ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಾರ್ಷಿಕ ಮಹಾರಥೋತ್ಸವ
ಉಡುಪಿ: ಶ್ರೀ ವೆಂಕಟರಮಣ ದೇವಸ್ಥಾನ ಕರಂಬಳ್ಳಿ ಇಲ್ಲಿನ ವಾರ್ಷಿಕ ಮಹಾರಥೋತ್ಸವ ಶನಿವಾರ ರಾತ್ರಿ ನಡೆಯಿತು. ಧಾರ್ಮಿಕ ಪೂಜಾ ವಿಧಿಗಳನ್ನು ಪಾಡಿಗಾರ ವಾಸುದೇವ ತಂತ್ರಿಗಳು ನಡೆಸಿಕೊಟ್ಟರು. ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು. ಆಡಳಿತ ಮೊಕ್ತೇಸರ ಮಾಜಿ ಶಾಸಕ ರಘುಪತಿ ಭಟ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದ ಹರಿಕಾರ ಮನೋಜ್ ಕಡಬ ಇವರಿಗೆ ಹೊರಜಿಲ್ಲಾ ಸನ್ಮಾನ
ಉಡುಪಿ: ಉಡುಪಿಯ ಮನೋಜ್ ಕಡಬ ಅವರು ಕನ್ನಡ ಮಾಧ್ಯಮ ಶಾಲೆ ಉಳಿಸಲು ರಾಜ್ಯಾದ್ಯಂತ ಆಂದೋಲನ ಆರಂಭಿಸಿದ್ದು ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಧಾರವಾಡದ ಡಿಕೆಎಚ್ ಫೌಂಡೇಶನ್ ಇದರ 3ನೇ ವಾರ್ಷಿಕೋತ್ಸವದಲ್ಲಿ ‘ರಾಜನಕ್ಷತ್ರ’ ಚಲನಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭದಂದು ಸನ್ಮಾನಿಸಿ ಗೌರವಿಸಲಾಯಿತು. ಮನೋಜ್ ಕಡಬ ಇವರು ಸ್ಪೋಕನ್ ಇಂಗ್ಲಿಷ್ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದ ಹರಿಕಾರರಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ಈ ಬಗ್ಗೆ ಕೆಲಸ ಮಾಡುತ್ತಿದ್ದು, ಮುಂದಿನ ವರ್ಷ ರಾಜ್ಯದಾದ್ಯಂತ […]
ಕರುನಾಡ ಹಣತೆ ಕವಿ ಬಳಗದ ದ್ವಿತೀಯ ಮಹಿಳಾ ಸಮ್ಮೇಳನ; ಯುವ ಪತ್ರಕರ್ತ ಅರುಣ್ ಮಂಜುನಾಥ್ ಇವರಿಗೆ ಕಾಯಕಯೋಗಿ ಪ್ರಶಸ್ತಿ
ಹಾವೇರಿ: ಕರುನಾಡ ಹಣತೆ ಕವಿ ಬಳಗ( ರಿ) ಚಿತ್ರದುರ್ಗ ಮಹಿಳಾ ಘಟಕ ಇದರ ವತಿಯಿಂದ ದ್ವಿತೀಯ ಮಹಿಳಾ ಸಮ್ಮೇಳನ 2024 ಭಾನುವಾರ ಹಾವೇರಿಯ ಶ್ರೀ ಬಸವಕೇಂದ್ರ ಹೊಸಮಠದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನಾಡಿನ ಎಲ್ಲಾ ಜಿಲ್ಲೆಯ ಕವಿಗಳು ಭಾಗವಹಿಸಿದ್ದರು. ಪುಸ್ತಕ ಲೋಕಾರ್ಪಣೆ, ರಾಜ್ಯ ಪ್ರಶಸ್ತಿ ಪ್ರದಾನ, ಕನ್ನಡ ಬುಕ್ ಆಫ್ ರೆಕಾರ್ಡ್ಸ್ ನ ವತಿಯಿಂದ ಶರಣ ಶರಣೆಯರ ಕುರಿತಾಗಿ ದಾಖಲೆ ಬರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತೀರ್ಥಹಳ್ಳಿಯ ಯುವ ಪತ್ರಕರ್ತ ಅರುಣ್ ಮಂಜುನಾಥ್ ಇವರಿಗೆ ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿನ ನಿಸ್ವಾರ್ಥ […]
ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರ ಅತ್ತೂರು: ವಾರ್ಷಿಕ ಮಹೋತ್ಸವ ಸಂಪನ್ನ
ಕಾರ್ಕಳ: ಮಹಾನ್ ಸಂತ, ಸುಪ್ರಸಿದ್ಧ, ಕಾರ್ಕಳದ ಪವಾಡ ಪುರುಷ ಸಂತ ಲಾರೆನ್ಸ್ ಬಸಿಲಿಕದ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ದೈವಾರಾಧನೆಯ ಭಕ್ತಿ ಕಾರ್ಯಗಳು ಅತ್ಯಂತ ಸುಸಜ್ಜಿತವಾಗಿ ನೆರವೇರಿಸಲಾಯಿತು. ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ಮಹೋತ್ಸವದ ಅಂಗವಾಗಿ ‘ವಿನಮೃರಾಗಿ ಪ್ರಾರ್ಥಿಸೋಣ’ ಎಂಬ ಹಬ್ಬದ ಪ್ರಮುಖ ದಿನದ ವಿಷಯವನ್ನು ಧ್ಯಾನಿಸಲಾಯಿತು. ವಿನಯತೆಯ ಪ್ರಾರ್ಥನೆ ಅತ್ಯಂತ ಶಕ್ತಿಶಾಲಿ. ಧನ್ಯತಾ ಹೃದಯ ಹಾಗೂ ವಿನಮೃ ಪ್ರಾರ್ಥನೆ ಸರ್ವಶಕ್ತ ದೇವರಿಗೆ ಅತೀ ಮೆಚ್ಚುಗೆಯಾದಂತಹದು. ನಮ್ಮ ಪ್ರತಿಯೊಂದು ಪ್ರಾರ್ಥನೆ ವಿನಯತೆಯ ಗುಣದಿಂದ ಕೂಡಿರಬೇಕು. ವಿನಯಶೀಲನು ಸದಾ ವಿನಯತೆಯ […]
ಮೂಡಬಿದ್ರೆ: ಭಾರತೀಯ ಕಥೋಲಿಕ್ ಯುವ ಸಂಚಾಲನ್ ವತಿಯಿಂದ ರಕ್ತದಾನ ಹಾಗೂ ಕೇಶದಾನ ಶಿಬಿರ
ಮೂಡಬಿದ್ರೆ: ಭಾರತೀಯ ಕಥೋಲಿಕ್ ಯುವ ಸಂಚಾಲನ್ ಮೂಡುಬಿದಿರೆ ಘಟಕ ಇದರ ಸುವರ್ಣ ಮಹೋತ್ಸವದ ಅಂಗವಾಗಿ ರೋಟರಿ ಕ್ಲಬ್ ಆಫ್ ಮೂಡಬಿದಿರೆ ಟೆಂಪಲ್ ಟೌನ್, ಜೈನ್ ಮೆಡಿಕಲ್ ಸೆಂಟರ್ ಹಾಗೂ ಫಾದರ್ ಮುಲ್ಲರ್ ಬ್ಲಡ್ ಬ್ಯಾಂಕ್ ಇದರ ಸಹಯೋಗದೊಂದಿಗೆ ಜ. 26 ರಂದು ದಿವಂಗತ ಗ್ರೇಶನ್ ರೋಡ್ರಿಗಸ್ ಇವರ ಸವಿನೆನಪಿಗಾಗಿ ರಕ್ತದಾನ ಮತ್ತು ಕೂದಲುದಾನ ಶಿಬಿರವನ್ನು ಜೈನ್ ಮೆಡಿಕಲ್ ಸೆಂಟರ್ ನಲ್ಲಿ ಹಮ್ಮಿಕೊಳ್ಳಲಾಯಿತು. ಕೊರ್ಪುಸ್ ಕ್ರಿಸ್ತಿ ಚರ್ಚ್ ನ ಧರ್ಮಗುರು ವಂದನೀಯ ಒನಿಲ್ ಡಿಸೋಜ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೊ. […]