ಸಿಟಿ ಸೆಂಟರ್ ಮಾಲ್ ಗೆ ಬಂದಿದ್ದ ಮಹಿಳೆ ನಾಪತ್ತೆ

ಮಂಗಳೂರು: ಮಂಗಳೂರಿನ ಸಿಟಿ ಸೆಂಟರ್ ಮಾಲ್ ಗೆ ತಾಯಿಯೊಂದಿಗೆ ಬಂದಿದ್ದ ಮಹಿಳೆಯೊಬ್ಬಳು ನಾಪತ್ತೆಯಾದ ಘಟನೆ ನಡೆದಿದ್ದು, ಈ ಕುರಿತಂತೆ ಎಪ್ರಿಲ್ 28 ರಂದು ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಮಹಿಳೆಯನ್ನು ತೊಕ್ಕೊಟ್ಟು ಸಮೀಪದ ಪೆರ್ಮನ್ನೂರು ಗ್ರಾಮದ ಕೆರೆಬೈಲ್ ಗುಡ್ಡೆಯ ನಿವಾಸಿ ಸಫನಾ ಎಂದು ಗುರುತಿಸಲಾಗಿದೆ.

ಎಪ್ರಿಲ್ 28ರಂದು ನಗರದ ಸಿಟಿ ಸೆಂಟರ್ ಮಾಲ್‌ಗೆ ತನ್ನ ತಾಯಿಯೊಂದಿಗೆ ಬಂದಿದ್ದ ಸಫನಾ ಬಳಿಕ ಕಾಣೆಯಾಗಿದ್ದಾರೆ. 27ರ ಹರೆಯದ ಸಫನಾರಿಗೆ ಇಬ್ಬರು ಮಕ್ಕಳಿದ್ದಾರೆ. 4.5 ಅಡಿ ಎತ್ತರದ, ಬಿಳಿ ಮೈಬಣ್ಣದ, ಕಪ್ಪುಬಣ್ಣದ ಬುರ್ಖಾ ಧರಿಸಿರುವ ಈಕೆ ಬ್ಯಾರಿ, ಕನ್ನಡ, ತುಳು ಭಾಷೆಯನ್ನು ಮಾತನಾಡುತ್ತಾರೆ. ಈಕೆಯನ್ನು ಕಂಡವರು ಬಂದರು ಠಾಣೆಗೆ (ಮೊ.ಸಂ: 9480805338,9480802321/0824-2220516) ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.