ಕರುನಾಡ ಹಣತೆ ಕವಿ ಬಳಗದ ದ್ವಿತೀಯ ಮಹಿಳಾ ಸಮ್ಮೇಳನ; ಯುವ ಪತ್ರಕರ್ತ ಅರುಣ್ ಮಂಜುನಾಥ್ ಇವರಿಗೆ ಕಾಯಕಯೋಗಿ ಪ್ರಶಸ್ತಿ

ಹಾವೇರಿ: ಕರುನಾಡ ಹಣತೆ ಕವಿ ಬಳಗ( ರಿ) ಚಿತ್ರದುರ್ಗ ಮಹಿಳಾ ಘಟಕ ಇದರ ವತಿಯಿಂದ ದ್ವಿತೀಯ ಮಹಿಳಾ ಸಮ್ಮೇಳನ 2024 ಭಾನುವಾರ ಹಾವೇರಿಯ ಶ್ರೀ ಬಸವಕೇಂದ್ರ ಹೊಸಮಠದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನಾಡಿನ ಎಲ್ಲಾ ಜಿಲ್ಲೆಯ ಕವಿಗಳು ಭಾಗವಹಿಸಿದ್ದರು.

ಪುಸ್ತಕ ಲೋಕಾರ್ಪಣೆ, ರಾಜ್ಯ ಪ್ರಶಸ್ತಿ ಪ್ರದಾನ, ಕನ್ನಡ ಬುಕ್ ಆಫ್ ರೆಕಾರ್ಡ್ಸ್ ನ ವತಿಯಿಂದ ಶರಣ ಶರಣೆಯರ ಕುರಿತಾಗಿ ದಾಖಲೆ ಬರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತೀರ್ಥಹಳ್ಳಿಯ ಯುವ ಪತ್ರಕರ್ತ ಅರುಣ್ ಮಂಜುನಾಥ್ ಇವರಿಗೆ ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿನ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಕರುನಾಡ ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ವೇಳೆ ಸಮ್ಮೇಳನಾಧ್ಯಕ್ಷೆ ಅಮಜ್ಜವ ಬಾಳೇಶ ಭೋವಿ, ಪರಮ ಪೂಜ್ಯ ಬಸವಶಾಂತಲಿಂಗ ಸ್ವಾಮಿಜಿ, ಸಂಸ್ಥಾಪಕ ಕನಕ ಪ್ರೀತೀಶ್ , ಮಹಿಳಾ ರಾಜ್ಯಧ್ಯಕ್ಷೆ ರೇಖಾ ಶಿವರಾಮ್ ಭಟ್ ಹಾಗೂ ಕವಿ ಕುಸುಮಗಳು ಉಪಸ್ಥಿತರಿದ್ದರು.