ತನ್ನ ಎರಡನೇ C295 ವಿಮಾನವನ್ನು ಸ್ವಾಗತಿಸಿದ ಭಾರತೀಯ ವಾಯುಪಡೆ: ಟಾಟಾ ಸಹಭಾಗಿತ್ವದಲ್ಲಿ ಮೇಕ್ ಇನ್ ಇಂಡಿಯಾಗೆ ದೊರಕಿತು ಬಲ

ನವದೆಹಲಿ: ಭಾರತೀಯ ವಾಯುಪಡೆಯು (IAF) ತನ್ನ ಎರಡನೇ C295 ವಿಮಾನವನ್ನು ಶುಕ್ರವಾರ ಸ್ವಾಗತಿಸಿತು. ವಾಯುಸೇನೆಯ ಹಳೆಯದಾದ Avro-748 ಫ್ಲೀಟ್ ಅನ್ನು ಬದಲಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದರು.

ಸೆಪ್ಟೆಂಬರ್ 2021 ರಲ್ಲಿ, ಭಾರತವು ತನ್ನ ಏರ್ ಫ್ಲೀಟ್ ಅನ್ನು ಆಧುನೀಕರಿಸಲು 56 ಏರ್‌ಬಸ್ C295 ವಿಮಾನಗಳ ಖರೀದಿಯನ್ನು ಒಟ್ಟು 21,935 ಕೋಟಿ ರೂ.ಗಳೊಂದಿಗೆ ಅಂತಿಮಗೊಳಿಸಿತು.

ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್ ನಿಂದ 56 ಆರ್ಡರ್ ಮಾಡಿದ ವಿಮಾನಗಳಲ್ಲಿ 16 ಅನ್ನು ಸ್ಪೇನ್‌ನ ಸೆವಿಲ್ಲೆಯಲ್ಲಿ ತಯಾರಿಸಲಾಗುವುದು ಮತ್ತು ಉಳಿದ 40 ಅನ್ನು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (TASL) ಸಹಭಾಗಿತ್ವದಲ್ಲಿ ವಡೋದರದಲ್ಲಿ ಅಂತಿಮ ಅಸೆಂಬ್ಲಿ ಲೈನ್ (FAL) ನಲ್ಲಿ ಉತ್ಪಾದಿಸಲಾಗುವುದು.

ಈ ವಿಮಾನಗಳು ಭಾರತದ ಏರೋಸ್ಪೇಸ್ ವಲಯದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಖಾಸಗಿ ವಲಯದಲ್ಲಿ ದೇಶದ ಮೊದಲ ‘ಮೇಕ್ ಇನ್ ಇಂಡಿಯಾ’ ಏರೋಸ್ಪೇಸ್ ಕಾರ್ಯಕ್ರಮದ ಭಾಗವಾಗಿದ್ದು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (HAL) ಜೊತೆ ಜೊತೆಗೆ ಭಾರತದಲ್ಲೇ ರಕ್ಷಣಾ ಯುದ್ದ ವಿಮಾನಗಳನ್ನು ತಯಾರಿಸಲಿದೆ.

ಮೊದಲ ದೇಶೀಯವಾಗಿ ಉತ್ಪಾದಿಸಲಾದ C295 ಸೆಪ್ಟೆಂಬರ್ 2026 ರಲ್ಲಿ ವಡೋದರಾ ಸ್ಥಾವರದಿಂದ ಹೊರಬರುವ ನಿರೀಕ್ಷೆಯಿದೆ.