ಮಲ್ಪೆ: ಬೋಟಿನಲ್ಲಿ ಮಲಗಿದ್ದ ವ್ಯಕ್ತಿ ನೀರಿಗೆ ಬಿದ್ದು ಸಾವು

ಮಲ್ಪೆ: ಬೋಟಿನಲ್ಲಿ ಮಲಗಲು ಹೋದ ವ್ಯಕ್ತಿ ನೀರಿನಲ್ಲಿ ಮಗುಚಿ ಬಿದ್ದು ಮೃತರಾಗಿರುವ ಘಟನೆ ವರದಿಯಾಗಿದೆ.

ಕೊಡವೂರು ಗ್ರಾಮದ ಸುರೇಶ್‌ (46) ಮೃತಪಟ್ಟಿದ್ದು, ಅವರು ಮೇ 1ರಂದು ರಾತ್ರಿ ಮನೆಯಲ್ಲಿ ಊಟ ಮಾಡಿ ಬೋಟಿನಲ್ಲಿ ಮಲಗಲು ಹೋಗಿದ್ದರು. ಬೆಳಗ್ಗೆ ನೋಡುವಾಗ ಬೋಟಿನಲ್ಲಿ ಸುರೇಶ್‌ ಅವರ ಚಪ್ಪಲಿ ಮಾತ್ರ ಇತ್ತು. ಅವರ ಮೃತದೇಹ ನೀರಿನಲ್ಲಿ ಮಗುಚಿ ಬಿದ್ದ ಸ್ಥಿತಿಯಲ್ಲಿತ್ತು. ಬೋಟು ಹತ್ತುವಾಗ ಅಥವಾ ಇನ್ಯಾವುದೋ ಕಾರಣದಿಂದ ನೀರಿಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.