ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದ ಹರಿಕಾರ ಮನೋಜ್‌ ಕಡಬ ಇವರಿಗೆ ಹೊರಜಿಲ್ಲಾ ಸನ್ಮಾನ

ಉಡುಪಿ: ಉಡುಪಿಯ ಮನೋಜ್‌ ಕಡಬ ಅವರು ಕನ್ನಡ ಮಾಧ್ಯಮ ಶಾಲೆ ಉಳಿಸಲು ರಾಜ್ಯಾದ್ಯಂತ ಆಂದೋಲನ ಆರಂಭಿಸಿದ್ದು ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಧಾರವಾಡದ ಡಿಕೆಎಚ್‌ ಫೌಂಡೇಶನ್‌ ಇದರ 3ನೇ ವಾರ್ಷಿಕೋತ್ಸವದಲ್ಲಿ ‘ರಾಜನಕ್ಷತ್ರ’ ಚಲನಚಿತ್ರದ ಪೋಸ್ಟರ್‌ ಬಿಡುಗಡೆ ಸಮಾರಂಭದಂದು ಸನ್ಮಾನಿಸಿ ಗೌರವಿಸಲಾಯಿತು.

ಮನೋಜ್‌ ಕಡಬ ಇವರು ಸ್ಪೋಕನ್‌ ಇಂಗ್ಲಿಷ್‌ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದ ಹರಿಕಾರರಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ಈ ಬಗ್ಗೆ ಕೆಲಸ ಮಾಡುತ್ತಿದ್ದು, ಮುಂದಿನ ವರ್ಷ ರಾಜ್ಯದಾದ್ಯಂತ ಈ ಆಂದೋಲನವನ್ನು ಹಮ್ಮಿಕೊಳ್ಳುವ ಯೋಜನೆ ಹಾಕಿಕೊಂಡಿರುವುದನ್ನು ಗುರುತಿಸಿ ಅವರನ್ನು ಗೌರವಿಸಲಾಗಿದೆ.

ಈ ಸಂದರ್ಭದಲ್ಲಿ ಶೆಫಿನ್ಸ್‌ ಟ್ರಸ್ಟ್‌ ಆಡಳಿತ ವಿಶ್ವಸ್ಥೆ ಶೆರ್ಲಿ ಮನೋಜ್‌, ಡಿಕೆಎಚ್‌ ಫೌಂಡೇಶನ್‌ ಅಧ್ಯಕ್ಷ ರಾಜನಕ್ಷತ್ರ ಚಲನಚಿತ್ರದ ನಿರ್ಮಾಪಕ ನಟ ಹಾಗೂ ಹೈಕೋರ್ಟ್‌ ವಕೀಲ ಡಾ. ಕಲ್ಮೇಶ್‌ ಹಾವೇರಿಪೇಟ, ಕಲ್ಪವೃಕ್ಷ ವುಮೆನ್‌ ಅಂಡ್‌ ರೂರಲ್‌ ಡೆವಲಪ್‌ಮೆಂಟ್‌ ಸಂಸ್ಥೆಯ ಅಧ್ಯಕ್ಷೆ ಗಿರಿಜಾ ಹಿರೇಮಠ, ಹುಬ್ಬಳ್ಳಿಯ ನೆರವು ಸಂಸ್ಥೆ ಅಧ್ಯಕ್ಷೆ ಸಾರಾ ಗೋಕಾವಿ ಮತ್ತಿತರರು ಉಪಸ್ಥಿತರಿದ್ದರು.