ನಗರದ ಸಿಟಿ ಸೆಂಟರ್ ಮಾಲ್‌ಗೆ ತನ್ನ ತಾಯಿಯೊಂದಿಗೆ ಬಂದಿದ್ದ ಸಫನಾ ಬಳಿಕ ಕಾಣೆಯಾಗಿದ್ದಾರೆ. 27ರ ಹರೆಯದ ಸಫನಾರಿಗೆ ಇಬ್ಬರು ಮಕ್ಕಳಿದ್ದಾರೆ. 4.5 ಅಡಿ ಎತ್ತರದ, ಬಿಳಿ ಮೈಬಣ್ಣದ, […]

ಮಲ್ಪೆ: ಬೋಟಿನಲ್ಲಿ ಮಲಗಿದ್ದ ವ್ಯಕ್ತಿ ನೀರಿಗೆ ಬಿದ್ದು ಸಾವು

ಮಲ್ಪೆ: ಬೋಟಿನಲ್ಲಿ ಮಲಗಲು ಹೋದ ವ್ಯಕ್ತಿ ನೀರಿನಲ್ಲಿ ಮಗುಚಿ ಬಿದ್ದು ಮೃತರಾಗಿರುವ ಘಟನೆ ವರದಿಯಾಗಿದೆ. ಕೊಡವೂರು ಗ್ರಾಮದ ಸುರೇಶ್‌ (46) ಮೃತಪಟ್ಟಿದ್ದು, ಅವರು ಮೇ 1ರಂದು ರಾತ್ರಿ ಮನೆಯಲ್ಲಿ ಊಟ ಮಾಡಿ ಬೋಟಿನಲ್ಲಿ ಮಲಗಲು ಹೋಗಿದ್ದರು. ಬೆಳಗ್ಗೆ ನೋಡುವಾಗ ಬೋಟಿನಲ್ಲಿ ಸುರೇಶ್‌ ಅವರ ಚಪ್ಪಲಿ ಮಾತ್ರ ಇತ್ತು. ಅವರ ಮೃತದೇಹ ನೀರಿನಲ್ಲಿ ಮಗುಚಿ ಬಿದ್ದ ಸ್ಥಿತಿಯಲ್ಲಿತ್ತು. ಬೋಟು ಹತ್ತುವಾಗ ಅಥವಾ ಇನ್ಯಾವುದೋ ಕಾರಣದಿಂದ ನೀರಿಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನ್ನ ಎರಡನೇ C295 ವಿಮಾನವನ್ನು ಸ್ವಾಗತಿಸಿದ ಭಾರತೀಯ ವಾಯುಪಡೆ: ಟಾಟಾ ಸಹಭಾಗಿತ್ವದಲ್ಲಿ ಮೇಕ್ ಇನ್ ಇಂಡಿಯಾಗೆ ದೊರಕಿತು ಬಲ

ನವದೆಹಲಿ: ಭಾರತೀಯ ವಾಯುಪಡೆಯು (IAF) ತನ್ನ ಎರಡನೇ C295 ವಿಮಾನವನ್ನು ಶುಕ್ರವಾರ ಸ್ವಾಗತಿಸಿತು. ವಾಯುಸೇನೆಯ ಹಳೆಯದಾದ Avro-748 ಫ್ಲೀಟ್ ಅನ್ನು ಬದಲಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದರು. ಸೆಪ್ಟೆಂಬರ್ 2021 ರಲ್ಲಿ, ಭಾರತವು ತನ್ನ ಏರ್ ಫ್ಲೀಟ್ ಅನ್ನು ಆಧುನೀಕರಿಸಲು 56 ಏರ್‌ಬಸ್ C295 ವಿಮಾನಗಳ ಖರೀದಿಯನ್ನು ಒಟ್ಟು 21,935 ಕೋಟಿ ರೂ.ಗಳೊಂದಿಗೆ ಅಂತಿಮಗೊಳಿಸಿತು. ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್ ನಿಂದ 56 ಆರ್ಡರ್ ಮಾಡಿದ ವಿಮಾನಗಳಲ್ಲಿ 16 ಅನ್ನು ಸ್ಪೇನ್‌ನ ಸೆವಿಲ್ಲೆಯಲ್ಲಿ ತಯಾರಿಸಲಾಗುವುದು […]